ಟ್ರಾಫಿಕ್‌ ಕಿರಿಕಿರಿ

Team Udayavani, Jun 12, 2019, 11:10 AM IST

kopala-tdy-1..

ಕೊಪ್ಪಳ: ನಗರದ ಹೆದ್ದಾರಿಯಲ್ಲಿ ಜನದಟ್ಟಣೆಯ ಚಿತ್ರಣ.

ಕೊಪ್ಪಳ: ನಗರದಲ್ಲಿ ರಸ್ತೆ ನಿಯಮ ಪಾಲನೆ ಬಗ್ಗೆ ಹೇಳ್ಳೋರು, ಕೇಳ್ಳೋರು ಯಾರೂ ಇಲ್ಲವೆಂಬ ಸ್ಥಿತಿ ನಿರ್ಮಾಣವಾಗಿದೆ. ಯದ್ವಾ ತದ್ವಾ ವಾಹನಗಳ ಸಂಚಾರದಿಂದ ಜನ, ಶಾಲಾ-ಕಾಲೇಜು ವಿದ್ಯಾರ್ಥಿಗಳು ರೋಸಿ ಹೋಗಿದ್ದಾರೆ.

ನಗರದಲ್ಲಿ ಇಷ್ಟು ದಿನಗಳ ಕಾಲ ರಸ್ತೆಗಳು ಸರಿಯಿಲ್ಲ. ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗುತ್ತಿದೆ ಎಂದು ರೋದನೆ ವ್ಯಕ್ತಪಡಿಸುತ್ತಿದ್ದ ಜನತೆಗೆ ಈಗ ರಸ್ತೆಗಳು ಸರಿಯಿದ್ದರೂ ವಾಹನ ಸವಾರರು ಸರಿಯಾದ ನಿಯಮ ಪಾಲಿಸುತ್ತಿಲ್ಲವೆಂದು ಅಸಮಾಧಾನಗೊಂಡಿದ್ದಾರೆ.

•ಯದ್ವಾ ತದ್ವಾ ವಾಹನಗಳ ಓಡಾಟಕ್ಕೆ ಬೀಳ್ಳೋದೇ ಬ್ರೇಕ್‌

•ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ

•ಹೇಳ್ಳೋರು- ಕೇಳ್ಳೋರು ಯಾರೂ ಇಲ್ಲ

ಪಾದಚಾರಿಗಳಿಗೆ ಸಂಚಾರ ಕಷ್ಟ : ಇಲ್ಲಿನ ಡಿಸಿ ಕಚೇರಿಯಿಂದ ಮಳೆ ಮಲ್ಲೇಶ್ವರ ದೇವಸ್ಥಾನ ರಸ್ತೆವರೆಗೂ ಸುಸಜ್ಜಿತ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ ಎಲ್ಲಿಯೂ ಹಂಪ್ಸ್‌ಗಳನ್ನು ಹಾಕಿಲ್ಲ. ಇದರಿಂದ ವಾಹನ ಸವಾರರು ಅತಿ ವೇಗವಾಗಿ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ಪಾದಚಾರಿಗಳು ರಸ್ತೆ ಅಕ್ಕಪಕ್ಕ ಸಂಚರಿಸ‌ದಂತಹ ಸ್ಥಿತಿ ಎದುರಾಗಿವೆ. ಫುಟ್ಪಾತ್‌ ಮೇಲೆಯಾದರೂ ಸಂಚರಿಸೋಣವೆಂದರೆ ಹೆದ್ದಾರಿಯುದ್ದಕ್ಕೂ ಫುಟ್ಪಾತ್‌ ಎಡ-ಬಲ ಭಾಗದಲ್ಲಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಅಲ್ಲಿ ತಮ್ಮ ಅಂಗಡಿ ಸಾಮಗ್ರಿ ಇಟ್ಟಿರುತ್ತಾರೆ. ಚಹದಂಗಡಿ ಸೇರಿದಂತೆ ಹಣ್ಣಿನ ಅಂಗಡಿಗಳನ್ನು ಹಾಕಿದ್ದು ಈ ಬಗ್ಗೆ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ನಗರಸಭೆಯಂತೂ ತೆರಿಗೆಯಷ್ಟೆ, ತೆರವು ಲೆಕ್ಕಕ್ಕಿಲ್ಲ ಎನ್ನುವಂತೆ ವರ್ತಿಸುತ್ತಿದೆ. ದ್ವಿಚಕ್ರ ವಾಹನ ಸವಾರರು ಹೆದ್ದಾರಿ ಪಕ್ಕದಲ್ಲೇ ಯದ್ವಾ ತ್ವದಾ ವಾಹನ ಬಿಟ್ಟು ತಮ್ಮ ಕೆಲಸಕ್ಕೆ ತೆರಳುತ್ತಾರೆ. ಇದರಿಂದ ಲಾರಿ, ಬಸ್‌ ಸೇರಿದಂತೆ ಬೃಹದಾಕಾರದ ವಾಹನ ಬಂದರೆ ಪ್ರಯಾಣಕ್ಕೆ ಅವಕಾಶವೇ ಇಲ್ಲದಂತಾಗುತ್ತಿದೆ.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ : ನಗರದ ಹೆದ್ದಾರಿ ಅಕ್ಕಪಕ್ಕದಲ್ಲೇ ಶಾಲಾ-ಕಾಲೇಜುಗಳು ಇರುವುದರಿಂದ ಸಾವಿರಾರು ವಿದ್ಯಾರ್ಥಿಗಳು ನಿತ್ಯ ನಗರಕ್ಕೆ ಆಗಮಿಸುತ್ತಾರೆ. ಈ ವೇಳೆ ಅವರು ಚರಂಡಿ ಮೇಲ್ಭಾಗದ ಫುಟ್ಪಾತ್‌ನಲ್ಲೇ ಸಂಚರಿಸಬೇಕಿದೆ. ರಸ್ತೆ ಅಕ್ಕ ಪಕ್ಕ ನಡೆದರೂ ವಾಹನಗಳ ಹಾವಳಿ ಮಿತಿ ಮೀರಿದೆ. ಪೊಲೀಸ್‌ ಇಲಾಖೆಯಂತೂ ಸಂಚಾರಿ ನಿಯಮ ಪಾಲನೆಗೆ ಖಡಕ್‌ ಸೂಚನೆ ನೀಡುತ್ತಿಲ್ಲ ಎನ್ನುವ ಆಪಾದನೆ ಜನರಿಂದಲೇ ಕೇಳಿ ಬಂದಿದೆ. ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ಚಾಲಕರಿಗೆ ದಂಡ ಹಾಕುವುದು ಕಡಿಮೆಯಾಗುತ್ತಿದೆ.

ಜವಾಹರ ರಸ್ತೆ ಒನ್‌ವೇ ಏನಾಯ್ತು?: ಈ ಹಿಂದೆ ಜವಾಹರ ರಸ್ತೆಯಲ್ಲಿ ಅತಿ ಹೆಚ್ಚು ಟ್ರಾಫಿಕ್‌ ಜಾಮ್‌ ಆಗುತ್ತಿರುವುದರಿಂದ ಸ್ವತಃ ಪೊಲೀಸ್‌ ಇಲಾಖೆಯೇ ಒನ್‌ವೇ ನಿಯಮ ಜಾರಿಗೆ ತಂದಿತ್ತು. ಆದರೆ ಕೆಲವೇ ದಿನ ಆ ನಿಯಮ ಪಾಲಿಸಿ ಮತ್ತೆ ಬಂದ್‌ ಮಾಡಲಾಗಿದೆ. ಮುಖ್ಯ ಬಜಾರದಲ್ಲಿ ಬೆಳಗ್ಗೆ, ಮಧ್ಯಾಹ್ನದ ಸಮಯವೇ ಅಂಗಡಿ ವ್ಯಾಪಾರಿಗಳು ಲೋಡ್‌ಗಳನ್ನು ಇಳಿಸಿಕೊಳ್ಳುತ್ತಾರೆ. ಹಾಗಾಗಿ ಲಾರಿಗಳು ರಸ್ತೆ ಅಕ್ಕಪಕ್ಕ ನಿಂತು ಸಣ್ಣ ಪುಟ್ಟ ವಾಹನಗಳಿಗೆ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುತ್ತವೆ. ಇನ್ನೂ ಆಟೋಗಳಂತೂ ಕೇಳುವವರೇ ಇಲ್ಲದಂತಾಗಿದೆ. ಪೊಲೀಸ್‌ ಇಲಾಖೆ ಇದಕ್ಕೆಲ್ಲ ಬ್ರೇಕ್‌ ಹಾಕಬೇಕಿದೆ.

•ದತ್ತು ಕಮ್ಮಾರ

ಟಾಪ್ ನ್ಯೂಸ್

“ಟೋಲ್‌ಗ‌ಳಲ್ಲಿ ಸೌಲಭ್ಯವಿಲ್ಲ’: ಮಂಜುನಾಥ ಭಂಡಾರಿ

“ಟೋಲ್‌ಗ‌ಳಲ್ಲಿ ಸೌಲಭ್ಯವಿಲ್ಲ’: ಮಂಜುನಾಥ ಭಂಡಾರಿ

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌ ಶಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-gangavathi

Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು

2-koppala

Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ

ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ

ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ

5-govt-office

ಕೃಷ್ಣ ನಿಧನ;ಪ್ರಮುಖ‌ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ

1-gangavathi

ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

“ಟೋಲ್‌ಗ‌ಳಲ್ಲಿ ಸೌಲಭ್ಯವಿಲ್ಲ’: ಮಂಜುನಾಥ ಭಂಡಾರಿ

“ಟೋಲ್‌ಗ‌ಳಲ್ಲಿ ಸೌಲಭ್ಯವಿಲ್ಲ’: ಮಂಜುನಾಥ ಭಂಡಾರಿ

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.