ಗುಳೆ ಹೊರಟ ವಡಕಿ ಗ್ರಾಮಸ್ಥರು
Team Udayavani, Jul 21, 2019, 1:04 PM IST
ಕನಕಗಿರಿ: ಸ್ಥಳೀಯವಾಗಿ ಕೆಲಸ ಇಲ್ಲದ ಕಾರಣ ಸಮೀಪದ ವಡಕಿ ಗ್ರಾಮದ 500ಕ್ಕೂ ಹೆಚ್ಚು ಜನ ಕೆಲಸ ಅರಸಿ ನೀರಾವರಿ ಪ್ರದೇಶದತ್ತ ನಾಲ್ಕು ತೆರೆದ ವಾಹನಗಳಲ್ಲಿ ಶನಿವಾರ ಗುಳೆ ಹೋದರು.
ತಮಗೆ ಬೇಕಾದ ಅಡುಗೆ ಪಾತ್ರೆ ಸಾಮಾಗ್ರಿ, ಅಕ್ಕಡಿ ಕಾಳು, ಜೋಳ, ಕಟ್ಟಿಗೆ ಹಾಗೂ ಗಂಟುಮೂಟೆಗಳನ್ನು ವಾಹನದಲ್ಲಿಟ್ಟುಕೊಂಡು ಗುಳೆ ಹೊರಟರು. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೆಲಸ ನೀಡದೇ ಇರುವುದು ಮತ್ತು ಕೆಲಸ ಮಾಡಿದರೂ ಸರಿಯಾಗಿ ಹಣ ಪಾವತಿಸದ ಕಾರಣ ಗುಳೆ ಹೋಗುವ ಪರಿಸ್ಥಿತಿ ಬಂದಿದೆ ಎಂದು ಗುಳೆ ಹೊರಟವರು ದೂರಿದರು.
ಜನತೆಯ ಹಿತದೃಷ್ಟಿಯಿಂದ ಸರ್ಕಾರ ಏನೆಲ್ಲಾ ಯೋಜನೆಗಳನ್ನು ಜಾರಿಗೊಳಿಸಿದರೂ ಗ್ರಾಮೀಣ ಭಾಗದವರು ಗುಳೆ ಹೋಗುವುದನ್ನು ನಿಲ್ಲಿಸುವುದು ಅಸಾಧ್ಯವಾಗಿದೆ. ಉದ್ಯೋಗ ಖಾತ್ರಿ ಯೋಜನೆಗಳು ಅಧಿಕಾರಿಗಳ ಮತ್ತು ಚುನಾಯಿತ ಪ್ರತಿನಿಧಿಗಳ ಪಾಲಾಗಿದ್ದು, ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಆದ್ದರಿಂದ ಈಗ ನೀರಾವರಿ ಪ್ರದೇಶದತ್ತ ಜನರು ಗುಳೆ ಹೊರಟಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.