ಕ್ಷೀಣಿಸುತ್ತಿದೆ ಗುರುವಿಗೆ ಗೌರವ ನೀಡುವ ಮನೋಭಾವ
Team Udayavani, Apr 8, 2019, 1:58 PM IST
ಯಲಬುರ್ಗಾ: ಗುರುವಿಗೆ ಗೌರವ ನೀಡುವ ಮನೋಭಾವ ಕಡಿಮೆಯಾಗುತ್ತಿದೆ. ಜತೆಗೆ ಯವಕರಲ್ಲಿ ದೇಶ, ಭಾಷೆ, ನೆಲ, ಜಲದ ಬಗ್ಗೆ ಅಭಿಮಾನ ಕಡಿಮೆಯಾಗುತ್ತಿದ್ದು, ಇಂತಹ ಅಂಶಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಠ,
ಮಂದಿರಗಳಲ್ಲಿ ನಡೆಯುವ ಶಿವಾನುಭವ ಗೋಷ್ಠಿ ಕಾರ್ಯಕ್ರಮಗಳಿಂದ ಮಾಡಿದರೇ ಸಾಮಾಜಿಕ ಬದಲಾವಣೆ ಸಾಧ್ಯವಾಗುತ್ತದೆ ಎಂದು ತೊಳಲಿ ಕುಮಾರಸ್ವಾಮಿ ಶಾಸ್ತ್ರಿಗಳು ಹೇಳಿದರು.
ತಾಲೂಕಿನ ದಮ್ಮೂರು ಗ್ರಾಮದ ಶ್ರೀಭೀಮಾಂಬಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ನಡೆದ 299ನೇ ಮಾಸಿಕ
ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜರು ಮಣ್ಣನು ಆಳಿದರೆ, ಮಹಾತ್ಮರು ಮನಸ್ಸನ್ನು ಆಳುತ್ತಾರೆ. ಮನುಷ್ಯ ಹೂವಿನ ಹಾಗೆ ಸುಂದರ ಬದುಕು ಸಾಗಿಸಿ ಸತ್ಕಾರ್ಯಗಳ ಮೂಲಕ ಸಾರ್ಥಕತೆ ಪಡೆಯಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಆಗಿದೆ. ಕೆರೆ ಹೂಳೆತ್ತುವ, ಇಂಗು ಗುಂಡಿಗಳ ನಿರ್ಮಾಣ, ಚೆಕ್ ಡ್ಯಾಂಗಳ ನಿರ್ಮಾಣದ ಮೂಲಕ ಜಲಕ್ಷಾಮದ ನಿವಾರಣೆಗೆ ಪ್ರಯತ್ನಿಸಬೇಕಾದ ಅವಶ್ಯಕತೆ ಇದೆ. ಆ ದಿಸೆಯಲ್ಲಿ ಸರ್ವರು ಕಾರ್ಯ ಪ್ರವೃತ್ತರಾಗಿ ನಮ್ಮ ಪರಿಸರ ನೆಲ, ಜಲ, ಸಂರಕ್ಷಿಸುವಲ್ಲಿ ಪಾಲುದಾರರಾಗಬೇಕೆಂದು ಹೇಳಿದರು.
ದಮ್ಮೂರು ಶ್ರೀಮಠದ ಒಡೆಯರಾದ ಹನುಮಂತಪ್ಪಜ್ಜ ಧರ್ಮರಮಠ ಮಾತನಾಡಿ, ತಂದೆ ತಾಯಿ, ಗುರು-ಹಿರಿಯರನ್ನು, ವೃದ್ಧರನ್ನು, ಅನಾಥರನ್ನು ಪ್ರೀತಿಯಿಂದ ಕಾಣುವ ಮನುಷ್ಯರಿದ್ದ ಗ್ರಾಮ ಸುಭಿಕ್ಷೆಯಿಂದ ಇರುತ್ತದೆ. ಇಂದಿನ ಆಧುನಿಕತೆಯ ಜಗತ್ತು, ಕಾಯಕವು ಆಡಂಬರದಿಂದ ಕೂಡಿದ್ದು, ಭಕ್ತಿ, ಪೂಜೆ, ಪ್ರಸಾದ ಡಾಂಬಿಕತೆಯಿಂದ ಕೂಡಿವೆ. ತಾವು ಮಾಡುವ ಕೆಲಸವನ್ನು ಪೂಜೆ ಎಂದು, ಊಟವನ್ನು ಪ್ರಸಾದವೆಂದು ಸ್ವೀಕರಿಸಬೇಕು. ಅಂದಾಗ ನಾಡಿನ ಬಡತನ, ಧಾರಿದ್ರ್ಯ, ಮೂಢನಂಬಿಕೆ ದೂರವಾಗಿ ಆಡಂಬರದ ಬದಕು ಕೊನೆಯಾಗುತ್ತದೆ.
ಹಬ್ಬ-ಹರಿದಿನಗಳಲ್ಲಿ ಅನಾವಶ್ಯಕ ಹಣ ಖರ್ಚು ಮಾಡಿ ತಿನ್ನುವ ಆಹಾರವನ್ನು ಚೆಲ್ಲುವುದು ಸೂಕ್ತವಲ್ಲ. ಇದರ ಬದಲಾಗಿ ಬಡವರಿಗೆ ದಾನ ಮಾಡಬೇಕು ಎಂದರು. ಕಣ್ಣಿಗೆ ಕಾಣದ ಹೃದಯದಲ್ಲಿ ನೆಲೆಸಿರುವ ಜ್ಞಾನ ಪ್ರತೀಕವೇ ಗುರು, ಹೃದಯಪೂರ್ವಕವಾಗಿ ಯಾರು ಆತನನ್ನು ಆರಾಧಿಸಿ ಪೂಜಿಸುತ್ತಾರೊ ಅವರಿಗೆ ಗುರು ಕೃಪೆಯಾಗುತ್ತದೆ. ಕಾಲದ ಮೀತಿ ಅರಿತುಕೊಂಡು ಬಾಳುವ ಮೂಲಕ ಜೀವನವನ್ನು ಉನ್ನತೀಕರಿಸಿಕೊಳ್ಳಬೇಕು ಎಂದರು. ಶರಣಯ್ಯ ಹಿರೇಮಠ, ರಮೇಶ ಪೂಜಾರ್, ಬಾಲಪ್ಪ ಜರಕುಂಟಿ, ಬಸವರಾಜ ಮೇಲಸಕ್ರಿ, ಮೌನೇಶ ಬಡಿಗೇರ, ಸಂತೋಷ ಹಿರೇಮಠ, ಈರಪ್ಪ ರ್ಯಾವಣಕಿ, ಭೀಮಪ್ಪ ಜರಕುಂಟಿ, ವೀರಭದ್ರಪ್ಪ ಬಡಿಗೇರ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.