![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Aug 1, 2023, 11:02 PM IST
ಕುಷ್ಟಗಿ: ಕುಷ್ಟಗಿ ವೃತ್ತದ ಸಿಪಿಐ ಆಗಿದ್ದ ಜನಸ್ನೇಹಿ, ಪರಿಸರ ಸ್ನೇಹಿ ಅಧಿಕಾರಿ ನಿಂಗಪ್ಪ ರುದ್ರಪ್ಪಗೋಳ ಅವರಿಗೆ ರಾಯಚೂರು ಜಿಲ್ಲೆಯ ಯರಗೇರಾಕ್ಕೆ ವರ್ಗಾವಣೆಯಾಗಿದೆ.
ಕಳೆದ ಮೂರು ವರ್ಷಗಳಿಂದ ಕುಷ್ಟಗಿ ತಾಲೂಕಿನಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಸೇವೆಯೊಂದಿಗೆ ರಚನಾತ್ಮಕ ಕಾರ್ಯ ಚಟುವಟಿಕೆಯೊಂದಿಗೆ ಸಾರ್ವಜನಿಕ ಮೆಚ್ಚುಗೆ ಗೆ ಪಾತ್ರರಾಗಿದ್ದ ನಿಂಗಪ್ಪ ರುದ್ರಪ್ಪಗೋಳ ಅವರು ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ ಜನಸ್ನೇಹಿ ಅಧಿಕಾರಿ ಆಗಿದ್ದರು.
ಕೋವಿಡ್ ಸಂದರ್ಭದಲ್ಲಿ ಅಧಿಕಾರವಹಿಸಿಕೊಂಡಿದ್ದ ಅವರು, ಆಗಿನ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಯಶಸ್ವಿಯಾಗಿ ನಿಭಾಯಿಸಿದ್ದರು. ಸಮಯ ಪ್ರಜ್ಞೆಯೊಂದಿಗೆ ಕಾರ್ಯ ನಿರ್ವಹಿಸಿ ಜನಮಾನಸದಲ್ಲಿ ಉಳಿದಿದ್ದಾರೆ.
ಇತ್ತೀಚೆಗೆ ಕುಷ್ಟಗಿ ಪಟ್ಟಣದ ಮುಖ್ಯ ರಸ್ತೆ ಎರಡು ಬದಿಯಲ್ಲಿ ಟ್ರೀಗಾರ್ಡ ಸಂರಕ್ಷಣೆ ಯಲ್ಲಿ 500ಕ್ಕೂ ಅಧಿಕ ಗಿಡಗಳನ್ನು ನೆಡುವ ಕಾರ್ಯಕ್ರಮ ನೇತೃತ್ವವಹಿದ್ದಾರೆ.
ಸದರಿ ಅವರ ಸ್ಥಾನಕ್ಕೆ ಶಿರಗುಪ್ಪ ವೃತ್ತದ ಯಶವಂತ ಹಣಮಂತ ಬಿಸರಳ್ಳಿ ಅವರನ್ನು ನೇಮಿಸಲಾಗಿದೆ.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
You seem to have an Ad Blocker on.
To continue reading, please turn it off or whitelist Udayavani.