ಗಂಗಾವತಿ: ಸರ್ವರ್ ತೊಂದರೆ ಪಡಿತರ ಅಕ್ಕಿ ಪಡೆಯಲು ಪರದಾಟ
Team Udayavani, Sep 26, 2022, 2:29 PM IST
ಗಂಗಾವತಿ: ಸಾರ್ವಜನಿಕ ಪಡಿತರ ದವಸ ಧಾನ್ಯ ವಿತರಿಸುವ ಆಹಾರ ಇಲಾಖೆಯ ಸರ್ವರ್ ತಾಂತ್ರಿಕ ತೊಂದರೆಯ ಕಾರಣ ಪಡಿತರ ವಿತರಣೆ ವಿಳಂಬವಾಗುತ್ತಿದೆ .ಎರಡರಿಂದ 3ತಾಸು ಸರ್ವರ್ ಬಾರದೇ ಇರುವುದರಿಂದ ಪಡಿತರ ಗ್ರಾಹಕರಿಗೆ ಕೂಪನ್ ನೀಡಲು ನ್ಯಾಯಬೆಲೆ ಅವರು ಸಂಕಷ್ಟ ಎದುರಿಸುತ್ತಿದ್ದಾರೆ.
ಕಳೆದ 2 ತಿಂಗಳಿಂದ ಈ ತೊಂದರೆಯಾಗಿದ್ದು ಆಹಾರ ಪಡಿತರ ವಿತರಣೆ ವಿಳಂಬವಾಗುತ್ತಿದೆ .ಪ್ರತಿ ನ್ಯಾಯಬೆಲೆ ಅಂಗಡಿ ಮುಂದೆ ತಾಸುಗಟ್ಟಲೆ ಕಾಯುವ ಸ್ಥಿತಿ ಪಡಿತರ ಕಾರ್ಡುದಾರರಿಗೆ ಉಂಟಾಗಿದೆ. ಪಡಿತರ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಡಿತರಗಳನ್ನು ಹೊಂದಾಣಿಕೆ ಮಾಡಿ ಪಡಿತರ ಕಾರ್ಡುದಾರರಿಗೆ ವಿತರಣೆ ಮಾಡಬೇಕಾಗಿದೆ.ಇದರಿಂದ ಸರ್ವರ್ ಮತ್ತು ಓಟಿಪಿ ತೊಂದರೆ ಉಂಟಾಗಿದ್ದು ಇದನ್ನು ಸರಿಪಡಿಸಬೇಕಾದ ಎನ್ ಐಸಿ ನಿರ್ಲಕ್ಷ್ಯ ವಹಿಸಿದೆ.
ಪಡಿತರ ವಿತರಣೆ ಕುರಿತು ಈಗಾಗಲೇ ಇತ್ತೀಚೆಗೆ ಮುಕ್ತಾಯವಾದ ವಿಧಾನಮಂಡಲದ ಅಧಿವೇಶನದಲ್ಲೂ ಚರ್ಚೆಯಾಗಿದ್ದು ಆಹಾರ ಇಲಾಖೆಯ ಸರ್ವರ್ ತೊಂದರೆ ನೀಗಿಸುವ ಕುರಿತು ಸರ್ಕಾರ ಯಾವುದೇ ಕೆಲಸ ಮಾಡುತ್ತಿಲ್ಲ ಎಂದುಆಡಳಿತ ಮತ್ತು ವಿಪಕ್ಷಗಳ ಶಾಸಕರು ಸರ್ಕಾರದ ಗಮನ ಸೆಳೆದಿದ್ದರು.
ಗ್ರಾಮೀಣ ಮತ್ತು ನಗರ ಭಾಗದಲ್ಲಿ ಕೂಲಿ ಕೆಲಸಕ್ಕೆ ತೆರಳದೆ ಪಡಿತರ ಪಡೆಯಲು ದಿನಗಟ್ಟಲೆ ಕಾಯುವ ಸ್ಥಿತಿ ಸಾರ್ವಜನಿಕರಿಗೆ ಉಂಟಾಗಿದೆ ಸರಕಾರ ಕೂಡಲೇ ಕ್ರಮ ಕೆಗೊಂಡು ಪಡಿತರ ವಿತರಣೆಯ ಸರ್ವರ್ ದುರಸ್ತಿ ಕಾರ್ಯ ಮಾಡಬೇಕಿದ್ದು ಪಡಿತರವನ್ನು ಪಡೆಯುವ ವ್ಯವಸ್ಥೆಯನ್ನು ಸರಳಗೊಳಿಸಬೇಕಾಗಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ .
ತೊಂದರೆ ಕುರಿತು ಸರ್ಕಾರಕ್ಕೆ ಪತ್ರ: ಸರ್ವರ್ ತೊಂದರೆ ಪರಿಣಾಮ ಸಾರ್ವಜನಿಕರಿಗೆ ಪಡಿತರ ವಿತರಣೆಯ ತೊಂದರೆ ಕುರಿತು ಈಗಾಗಲೇ ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ನೀಡಲಾಗಿದೆ ಶೀಘ್ರವೇ ತಾಂತ್ರಿಕ ಸರಿಪಡಿಸಿ ಸರ್ವರ್ ಸರಳವಾಗಿ ಸುಲಭವಾಗಿ ಪಡಿತರದಾರರಿಗೆ ಆಹಾರ ಪಡಿತರಗಳು ಸಿಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಇಲಾಖೆಯ ಕೊಪ್ಪಳ ಜಿಲ್ಲಾ ಉಪನಿರ್ದೇಶಕ ಮಲ್ಲಿಕಾರ್ಜುನ್ ಉದಯವಾಣಿಗೆ ತಿಳಿಸಿದ್ದಾರೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.