ಎಡದಂಡೆ, ವಿಜಯನಗರ ಕಾಲುವೆಗಳಿಗೆ ಏ.10ರ ತನಕ ನೀರು: ಶಾಸಕ ಪರಣ್ಣ
Team Udayavani, Nov 23, 2019, 6:54 PM IST
ಗಂಗಾವತಿ: ತುಂಗಭದ್ರಾ ಡ್ಯಾಂ ಅಚ್ಚುಕಟ್ಟು ಪ್ರದೇಶದ ರೈತರ ಬೇಸಿಗೆ ಬೆಳೆಗೆ ಏ.10ರ ತನಕ ನೀರು ಹರಿಸಲಾಗುತ್ತದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಈ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರು ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಸಿಗೆಯಲ್ಲಿ 100-120ದಿನಕ್ಕೆ ಭತ್ತದ ಬೆಳೆಗೆ ನೀರು ಬಿಡಲಾಗುತ್ತದೆ. ರೈತರು ಯಾರ ಮಾತನ್ನು ಕೇಳಬಾರದು ಕಾಲುವೆ ನೀರು ಹರಿಸುವ ಕುರಿತು ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗುತ್ತದೆ.
ಈ ವಿಚಾರದಲ್ಲಿ ರೈತರು ಆತಂಕಪಡಬಾರದು ಮತ್ತು ಜಲಾಶಯದಲ್ಲಿರುವ ನೀರನ್ನು ಕಳ್ಳತನ ಮಾಡಲು ಯಾರಿಗೂ ಅವಕಾಶವಿಲ್ಲ ಈ ನಿಟ್ಟಿನಲ್ಲಿ ಸರಿಯಾದ ಲೆಕ್ಕ ಇಡಲಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ತುಂಗಭದ್ರಾ ಮಂಡಳಿಯನ್ನು ರದ್ದು ಮಾಡುವ ಕುರಿತಾದಂತೆ ರೈತರಿಂದ ಒತ್ತಾಯ ಕೇಳಿಬರುತ್ತಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಹಾಗೂ ಸಚಿವರ ಜತೆ ಚರ್ಚೆ ನಡೆಸಲಾಗುತ್ತದೆ ಎಂದವರು ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿನೀಲಪ್ಪ, ಸದಸ್ಯ ಶರಣೇಗೌಡ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.