ಲಂಚ ಪಡೆದವರಿಗೆ ಶಿಕ್ಷೆ ವಿರಳ
Team Udayavani, Apr 22, 2019, 3:52 PM IST
ಸಿಂಧನೂರು: ಲಂಚ ಇಂದು ಸಾರ್ವತ್ರಿಕವಾಗಿದೆ. ಲಂಚ ಪಡೆದವರಿಗೆ ಶಿಕ್ಷೆ ಆಗುವುದೇ ಅಪರೂಪವಾಗಿದೆ. ಏಕೆಂದರೆ ಲಂಚ ಕೊಟ್ಟವ ದೂರಿದರೆ ಮಾತ್ರ ಪ್ರಕರಣ ದಾಖಲಾಗುತ್ತದೆ. ಸ್ವಹಿತಾಸಕ್ತಿಗಾಗಿ ಲಂಚ ಕೊಟ್ಟವ ದೂರು ನೀಡುವುದು ವಿರಳ ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಕಳವಳ ವ್ಯಕ್ತಪಡಿಸಿದರು.
ಬಸವ ಕೇಂದ್ರ, ಮಹಿಳಾ ಬಸವ ಕೇಂದ್ರ, ಯುವ ಬಸವ ಕೇಂದ್ರ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬಸವ ಜಯಂತ್ಯುತ್ಸವ ಅಂಗವಾಗಿ ಸ್ಥಳೀಯ ಆರ್‌ಜಿಎಂ ಶಾಲಾ ಮೈದಾನದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಅವರು ಮಾತನಾಡಿದರು. ಲಂಚದ ಎರಡನೇ ರೂಪವೇ ಕಳ್ಳತನವಾಗಿದೆ. ಇಂದು ದೇಶಾದ್ಯಂತ ಶಾರೀರಿಕ ಭೌತಿಕ, ಬೌದ್ಧಿಕ ಕಳ್ಳತನಗಳು ನಡೆಯುತ್ತಿವೆ.
ಶಾರೀರಿಕವಾಗಿ ಅಂದರೆ ನಯನಗಳು, ಕಿವಿಗಳು, ನಾಲಿಗೆ, ಕೈಗಳು ಕದಿಯುತ್ತವೆ, ಕೇಳುತ್ತವೆ. ಇದು ಇಂದ್ರೀಯಗಳಿಂದ ನಡೆಯುವ ಕಳ್ಳತನ. ಭೌತಿಕವಾಗಿ ಅಂದರೆ ವಸ್ತು, ವಾಹನ, ಆಭರಣ, ಹಣ ಕದಿಯುವುದು. ಬೌದ್ಧಿಕವಾಗಿ ಅಂದರೆ ಕೃತಿ ಚೌರ್ಯ, ಸೈಬರ್ ಕ್ರೈಮ್‌ಗಳು, ಬುದ್ದಿವಂತಿಕೆಯಿಂದ ಎಟಿಎಂಗಳನ್ನೇ ಹ್ಯಾಕ್ ಮಾಡಿ ಹಣ ದೋಚುವುದು ಹೀಗೆ ಹಲವು ವಿಧಗಳಲ್ಲಿ ಕಳ್ಳತನಗಳು ನಡೆಯುತವೆ ಎಂದು ವಿಶ್ಲೇಷಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ| ಬಸವಪ್ರಭು ಬೆಟ್ಟದೂರು ಮಾತನಾಡಿ, ಕಸ ಗುಡಿಸುವ ಸತ್ಯಕ್ಕ ಪರ ಧನ, ಪರ ಸಂಪತ್ತು ಪಡೆದರೆ ಅದು ನರಕಕ್ಕೆ ಸಮಾನ ಎಂದು ಹೇಳಿದ್ದಾರೆ ಎಂದ ಅವರು, ಹಲವು ಶರಣರ ವಚನಗಳನ್ನು ವಿವರಿಸಿ ಮಾತನಾಡಿದರು.
ಬಳಗಾನೂರಿನ ಸಿದ್ದಬಸವ ಸ್ವಾಮೀಜಿ, ಬೀದರ ಲಿಂಗಾಯತ ಮಹಾಮಠದ ಪ್ರಭು ದೇವರು, ಡಾ| ಕೆ.ಶಿವರಾಜ, ಪತ್ರಕರ್ತ ಪ್ರಹ್ಲಾದ ಗುಡಿ, ಬಸವ ಕೇಂದ್ರದ ಮಾಜಿ ಅಧ್ಯಕ್ಷ ಶ್ಯಾಮಣ್ಣ ಎಸ್‌ಎಎಸ್, ವೀರಭದ್ರಪ್ಪ ಮುದ್ಲಗುಂಡಿ ಬಸವ ಕೇಂದ್ರದ ಗೌರವಾಧ್ಯಕ್ಷ ವೀರಭದ್ರಪ್ಪ ಕುರಕುಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.