Tungabhadra Dam: ಮೊದಲ ಬೆಳೆಗೆ ನೀರು ಸಿಗುವ ವಿಶ್ವಾಸವಿದೆ: ತಂಗಡಗಿ
Team Udayavani, Aug 11, 2024, 2:22 PM IST
ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಗೇಟ್ ನ ಚೈನ್ ಲಿಂಕ್ ಕಟ್ಟಾಗಿದ್ದು, ಒಂದು ಲಕ್ಷ ಕ್ಯೂಸೆಕ್ ನೀರು ನದಿಪಾತ್ರಕ್ಕೆ ಹರಿಯುತ್ತಿದೆ. ಆದರೂ ಮೊದಲ ಬೆಳೆ ಬೆಳೆಯಲು ನೀರಿನ ಸಮಸ್ಯೆಯಾಗುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಜಲಾಶಯಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ನಿನ್ನೆ ರಾತ್ರಿ 11.45 ಕ್ಕೆ ನನ್ನ ಗಮನಕ್ಕೆ ಬಂತು. ನಾನಾಗ ತೂಮಕೂರಿನಲ್ಲಿದ್ದೆ. ಮೊದಲಿಗೆ ಅಲ್ಲಿಯೇ ರಾತ್ರಿಯಿದ್ದು, ಬೆಳಗ್ಗೆ ಬರಬೇಕು ಎಂದುಕೊಂಡಿದ್ದೆ, ಆದರೆ, ಘಟನೆ ಗೊತ್ತಾದ ತಕ್ಷಣ ಅಲ್ಲಿಂದ ಕೂಡಲೇ ರಾತ್ರಿಯೆ ಹೊರಟು 3-30 ಕ್ಕೆ ಜಲಾಶಯದ ಬಳಿ ಬಂದು ವಾಸ್ತವ ಪರಿಶೀಲಿಸಿದೆ. ಇಲ್ಲಿ ಬಂದು ನೋಡಿದಾಗ ಒಂದು ಕ್ಷಣ ನಾನೇ ಆತಂಕಗೊಂಡೆ ಜಲಾಶಯದ 19 ನೇ ಗೇಟ್ ನ ಚೈನ್ ಲಿಂಕ್ ಆಗಿದ್ದರಿಂದ ನೀರು ರಭಸವಾಗಿ ಹರಿಯುತಿತ್ತು. ಗೇಟ್ ಗಳ ಮುಂಭಾಗದಲ್ಲಿ ನಿಲ್ಲಲು ಭಯವಾಗುತಿತ್ತು. ಕೂಡಲೇ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲಾಡಳಿತದೊಂದಿಗೆ ಮಾತನಾಡಿ, ನದಿ ಪಾತ್ರದ ಗ್ರಾಮಗಳಲ್ಲಿ ಮಾಹಿತಿ ನೀಡಲಾಯಿತು ಎಂದರು.
ನಂತರ ಉಳಿದ ಗೇಟ್ ಗಳಲ್ಲಿ ನೀರು ಬಿಡುಗಡೆ ಮಾಡಿಸಿ, ಜಲಾಶಯದ ಒತ್ತಡ ಕಡಿಮೆ ಮಾಡಲಾಯಿತು. ಸದ್ಯ ಗೇಟ್ ಹೊಸದಾಗಿ ಹೊಸಪೇಟೆಯಲ್ಲಿ ಮಾಡಿಸಲಾಗುತ್ತಿದೆ ಎಂದರು.
ತಜ್ಞರ ತಂಡ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಸ್ತುತ ಜಲಾಶಯದಲ್ಲಿರುವ ನೀರಿನ ಪೈಕಿ 60 ಟಿಎಂಸಿ ನೀರು ಹೊರಗಡೆ ಹರಿಯ ಬಿಟ್ಟು ಕಾಮಗಾರಿ ಶುರು ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಡಿಸಿಎಂ ಅವರೊಂದಿಗೆ ಮಾತನಾಡಿದ್ದೇನೆ. ನನ್ನ ಅಂದಾಜಿನ ಪ್ರಕಾರ ರೈತರ ಮೊದಲ ಬೆಳೆಗೆ ನೀರಿನ ಸಮಸ್ಯೆಯಾಗುವುದಿಲ್ಲ. ರೈತರು ಎದೆಗುಂದಬೇಕಿಲ್ಲ. ಅಲ್ಲದೆ, ಜಲಾನಯನ ಪ್ರದೇಶದಲ್ಲಿ ಇನ್ನೂ ಮಳೆಯಿರುವುದರಿಂದ ಚಿಂತಿಸುವ ಅಗತ್ಯವಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.