ಅಜ್ಜನ ಜಾತ್ರೆಗೆ ಭಕ್ತ ಮಹಾ ಸಾಗರ
Team Udayavani, Jan 6, 2018, 3:56 PM IST
ಕೊಪ್ಪಳ: ಬುಧವಾರ ಸಂಜೆ ಸೂರ್ಯನು ಇಳಿಜಾರಿನತ್ತ ಸಾಗುವ ಹೊತ್ತಿಗೆ ಹೊತ್ತಿಗೆ ಗವಿಸಿದ್ದೇಶ್ವರ ಮಹಾ ರಥೋತ್ಸವ ಲಕ್ಷ ಲಕ್ಷ ಭಕ್ತ ಸಾಗರದ ಮಧ್ಯೆ ಸಾಂಗವಾಗಿ ಸಾಗಿತು. ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ರಥೋತ್ಸವಕ್ಕೆ ಚಾಲನೆ ನೀಡಿ ಲಕ್ಷಾಂತರ ಭಕ್ತ ಸಾಗರ ನೋಡಿ ಮೂಕ ವಿಸ್ಮಿತರಾಗಿ ಜ್ಜನ ಮಹಾ ಮಹಿಮೆ ಬಗ್ಗೆ ಕೊಂಡಾಡಿದರು.
ಕಳೆದ ನಾಲ್ಕು ವರ್ಷಗಳಿಂದ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ಅವರು ನನ್ನನ್ನು ಗವಿಸಿದ್ದೇಶ್ವರ ಜಾತ್ರೆಗೆ ಆಹ್ವಾನ ನೀಡುತ್ತಿದ್ದರು. ಆದರೆ ಇಂದು ಆ ಘಳಿಗೆ ಕೂಡಿಬಂದಿದೆ. ಇದು ಸ್ವರ್ಗದಲ್ಲಿ ನಡೆಯುವಂತಹ ಮಹೋತ್ಸವ ಎಂದೆನಿಸುತ್ತದೆ. ನನ್ನ 80 ವರ್ಷದಲ್ಲಿಯೇ ಇಂತಹ ಲಕ್ಷಾಂತರ ಭಕ್ತ ಸಾಗರದ ಮಧ್ಯೆ ಸಾಗುವ ರಥೋತ್ಸವವನ್ನು ನಾನು ಜನ್ನ ಜೀವನದಲ್ಲಿಯೇ ನೋಡಿಲ್ಲ ಇದು ನನ್ನ ಪುಣ್ಯವೇ ಸರಿ ಎಂದರು.
ಸಂಸ್ಥಾನ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಮಾತನಾಡಿ ಕತ್ತಲೆಯನ್ನು ಕೋಣೆಯಲ್ಲಿ ಕೂಡಿಟ್ಟರೆ ಹೋಗಲ್ಲ. ಕಟ್ಟಿಗೆಯಿಂದ ಹೊಡೆದೋಡಿಸಿದರೂ ಹೋಗಲ್ಲ. ಆದರೆ ಒಂದು ದೀಪ ಬೆಳಗುವ ಮೂಲಕ ಎಂತಹ ಕತ್ತಲೆಯನ್ನಾದರೂ ಓಡಿಸಬಹುದು. ಮನುಷ್ಯನ ಬದುಕಿನಲ್ಲಿ ಕತ್ತಲೆಯನ್ನೂ ದೂರವಾಗಿಸಿ, ಜೀವನ ಬೆಳಗಿಸುವ ಕೆಲಸ ಮಾಡಬೇಕು ಎಂದು ನುಡಿದರು.
ಜಗತ್ತಿನಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದು ಎರಡೂ ಇವೆ. ಕೆಟ್ಟದ್ದನ್ನೇ ದೂಷಿಸುತ್ತಾ ಕುಳಿತರೆ ಯಾವುದೇ ಬೆಳವಣಿಗೆ ಕಾಣಲ್ಲ. ಬದಲಿಗೆ ಒಳ್ಳೆಯ ಮಾತನ್ನಾಡುವ ಮೂಲಕ ಒಳ್ಳೆಯ ಕೆಲಸ ಮಾಡುವ ಮೂಲಕ ಜಗತ್ತನ್ನು ಉದ್ದಾರ ಮಾಡಬಹುದಾಗಿದೆ. ನಮ್ಮ ಜೀವನದಲ್ಲಿ ಉತ್ತಮ ವಿಚಾರ ಅಳವಡಿಸಿಕೊಳ್ಳಬೇಕು ಎಂದರು.
ನಮ್ಮ ಜೀವನ ಪವಿತ್ರವಾಗಲು ಕಾಶಿಗೆ ಹೋಗಿ ಗಂಗೆಯಲ್ಲಿ ಸ್ನಾನ ಮಾಡಿದರೆ ನಮ್ಮ ದೇಹದ ಮೈಲಿಗೆ ಹೋಗುವುದೇ ವಿನಃ ನಮ್ಮ ಮನಸ್ಸಿನ ಮೈಲಿಗೆ ಹೋಗುವುದಿಲ್ಲ. ನಮ್ಮ ಜೀವನ ಪವಿತ್ರವಾಗಲು ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಬೇಕು ಹಾಗೂ ಇನ್ನೊಬ್ಬರ ಮನೆ ಮುರಿದು ಮೋಸ ಮಾಡುವ ಕೆಲಸವನ್ನು ಕೈ ಬಿಟ್ಟರೆ ನಮ್ಮ ಜೀವನ ಸಾರ್ಥಕವಾಗಲಿದೆ.
ಮನುಷ್ಯ ಈ ಎರಡು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ವರ್ಷದಿಂದ ವರ್ಷಕ್ಕೆ ಗವಿಸಿದ್ದೇಶ್ವರನ ಜಾತ್ರೋತ್ಸವಕ್ಕೆ ಭಕ್ತರು ಬರುವ ಸಂಖ್ಯೆ ಹೆಚ್ಚಾಗುತ್ತಿದೆ.
ಮಠದ ಭಕ್ತರಿಗೆ ಇದು ನಮ್ಮ ಮಠ ಎಂಬ ಭಾವನೆ ಇರುತ್ತದೆಯೋ ಅಲ್ಲಿಯವರೆಗೂ ಮಠ ಬೆಳೆಯುತ್ತದೆ. ಮಠದ ಬಗೆಗಿನ ಯಾವುದೇ ಸುಳ್ಳು ವದಂತಿಗಳಿಗೆ ಕಿವಿಕೊಡಬಾರದು ಎಂದು ಭಕ್ತರಿಗೆ ಮನವಿ ಮಾಡಿದ್ದಲ್ಲದೇ 2019ರ ಜಾತ್ರೆಗೆ ಭಕ್ತ ಸಮೂಹಕ್ಕೆ ಮತ್ತೆ ಆಹ್ವಾನ ನೀಡಿದರು.
ಲಕ್ಷಾಂತರ ಭಕ್ತರ ಉದ್ಘೋಷ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಲಕ್ಷಾಂತರ ಭಕ್ತರು ಅಜ್ಜನ ಜಾತ್ರೆಯ ಮಹಾರಥೋತ್ಸವ ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಸಂಜೆಯಾಗುತ್ತಿದ್ದಂತೆ ಶ್ರೀ ಗವಿಸಿದ್ಧೇಶ್ವರ ಮಹಾರಾಜ್ ಕೀ ಜೈ ಎನ್ನುವ ಉದ್ಘೋಷದೊಂದಿಗೆ ತೇರನ್ನು ಪಾದಗಟ್ಟೆಯವರೆಗೆ ಭಕ್ತಿ ಭಾವದಿಂದ ಎಳೆದರು.
ಗವಿಸಿದ್ಧೇಶ್ವರ ಪ್ರೌಢಶಾಲೆ, ವಸತಿ ಗೃಹ, ಕಾಲೇಜಿನ ಆವರಣದಲ್ಲಿ ಮಹಿಳೆಯರು, ಮಕ್ಕಳು ಜಮಾಯಿಸಿದ್ದರು. ಸುತ್ತಮುತ್ತಲಿನ ಕಟ್ಟಡಗಳ ಮೇಲೂ ಜನಜಂಗುಳಿ ಇತ್ತು. ತೇರು ಪಾದಗಟ್ಟೆಯವರೆಗೆ ಹೊರಡುತ್ತಿದ್ದಂತೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಮುಂಜಾಗ್ರತಾ ಕ್ರಮವಾಗಿ ಮಠದ ಸುತ್ತಮುತ್ತ ಸುಮಾರು 1 ಕಿ.ಮೀ.ವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.