ತೊನಸಿಹಾಳ-ಮೆಣಸಗೇರಿ ಆದರ್ಶ ಗ್ರಾಮಕ್ಕೆ ಆಯ್ಕೆ
ತಲಾ 40 ಲಕ್ಷ ವೆಚ್ಚದಲ್ಲಿ ಗ್ರಾಮದ ಅಭಿವೃದ್ಧಿ ಕಾಮಗಾರಿ,ಗ್ರಾಮಾಭಿವೃದ್ಧಿ ಹೊಣೆ ಸಮಾಜ ಕಲ್ಯಾಣ ಇಲಾಖೆಯದ್ದು
Team Udayavani, Oct 31, 2020, 1:37 PM IST
ದೋಟಿಹಾಳ: ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 2018-19ನೇ ಸಾಲಿನಲ್ಲಿ ಕುಷ್ಟಗಿ ತಾಲೂಕಿನ ಕೇಸೂರ ಗ್ರಾಪಂ ವ್ಯಾಪ್ತಿಯ ತೊನಸಿಹಾಳ ಮತ್ತು ಕ್ಯಾದಿಗುಪ್ಪ ಗ್ರಾಪಂ ವ್ಯಾಪ್ತಿಯ ಮೆಣಸಗೇರಿ ಗ್ರಾಮಗಳನ್ನು ಪಿಎಂ ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡಲಾಗಿದೆ.
ಈ ಗ್ರಾಮಗಳಲ್ಲಿ ತಲಾ 40 ಲಕ್ಷ ವೆಚ್ಚದಲ್ಲಿಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಹಾಗೂ ಒಂದು ಲಕ್ಷ ಆಡಳಿತಾತ್ಮಕ ವೆಚ್ಚಕ್ಕೆ ಖರ್ಚು ಮಾಡಲು ಅವಕಾಶ ನೀಡಲಾಗಿದೆ. 2011ರ ಜನಗಣತಿ ಪ್ರಕಾರಪ್ರಧಾನಮಂತ್ರಿ ಆದರ್ಶ ಗ್ರಾ ಯೋಜನೆಗೆ ಒಳಪಡುವ ತೊಣಸಿಹಾಳದಲ್ಲಿ ಜನ ಸಂಖ್ಯೆ 1618 ಇದೆ. ಇದರಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ 1241 ಹಾಗೂ 251 ಕುಟುಂಬಗಳು ವಾಸವಾಗಿವೆ. ಮೆಣಸಗೇರಿ ಗ್ರಾಮದಲ್ಲಿ 1705 ಜನಸಂಖ್ಯೆ ಇದ್ದು, ಪರಿಶಿಷ್ಟ ಜಾತಿ ಜನಸಂಖ್ಯೆ 895 ಇದೆ. ಇಲ್ಲಿ ಒಟ್ಟು 320 ಕುಟುಂಬಗಳು ವಾಸವಾಗಿವೆ.ಎಲ್ಲ ಕುಟುಂಬಗಳು ಈ ಯೋಜನೆ ಲಾಭ ಪಡೆದುಕೊಳ್ಳುತ್ತವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೇವಲನಾಯಕ ಮಾಹಿತಿ ನೀಡಿದರು.
ಆದರ್ಶ ಗ್ರಾಮದ ಉದ್ದೇಶ: ಪರಿಶಿಷ್ಟ ಜಾತಿಯ ಜನರು ಹೆಚ್ಚು ಇರುವ ಗ್ರಾಮಗಳ ಅಭಿವೃದ್ಧಿಗೊಳಿಸುವುದು, ಆಯ್ಕೆಯಾಗಿರುವ ಗ್ರಾಮದಲ್ಲಿ ಈಗಾಗಲೆವಿವಿಧ ಯೋಜನೆಗಳಲ್ಲಿ ಬಾಕಿ ಉಳಿದಿರುವ ಅಗತ್ಯ ಕಾಮಗಾರಿ ಗುರುತಿಸುವುದು, ಗ್ರಾಮದ ಸರ್ವತೋಮುಖ ಅಭಿವೃದ್ಧಿಗೊಳಿಸುವುದು ಆದರ್ಶ ಗ್ರಾಮದ ಉದ್ದೇಶವಾಗಿದೆ.
ಪ್ರಮುಖ ಕಾಮಗಾರಿಗಳು: ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಗ್ರಾಮದಲ್ಲಿ ಸ್ವತ್ಛತೆ, ಕಾಪಾಡುವುದು, ಕಸ ವಿಲೇವಾರಿ, ಅಂಗನವಾಡಿ, ಶಾಲೆಗಳಲ್ಲಿ ಶೌಚಾಲಯ ದುರಸ್ತಿ, ಕಾಂಕ್ರೀಟ್ ರಸ್ತೆ ನಿರ್ಮಾಣ, ಸೌರ ವಿದ್ಯುತ್ ಮತ್ತು ಬೀದಿ ದೀಪಗಳನಿರ್ಮಾಣ, ಅಂಗನವಾಡಿ ಕಟ್ಟಡಗಳನಿರ್ಮಾಣ ಇನ್ನೂ ಮುಂತಾದ ಅಭಿವೃದ್ಧಿ ಕಾಮಗಾರಿಗಳು ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಲ್ಲಿ ನಿರ್ಮಾಣಕ್ಕೆ ಅವಕಾಶವಿರುತ್ತದೆ.
ಈ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯ ಮೂಲಕ ಗ್ರಾಮಗಳನ್ನುಅಭಿವೃದ್ಧಿ ಪಡಿಸುವ ಹೊಣೆ ಸಮಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೇಲಿದೆ. ಯಾವ ರೀತಿಯಾಗಿ ಅಭಿವೃದ್ಧಿಪಡಿಸಿ ಆದರ್ಶ ಗ್ರಾಮವನ್ನಾಗಿ ಮಾಡುತ್ತಾರೋ ಎಂಬುದು ಕಾದು ನೋಡಬೇಕಾಗಿದೆ.
ತೊನಸಿಹಾಳ, ಮೆಣಸಗೇರಾ ಗ್ರಾಮಗಳು ಪಿಎಂ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿವೆ. ಈ ಗ್ರಾಮಗಳಲ್ಲಿ ಮೊದಲುಮೂಲಭೂತ ಸೌಕರ್ಯ ಕುರಿತು ಸರ್ವೇ ಮಾಡಲಾಗುವುದು. ಕಾಮಗಾರಿಗಳ ಪಟ್ಟಿ, ಅಂದಾಜು ಮೊತ್ತ ಮತ್ತು ಮಧ್ಯಂತರ ಅಭಿವೃದ್ಧಿ ಕ್ರಿಯಾ ಯೋಜನೆ ಸಿದ್ಧ ಪಡಿಸಲಾಗುವುದು. ಆ ನಂತರ ಪಿಡಿಒ ಮೂಲಕ ಮಾಹಿತಿ ಪಡೆದುಕೊಂಡು. ಅಭಿವೃದ್ಧಿಗೆ ಚಾಲನೆ ನೀಡಲಾಗುವುದು. ಪ್ರಧಾನಮಂತ್ರಿ ಆದರ್ಶ ಗ್ರಾಮದ ಉದ್ದೇಶ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಯಾಗಿದೆ. -ದೇವಲನಾಯಕ, ಗ್ರಾಪಂ ಆಡಳಿತ ಅಧಿಕಾರಿ
-ಮಲ್ಲಿಕಾರ್ಜುನ ಮೆದಿಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.