ಶಿಥಿಲಗೊಂಡಿದೆ ಸಿದ್ದಾಪುರ ಗ್ರಂಥಾಲಯ
Team Udayavani, Oct 22, 2019, 2:13 PM IST
ಸಿದ್ದಾಪುರ: ಶಿಕ್ಷಣದಲ್ಲಿ ಗ್ರಂಥಾಲಯ ತನ್ನದೇ ಆದ ಮಹತ್ವ ಪಡೆದಿದೆ. ಮನುಷ್ಯನ ಬದುಕನ್ನು ಉಜ್ವಲಗೊಳಿಸುವ ಶಕ್ತಿ ಗ್ರಂಥಾಲಯಕ್ಕಿದೆ. ಉತ್ತಮ ವ್ಯಕ್ತಿಯಾಗಿ, ಶಕ್ತಿಯಾಗಿ ಬೆಳೆಯಲು ಮತ್ತು ಜ್ಞಾನವನ್ನು ಕಟ್ಟಿಕೊಳ್ಳುವುದರ ಜೊತೆಗೆ ಬದುಕಿನ ದಾರಿಗಳನ್ನು ಹುಡುಕಲು ಗ್ರಂಥಾಲಯಗಳು ಅವಶ್ಯ.
ಆದರೆ ಇದಕ್ಕೆ ತದ್ವಿರುದ್ಧವಾಗಿದೆ ಸಿದ್ದಾಪುರ ಗ್ರಾಮ ಪಂಚಾಯತ್ ಆವರಣದಲ್ಲಿರುವ ಸಾರ್ವಜನಿಕ ಗ್ರಂಥಾಲಯ. ಇದು ಹೆಸರಿಗಷ್ಟೇ ಎನ್ನುವಂತಾಗಿದ್ದು, ಈ ಗ್ರಂಥಾಲಯದಲ್ಲಿ ಓದುಗರಿಗೆ ಕೆವಲ ಎರಡು ಪತ್ರಿಕೆ, ಕೆಲವೊಂದಿಷ್ಟು ಪುಸ್ತಕ ಬಿಟ್ಟರೆ, ಜ್ಞಾನಾರ್ಜನೆಗೆ ಯಾವುದೂ ಪುಸ್ತಕ ಸಿಗುವುದೇ ಇಲ್ಲ.
ಇದು ಸಿದ್ದಾಪುರ ಹೊಬಳಿ ಕೇಂದ್ರ ಸ್ಥಾನವಗಿರುವ ಸುಮಾರು 20 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಚಿಕ್ಕ ಕೊಠಡಿಯಲ್ಲಿರುವ ಸಾರ್ವಜನಿಕ ಗ್ರಂಥಾಲಯದ ಸ್ಥಿತಿ ಗತಿ. ಕಳೆದ 30 ವರ್ಷಗಳ ಹಿಂದೆ 10*20 ಅಳತೆಯ ಚಿಕ್ಕ ಕೊಠಡಿಯಲ್ಲಿ ಗ್ರಂಥಾಲಯ ಆರಂಭವಾಗಿದ್ದು. ಮೂರು ದಶಕ ಕಳೆದರು ಇಲ್ಲಿಯವರೆಗೂ ಸುಣ್ಣಬಣ್ಣವನ್ನೇ ಕಂಡಿಲ್ಲ.
ಹಳೆಯ ಕಟ್ಟಡ: ಕಟ್ಟಡದ ಕೆಲ ಭಾಗದ ಗೊಡೆಗಳಲ್ಲಿಯ ಕಲ್ಲುಗಳು ಆಗಾಗ ಕಿತ್ತು ಬರುತ್ತಿದ್ದು, ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಈಗೋ, ಆಗೋ ಬೀಳುವ ಹಂತದಲ್ಲಿದ್ದರೂ ಓದುಗರು ಜೀವ ಭಯದಲ್ಲೇ ಇಲ್ಲಿ ಕುಳಿತುಕೊಳ್ಳುವ ದುಸ್ಥಿತಿ ಬಂದಿದೆ. ಮಳೆಗೆ ಪುಸ್ತಕ ಹಾಳು: ಗ್ರಂಥಾಲಯದ ಮೇಲ್ಛಾವಣಿ ಸಿಮೆಂಟ್ ಶೀಟ್ ಹೊಂದಿದ್ದು, ಬಹುತೇಕ ಸಿಮೆಂಟ್ ಶೀಟ್‌ಗಳು ಒಡೆದು ಹೋಗಿರುವ ಪರಿಣಾಮ ಮಳೆ ಬಂದಾಗ ಗ್ರಂಥಾಲಯದೊಳಗೆ ನೀರು ತುಂಬುತ್ತದೆ. ಮಳೆ ನೀರಿನಿಂದಾಗಿ ಸಾವಿರಾರು ಪುಸ್ತಕಗಳು ನೀರ ನೆನೆದು ಹಾಳಾಗಿವೆ. ಜ್
ಮೂಲ ಸೌಕರ್ಯ ವಂಚಿತ: ಗ್ರಂಥಾಲಯದಲ್ಲಿ ಕುಳಿತುಕೊಳ್ಳುವುದಕ್ಕೆ ಸರಿಯಾದ ಆಸನ ವ್ಯವಸ್ಥೆ ಇಲ್ಲ, ಫ್ಯಾನ್, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ ಇಲ್ಲ. ಬರುವ ಎರಡು ಪತ್ರಿಕೆಗಳಿಗೆ ಜನರೂ ಸರತಿಯಲ್ಲಿ ನಿಂತು ಓದಿಕೊಳ್ಳಬೇಕು. ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲವಾಗುವಂತಹ ಎಲ್ಲ ಕನ್ನಡ, ಆಂಗ್ಲ ಪತ್ರಿಕೆಗಳು ಮತ್ತು ಪುಸ್ತಕಗಳು ಇಲ್ಲಿ ಲಭ್ಯವಿಲ್ಲ. ಆದ ಕಾರಣ ವಿದ್ಯಾರ್ಥಿಗಳು ಈ ಗ್ರಂಥಾಲಯದತ್ತ ತಲೆಯೂ ಹಾಕಲ್ಲ. ಅಷ್ಟೇ ಅಲ್ಲದೇ ಈಗಿರುವ ಪುಸ್ತಕಗಳನ್ನು ಇಟ್ಟುಕೊಳ್ಳುವುದಕ್ಕೆ ಜಾಗವಿಲ್ಲ. ದೊಡ್ಡದಾದ ರಟ್ಟಿನ ಬಾಕ್ಸ್‌ನಲ್ಲಿ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಡಲಾಗಿದೆ. ಓದುಗರು ಸಂತೆಯಲ್ಲಿ ಯಾವ ರೀತಿ ಕಾಯಿಗಡ್ಡೆ ಕೊಳ್ಳುತ್ತಾರೋ ಅದೆ ರೀತಿಯಲ್ಲಿ ರಟ್ಟಿನ ಬಾಕ್ಸ್‌ಗಳಲ್ಲಿರುವ ಮತ್ತು ಪ್ಲಾಸ್ಟಿಕ್ ಚೀಲದಲ್ಲಿರುವ ಪುಸ್ತಕಗಳನ್ನು ಆಯ್ದುಕೊಂಡು ಓದಬೇಕಾದ ಅನಿವಾರ್ಯತೆ ಇದೆ.
ನಮಗೆ ಪ್ರತಿಕೆಗೆ ಅಂತಾ ತಿಂಗಳಿಗೆ 400 ರೂ. ಬರುತ್ತೆ ಅಷ್ಟೇ, ಮೊದಲಿಗೆ 3 ಪತ್ರಿಕೆ ಬರುತ್ತಿದ್ದವು ಈಗ ಎರಡು ಪತ್ರಿಕೆ ಅಷ್ಟೇ
ಬರುತ್ತಿವೆ. ವರ್ಷಕ್ಕೊಮ್ಮೆ ನೂರಾರು ಜನರಲ್ ನಾಲೆಜ್ ಪುಸ್ತಗಳು ಬರುತ್ತವೆ. ಅಷ್ಟು ಬಿಟ್ರೆ ಮತ್ಯಾವುದೇ ಪುಸ್ತಕ ಬರುವುದಿಲ್ಲ. ಪುಸ್ತಗಳನ್ನು ಇಟ್ಟುಕೊಳ್ಳುವುಕ್ಕೆ ಜಾಗವಿಲ್ಲ. – ಖಾಜಪ್ಪ, ಗ್ರಂಥಪಾಲಕ
-ಸಿದ್ದನಗೌಡ ಹೊಸಮನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.