ಆನೆಗೊಂದಿ ಉತ್ಸವ ಲಾಂಛನ ಅನಾವರಣ
Team Udayavani, Dec 4, 2019, 5:34 PM IST
ಗಂಗಾವತಿ: ಆನೆಗೊಂದಿ ಉತ್ಸವವನ್ನು ಜನೋತ್ಸವವಾಗಿ ಆಚರಣೆ ಮಾಡಲು ಸ್ಥಳೀಯರ ಪೂರ್ಣ ಸಹಕಾರ ನೀಡಬೇಕು. ಆನೆಗೊಂದಿ ಉತ್ಸವವನ್ನು ಪ್ರತಿ ವರ್ಷ ಆಚರಣೆ ಮಾಡುವಂತೆ ಬಜೆಟ್ ನಲ್ಲಿ ಅಳವಡಿಸಲಾಗುತ್ತದೆ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ತಾಲೂಕಿನ ಆನೆಗೊಂದಿಯ ಶ್ರೀರಂಗನಾಥ ಸ್ವಾಮಿ ದೇಗುಲದಲ್ಲಿ ಮಂಗಳವಾರ ಆನೆಗೊಂದಿ ಉತ್ಸವ-2020ರ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಆನೆಗೊಂದಿ ಉತ್ಸವ ಇತಿಹಾಸವನ್ನು ಮೆಲುಕು ಹಾಕುವಉತ್ಸವವಾಗಿದೆ. ಸಂಸ್ಕೃತಿ ಪರಂಪರೆಯ ಮೂಲಕ ಭವಿಷ್ಯ ಕಂಡುಕೊಳ್ಳಲು ಉತ್ಸವಗಳು ಆಗತ್ಯವಾಗಿವೆ. ಆನೆಗೊಂದಿ ಮಂಡಲ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಹಿರಿಯರನ್ನು 21 ಉತ್ಸವ ಸಮಿತಿ ರಚನೆ ಮಾಡಲಾಗಿದೆ. ರಾಜಮನೆತನದ ರಾಮದೇವರಾಯಲು ಅವರ ಸಲಹೆ ಸೂಚನೆ ಪಡೆಯಲಾಗಿದೆ ಎಂದರು.
ಉತ್ಸವಕ್ಕೆ ಮುಖ್ಯಮಂತ್ರಿ ಸೇರಿ ಪ್ರಮುಖ ಸಚಿವರು, ಗಣ್ಯರು, ಸಿನೆಮಾ ನಟರನ್ನು ಆಹ್ವಾನಿಸಲಾಗಿದೆ. ಎರಡು ದಿನಗಳ ಉತ್ಸವಕ್ಕೆ ಎರಡು ವೇದಿಕೆ ನಿರ್ಮಿಸಲಾಗುತ್ತಿದೆ. ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಉತ್ಸವದ ಲಾಂಛನದಲ್ಲಿ ಕಿಷ್ಕಿಂದೆ ಅಂಜನಾದ್ರಿ, ಪಂಪಾ ಸರೋವರ, ಋಷಿಮುಖ ಪರ್ವತ ಸೇರಿ ಇನ್ನೂ ಸ್ಥಳೀಯ ಸ್ಥಳಗಳನ್ನು ಅಳವಡಿಸುವ ಕುರಿತು ಸಲಹೆ ಹಿನ್ನೆಲೆಯಲ್ಲಿ ಕಾರ್ಯಕ್ರಮದ ವೇದಿಕೆಯಲ್ಲಿ ಇವುಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದರು.
ಜಿಪಂ ಮಾಜಿ ಸದಸ್ಯ ಸಿದ್ದರಾಮಯ್ಯಸ್ವಾಮಿ, ಮುಖಂಡಎಚ್.ಸಿ. ಯಾದವ್, ಸಹಾಯಕ ಆಯುಕ್ತೆ ಸಿ.ಡಿ. ಗೀತಾ, ಕಿಷ್ಕಿಂದಾ ಟ್ರಸ್ಟ್ ಅಧ್ಯಕ್ಷೆ ಶಮಾ ಪವಾರ್, ತಾಪಂ ಸದಸ್ಯ ವೈ. ರಮೇಶ, ಗ್ರಾಪಂ ಅಧ್ಯಕ್ಷೆ ಅಂಜನಾದೇವಿ, ಹರಿಹರ ದೇವರಾಯಲು, ಪದ್ಮನಾಭರಾಜು, ಸುದರ್ಶನ್ ವರ್ಮಾ, ನರೇಂದ್ರವರ್ಮಾ, ರಾಜೇಶ್ವರಿ ಸುರೇಶ, ಹನುಮಂತಯ್ಯ, ಟಿ.ಜಿ. ಬಾಬು, ಕುಪ್ಪರಾಜು, ರಾಮಕೃಷ್ಣ ಇಲ್ಲೂರು, ತಾಪಂ ಇಒ ಡಾ|ಮೋಹನ್, ಪಿಡಿಒಗಳಾದ ಕೃಷ್ಣಪ್ಪ, ಬಸವರಾಜಗೌಡ, ಕನ್ನಡ ಪರ ಸಂಘಟನೆಗಳ ಮುಖಂಡರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.