ತುಂಗಭದ್ರಾ ಎಡದಂಡೆ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ನದಿ ಪಾಲು
Team Udayavani, Mar 10, 2022, 11:26 AM IST
ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆ ಮುನಿರಾಬಾದ್ ಹತ್ತಿರ ಇರುವ ಪವರ್ ಹೌಸ್ ಬಳಿ ಕಾಲುವೆ ಒಡೆದ ಪರಿಣಾಮ ಕಾಲುವೆಯ ಅಪಾರ ಪ್ರಮಾಣದ ನೀರು ನದಿಯನ್ನು ಸೇರಿದೆ.
ಗುರುವಾರ ಬೆಳಗಿನ ಜಾವ ಕಾಲುವೆ ಒಡೆದಿದ್ದು ಕಾಲುವೆಯಲ್ಲಿ ಸುಮಾರು 4 ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿತ್ತು. ಅಪಾರ ಪ್ರಮಾಣದ ನೀರು ನದಿಯ ಪಾಲಾಗಿದ್ದು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈ 1ತಿಂಗಳ ಹಿಂದೆ ಗಂಗಾವತಿ ತಾಲ್ಲೂಕಿನ ಕೇಸರಹಟ್ಟಿ ಹತ್ತಿರ ಕಾಲುವೆ ಒಡೆದು ಸುಮಾರು ವಾರ ಕಾಲ ಕಾಲುವೆಯಲ್ಲಿ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು. ಇದೀಗ ಪುನಃ ಗುರುವಾರ ಬೆಳಗಿನ ಜಾವ ಮುನಿರಾಬಾದ್ ಪವರ್ ಹೌಸ್ ಹತ್ತಿರ ಕಾಲುವೆಯ ಪಕ್ಕದಲ್ಲಿ ಬೆಳೆದಿರುವ ಗಿಡ ಮರಗಳ ಬೇರುಗಳಿಂದ ಕಾಲುವೆಯಲ್ಲಿ ಬಿರುಕು ಕಾಣಿಸಿಕೊಂಡು ಸಣ್ಣ ಪ್ರಮಾಣದ ನೀರು ಸೋರಿಕೆಯಾಗಿದ್ದು ಕಾಲುವೆ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ನದಿಯ ಪಾಲಾಗಿದೆ.
ತುಂಗಭದ್ರಾ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದಲ್ಲಿ ನಾಲ್ಕರಿಂದ 5ಲಕ್ಷ ಎಕರೆ ಪ್ರದೇಶದಲ್ಲಿ ಬೇಸಿಗೆ ಹಂಗಾಮಿನ ಭತ್ತವನ್ನು ನಾಟಿ ಮಾಡಲಾಗಿದ್ದು ಮೇಲ್ಭಾಗದ ರೈತರ ಗದ್ದೆಗಳಲ್ಲಿ ಭತ್ತ ತೆನೆ ಹಾಲು ಒಡೆಯುವ ಹಂತದಲ್ಲಿರುವಾಗ ಕಾಲುವೆ ಒಡೆದಿದ್ದು ಇದರಿಂದ ದುರಸ್ತಿಗಾಗಿ ಸುಮಾರು ಹತ್ತು ದಿನಗಳ ಕಾಲ ಕಾಲುವೆಯನ್ನು ಬಂದ್ ಮಾಡುವ ಸಾಧ್ಯತೆಯಿದ್ದು ರೈತರಿಗೆ ಇದರಿಂದ ತೊಂದರೆಯಾಗಿದೆ.
ಇದನ್ನೂ ಓದಿ:ಅಡಕೆ ಕಳ್ಳತನದ ಜಾಲ ಪತ್ತೆ: ನಾಲ್ವರು ಆರೋಪಿಗಳು ವಶಕ್ಕೆ
ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ
ತುಂಗಭದ್ರಾ ಎಡದಂಡೆ ಕಾಲುವೆ ಮುನಿರಾಬಾದ್ ಹತ್ತಿರ ಒಡೆದಿದ್ದು ಮರಗಳ ಬೇರು ಕಾಲುವೆಯ ಬುಡದಲ್ಲಿ ಹೋಗಿ ಸ್ವಲ್ಪ ಪ್ರಮಾಣದ ನೀರು ಸೋರಿಕೆಯಾಗಿ ಇದೀಗ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಹರಿದು ಹೋಗಿದ್ದು ಕೂಡಲೇ ಡ್ಯಾಂನಲ್ಲಿ ಕಾಲುವೆ ನೀರು ಹರಿಸುವುದನ್ನು ಬಂದ್ ಮಾಡಲಾಗಿದ್ದು ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ಮಾಡಿ ಒಂದೆರಡು ದಿನದಲ್ಲಿ ಕಾಲುವೆಗೆ ನೀರು ಹರಿಸಲಾಗುತ್ತದೆ ಅಚ್ಚುಕಟ್ಟು ಪ್ರದೇಶದ ರೈತರು ಯಾವುದೇ ಆತಂಕಕ್ಕೆ ಒಳಗಾಗದಂತೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ (ಕಾಡಾ) ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಉದಯವಾಣಿ ಜತೆ ಮಾತನಾಡಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.