ಜಿಲ್ಲೆಯಲ್ಲಿ 11,474 ಎಚ್‌ಐವಿ ಸೋಂಕಿತರು
Team Udayavani, Nov 30, 2019, 3:17 PM IST
ಕೊಪ್ಪಳ: ಎಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಈ ಹಿಂದೆ ರಾಜ್ಯದಲ್ಲಿ ಮುಂಚೂಣಿ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೊಪ್ಪಳ ಜಿಲ್ಲೆಯೂ ಕ್ರಮೇಣ ಇಳಿಮುಖವಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ 11,474 ಜನರಲ್ಲಿ ಎಚ್‌ಐವಿ ಸೋಂಕಿದ್ದು, ಅವರೆಲ್ಲರೂ ವಿವಿಧ ಹಂತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಡ್ಸ್ ನಿಯಂತ್ರಣ ಘಟಕವೂ ವಿವಿಧ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ.
ಆದರೂ ಗಡಿ ಭಾಗದಲ್ಲಿ ಸ್ವಲ್ಪಪ್ರಮಾಣದಲ್ಲಿ ಹೆಚ್ಚಾಗಿ ಏಡ್ಸ್ ಕಾಣಿಸಿಕೊಳ್ಳಲಾರಂಭಿಸಿದೆ. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಡಿಯ ಏಡ್ಸ್ ತಡೆಗಟ್ಟುವಿಕೆ ಮತ್ತುನಿಯಂತ್ರಣ ಘಟಕವು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೊದಲೆಲ್ಲ ಮನೆ ಮನೆಗೆ ತೆರಳಿ ರಕ್ಷ ಪರೀಕ್ಷೆ ನಡೆಸಿ ಸೋಂಕು ಇರುವ ಬಗ್ಗೆ ಪತ್ತೆ ಹಚ್ಚಲಾಗುತ್ತಿತ್ತು. 2002-2019ರ ವರೆಗೂ ಜಿಲ್ಲೆಯಲ್ಲಿ 4,16,513 ಜನರ ರಕ್ಷ ಪರೀಕ್ಷೆ ಮಾಡಲಾಗಿದೆ.
ಇವರಲ್ಲಿ 14,855 ಜನರಲ್ಲಿ ಎಚ್‌ಐವಿ ಇರುವುದು ಪತ್ತೆ ಮಾಡಲಾಗಿದೆ. ಆದರೆ ಇದರಲ್ಲೇ 3381 ಜನರುವಿವಿಧ ಕಾರಣಗಳಿಂದ ನಿಧನರಾಗಿದ್ದಾರೆ. ಕಳೆದ 16 ವರ್ಷದಲ್ಲಿ 2,00,203 ಪುರುಷರ ರಕ್ತಪರೀಕ್ಷೆ ನಡೆಸಿದ್ದು, ಅವರಲ್ಲಿ 7736 ಜನರಿಗೆ ಸೋಂಕಿದ್ದರೆ, 2,15,836 ಮಹಿಳೆಯರ ರಕ್ತ ಪರೀಕ್ಷೆ ನಡೆಸಿದ್ದು, 7,097 ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಳಗೆ 22 ಜನ ಲೈಂಗಿಕ ಅಲ್ಪಸಂಖ್ಯಾತರಲ್ಲೂ ಸೋಂಕು ಇರುವುದು ಪತ್ತೆಯಾಗಿದೆ.
35-49 ವಯಸ್ಸಿನವರಲ್ಲಿ ಹೆಚ್ಚು: ಜಿಲ್ಲೆಯಲ್ಲಿ 35-49 ವಯಸ್ಸಿನೊಳಗಿನ ಜನರಲ್ಲಿ ಹೆಚ್ಚು ಎಚ್‌ಐವಿ ಸೋಂಕು ಇರುವುದುಬೆಳಕಿಗೆ ಬರುತ್ತಿದೆ. ಬಹುಪಾಲು ಇವರೇ ಅಸುರಕ್ಷಿತ ಲೈಂಗಿಕತೆಯಲ್ಲಿ ತೊಡಗುವುದರಿಂದ ಏಡ್ಸ್ ಬರುತ್ತಿದೆ. 2015-16ರಲ್ಲಿ 275 ಜನರಲ್ಲಿ ಕಾಣಿಸಿಕೊಂಡರೆ, 2016-17ರಲ್ಲಿ 281, 2017-18ರಲ್ಲಿ282, 2018-19ರಲ್ಲಿ 235, 2019-2020ರಲ್ಲಿ 110 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಇನ್ನೂ ತಾಯಿಯಿಂದ ಮಕ್ಕಳಿಗೆ ಬಂದಿರುವ ಸೋಂಕಿನ ಪೈಕಿ 14 ವರ್ಷದೊಳಗಿನ ಮಕ್ಕಳಲ್ಲಿ ಕಡಿಮೆ ಪ್ರಮಾಣದಲ್ಲಿದ್ದರೆ 15-24 ವರ್ಷದೊಳಗಿನ ಯುವಕರಲ್ಲಿ ಸ್ವಲ್ಪ ಪ್ರಮಾಣವಿದ್ದರೆ, 50 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿನ ಈ ಹಿಂದಿನ ಅಂಕಿ- ಅಂಶಗಳನ್ನು ಅವಲೋಕಿಸಿದಾಗ ಏಡ್ಸ್ ಸೋಂಕಿತ ರೋಗಿಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು ಸ್ವಲ್ಪ ಸಮಾಧಾನದ ಸಂಗತಿಯಾಗಿದೆ. ಆದರೂ ಇನ್ನೂ ಹೆಚ್ಚಿನ ಮಟ್ಟದ ಜಾಗೃತಿ ಮೂಡಿಸಿದ್ದೇಆದಲ್ಲಿ ಸೋಂಕಿನ ಪ್ರಮಾಣ ಇನ್ನಷ್ಟು ಕಡಿಮೆ ಮಾಡಬಹುದಾಗಿದೆ.
ಗಡಿ ಭಾಗದಲ್ಲಿ ಜಾಗೃತಿಗೆ ಒತ್ತು : ಪ್ರಸ್ತುತ ದಿನದಲ್ಲಿ ಕೊಪ್ಪಳ ಜಿಲ್ಲೆಯ ಜನರು ಗುಳೆ ಹೋಗಿ ದುಡಿಮೆ ಮಾಡಿಕೊಂಡು ಪುನಃಊರುಗಳತ್ತ ಆಗಮಿಸುತ್ತಿದ್ದಾರೆ. ಅಂತವರ ರಕ್ತ ಪರೀಕ್ಷೆಯನ್ನೂ ಮಾಡಲಾಗುತ್ತಿದೆ. ಆದರೆ ಕೊಪ್ಪಳ ಜಿಲ್ಲೆಯು ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಗಡಿಭಾಗವಾಗುವುದರಿಂದ ಬಾಗಲಕೋಟೆ ರಾಜ್ಯದಲ್ಲಿಯೇ ಹೆಚ್ಚಿನ ಎಚ್‌ಐವಿ ಸೋಂಕಿತರು ಇರುವ ಜಿಲ್ಲೆಯಾಗಿದೆ. ಹಾಗಾಗಿ ಕುಷ್ಟಗಿ ತಾಲೂಕಿನ ಹನುಮಸಾಗರ, ಹೂಲಗೇರಿ ಭಾಗದಲ್ಲಿ ಪ್ರಸಕ್ತ ವರ್ಷ ಎಚ್‌ಐವಿ ಸೋಂಕಿನ ಪ್ರಮಾಣ ಹೆಚ್ಚಾಗಿ ಕಂಡು ಬಂದಿದೆ. ಈ ಭಾಗದ ಜನರಿಗೆ ಬಾಗಲಕೋಟೆ ಹತ್ತಿರವಾಗುವುದರಿಂದ ಅಲ್ಲಿಗೆ ದುಡಿಮೆ ಮಾಡಲು ತೆರಳುತ್ತಿದ್ದು, ಅಲ್ಲಿಯೇ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ ಪ್ರಸಕ್ತ ವರ್ಷ ಜಿಲ್ಲಾಮಟ್ಟದ ಏಡ್ಸ್ ನಿಯಂತ್ರಣ ಕಾರ್ಯಕ್ರಮವನ್ನು ಕುಷ್ಟಗಿ ತಾಲೂಕು ಕೇಂದ್ರದಲ್ಲಿ ಆಯೋಜನೆಗೆ ರೂಪುರೇಷ ಸಿದ್ಧಗೊಳಿಸಿದೆ.
ಕೊಪ್ಪಳ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ 34,644 ಜನರ ರಕ್ಷ ತಪಾಸಣೆ ಮಾಡಿದಾಗ 256 ಜನರಲ್ಲಿ ಎಚ್‌ಐವಿ ಸೋಂಕು ಇರುವುದು ಕಂಡು ಬಂದಿದೆ. ಕಳೆದ ಕೆಲವು ವರ್ಷಗಳ ಅಂಕಿ ಅಂಶಗಳಿಗೆಹೋಲಿಸಿದರೆ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. –ಡಾ| ಮಹೇಶ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ
-ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.