ಭತ್ತದ ಬೆಳೆಗೆ ಕೊಳವೆ ರೋಗ; ರೈತರಿಗೆ ಸಿಗದ ಸೂಕ್ತ ಮಾರ್ಗದರ್ಶನ


Team Udayavani, Oct 18, 2024, 6:05 PM IST

ಭತ್ತದ ಬೆಳೆಗೆ ಕೊಳವೆ ರೋಗ; ರೈತರಿಗೆ ಸಿಗದ ಸೂಕ್ತ ಮಾರ್ಗದರ್ಶನ

ಉದಯವಾಣಿ ಸಮಾಚಾರ
ಕಾರಟಗಿ: ಪಟ್ಟಣ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಭತ್ತದ ಬೆಳೆಗೆ ಕೊಳವೆ ರೋಗ ಬಾಧಿಸಿದ್ದು ರೈತರಲ್ಲಿ ಆತಂಕ ತಂದೊಡ್ಡಿದೆ. ಈ ಕೊಳವೆ ಹುಳು ಭತ್ತದ ಬೆಳೆಗೆ ಬರುವುದು ಸಾಮಾನ್ಯವಾದರೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭತ್ತಕ್ಕೆ ಈ ಕೊಳವೆ ಹುಳುವಿನ ಕಾಟ ಕಾಣಿಸಿಕೊಂಡಿದ್ದು, ಭತ್ತದ ಸಸಿಯ ಗರಿಗಳನ್ನು ಹುಳುಗಳು ತುಂಡರಿಸುವುದರಿಂದ ಭತ್ತದ ಸಸಿ ಬಾಡಿ ಕ್ರಮೇಣ ಒಣಗಿ ಹೋಗುತ್ತದೆ. ಭತ್ತದ ಒಂದು ಬಡ್ಡಿಯಲ್ಲಿ 60 ಕಡ್ಡಿಗಳಲ್ಲಿ 30ಕ್ಕೂ ಹೆಚ್ಚು ಕಡ್ಡಿಗಳು ಬರಿ ಹಾಪಿನಂತಾಗಿವೆ.

ಹಲವಾರು ಕ್ರಿಮಿನಾಶಕ, ಗುಳಿಗೆ ಕರಗಿಸಿ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ರೈತರು ಹತಾಶೆ ಭಾವದಿಂದ
ಹೇಳುತ್ತಿದ್ದಾರೆ. ಈ ಬಾರಿ ಹವಾಮಾನದಲ್ಲಿನ ವೈಪರಿತ್ಯವೇ ಈ ಕೊಳವೆ ಹುಳುಗಳ ಉಪಟಳ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ರೈತರು.

ಕೊಳವೆ ಹುಳುಗಳು ಬಗ್ಗೆ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ರೈತರಿಗೆ ಮುಂಜಾಗ್ರತೆ ಕೈಗೊಳ್ಳುವ ಬಗ್ಗೆ ಇಲಾಖೆ ಅಧಿಕಾರಿಗಳು ಈವರೆಗೂ ಯಾವುದೇ ಮಾಹಿತಿ ಒದಗಿಸಿಲ್ಲ. ರೈತರು ಬೆಳೆದ ಬೆಳೆ, ಮಳೆ-ಗಾಳಿಗೆ ಹಾಳಾದಾಗ, ಕ್ರಿಮಿಕೀಟಗಳಿಂದ ನಾಶ ಹೊಂದಿದಾಗ ವೀಕ್ಷಣೆಗೆ ಬರುತ್ತಾರೆ ವಿನಃ ರೈತರ ಹಿತ ಕಾಪಾಡಲು ಯಾರೂ ಮುಂದೆ ಬರುತ್ತಿಲ್ಲ.

ಜಿಲ್ಲೆಯಾದ್ಯಂತ ಭತ್ತದ ಬೆಳೆಗೆ ಈ ರೋಗ ಕಾಣಿಸಿಕೊಂಡಿದೆ. ಕೃಷಿ ಇಲಾಖೆಗೆ ಮಾಹಿತಿ ಇದೆ. ಆದರೂ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರದ ಅಧಿ ಕಾರಿಗಳು ವಿಫಲರಾಗಿದ್ದಾರೆ ಎಂದು ರೈಲ್ವೆ ಸ್ಟೇಷನ್‌ ರಸ್ತೆಯ ಇಕ್ಕೆಲಗಳಲ್ಲಿ ಇರುವ ಗದ್ದೆಗಳ ರೈತರು ದೂರಿದ್ದಾರೆ.

ಈ ಬಾರಿ ಸಮರ್ಪಕ ಮಳೆಯಾಗಿ ಬೆಳೆಯೂ ಸಮೃದ್ಧವಾಗಿದೆ. ಭತ್ತದ ಬೆಳೆ ಈಗ ಹಾಲು ತುಂಬುವ ಸಮಯ. ಇನ್ನು ಕೆಲ ದಿನಗಳಲ್ಲಿ ತೆನೆ ಬಿಚ್ಚಲಾರಂಭಿಸುತ್ತದೆ. ಎಕರೆಗೆ 50ಕ್ಕೂ ಹೆಚ್ಚು ಚೀಲ ಭತ್ತ ಬೆಳೆಯುತ್ತೇವೆ ಎಂಬ ಉತ್ಸಾಹದಲ್ಲಿದ್ದ ರೈತರಿಗೆ ಕೊಳವೆ ಹುಳು ಆತಂಕ ತಂದೊಡ್ಡಿದೆ. ಎಕರೆಗೆ 38 ರಿಂದ 40 ಸಾವಿರ ರೂ.ಗಳನ್ನು ವ್ಯಯಿಸಲಾಗಿದ್ದು, ಭತ್ತದ ಬೆಳೆ ಕೊಳವೆ ಹುಳಿವಿನ ಬಾಧೆಗೆ ತುತ್ತಾಗಿ ಎಕರೆಗೆ 20-ರಿಂದ 25 ಚೀಲ ಭತ್ತ ಬರುವುದು ಕಷ್ಟವಾಗಿದೆ. ಬೆಳೆಗೆ ವ್ಯಯಿಸಿದ ಹಣ ಕೂಡ ಕೈಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ರೈತ ನಾರಾಯಣ  ಈಡಿಗೇರ.

■ ದಿಗಂಬರ್‌ ಕುರಡೇಕರ್‌

ಟಾಪ್ ನ್ಯೂಸ್

1-JMM

Jharkhand; ಸೀಟು ಹಂಚಿಕೆ ಪ್ರಕಟಿಸಿದ ಎನ್ ಡಿಎ: ಬಿಜೆಪಿಗೆ 68 ಸ್ಥಾನ

CM-Panchamsali

Reservation: ಪಂಚಮಸಾಲಿ ಮೀಸಲು ವಿಚಾರ ತಜ್ಞರು, ಸಂಪುಟದಲ್ಲಿ ಚರ್ಚಿಸಿ ಕ್ರಮ: ಸಿಎಂ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

ISREL-3

Israel ಗಾಜಾದಲ್ಲಿ ಕಾರ್ಯಾಚರಣೆ ನಿಲ್ಲಿಸದೆ ಒತ್ತೆಯಾಳುಗಳ ಬಿಡುಗಡೆ ಇಲ್ಲ: ಹಮಾಸ್!

1-a-cm-bai

ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ

3

La Tomatina: ಏನಿದು ಲಾ ಟೊಮಾಟಿನಾ ಹಬ್ಬ…ಈ ಹಬ್ಬದ ವಿಶೇಷತೆ ಏನು ಗೊತ್ತಾ?

1-dog

Police dog; ರೈತನ ಮನೆಯಿಂದ ಕಳವಾಗಿದ್ದ 1.07 ಕೋಟಿ ರೂ.ಹಣ ಪತ್ತೆಗೆ ನೆರವಾದ ಶ್ವಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

100 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ: ಶಿವರಾಜ್‌ ತಂಗಡಗಿ

100 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ: ಶಿವರಾಜ್‌ ತಂಗಡಗಿ

Minister Shivaraj Tangadagi: ಶೈಕ್ಷಣಿಕ, ಆರ್ಥಿಕ ಗಣತಿಗೆ ವಿರೋಧ ಸಲ್ಲ

Minister Shivaraj Tangadagi: ಶೈಕ್ಷಣಿಕ, ಆರ್ಥಿಕ ಗಣತಿಗೆ ವಿರೋಧ ಸಲ್ಲ

Minister; ಸತೀಶ್ ಜಾರಕಿಹೊಳಿ ಸಿಎಂ‌ ಆಗಲಿ: ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ

Minister; ಸತೀಶ್ ಜಾರಕಿಹೊಳಿ ಸಿಎಂ‌ ಆಗಲಿ ಎಂದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ

9-gangavathi

Anegundi ಸ್ವಚ್ಛ ಗ್ರಾಮಕ್ಕೆ ಸಹಕರಿಸಿ: ಸಿಇಓ ರಾಹುಲ್ ರತ್ನಂ ಪಾಂಡೆ;ಗ್ರಾ.ಪಂ. ಸಾಮಾನ್ಯ ಸಭೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

POlice

Panambur ಮಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣ ಆರೋಪಿಗಳ ಮಹಜರು, ಮುಂದುವರಿದ ತನಿಖೆ

Kannada Habba: ನ.1-7: ಕುಂದಾಪುರದಲ್ಲಿ ಕನ್ನಡ ಹಬ್ಬ

Kannada Habba: ನ.1-7: ಕುಂದಾಪುರದಲ್ಲಿ ಕನ್ನಡ ಹಬ್ಬ

1-JMM

Jharkhand; ಸೀಟು ಹಂಚಿಕೆ ಪ್ರಕಟಿಸಿದ ಎನ್ ಡಿಎ: ಬಿಜೆಪಿಗೆ 68 ಸ್ಥಾನ

Mangaluru: ಡಿಜಿಟಲ್‌ ಸ್ವರೂಪದ ತುಳು ಮಕ್ಕಳಿಗೆ ಆಪ್ತ: ತಾರಾನಾಥ್‌ ಗಟ್ಟಿ ಕಾಪಿಕಾಡ್‌

Mangaluru: ಡಿಜಿಟಲ್‌ ಸ್ವರೂಪದ ತುಳು ಮಕ್ಕಳಿಗೆ ಆಪ್ತ: ತಾರಾನಾಥ್‌ ಗಟ್ಟಿ ಕಾಪಿಕಾಡ್‌

fraudd

Kasaragod: ಉದ್ಯೋಗ ಭರವಸೆ ನೀಡಿ ವಂಚನೆ; ಸಚಿತಾ ರೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.