ಭತ್ತದ ನಾಡಿನಲ್ಲಿ ಬಹು ಖ್ಯಾತಿ ಪಡೆದ ವಿದ್ಯಾನಿಕೇತನ ಸಂಸ್ಥೆ
Team Udayavani, Sep 1, 2022, 3:31 PM IST
ಸರ್ವಾಂಗೀಣ ಬೆಳವಣಿಗೆಯೇ ಶಿಕ್ಷಣದ ಗುರಿಯಾಗಿದ್ದು, ವಿದ್ಯೆ ಮಕ್ಕಳಲ್ಲಿ ಮನೋಬಲ ವೃದ್ಧಿ, ಸಂಸ್ಕೃತಿಯ ಪಾಲನೆ, ಸಾಮಾಜಿಕ ಜವಾಬ್ದಾರಿ ಹೆಚ್ಚಿಸುತ್ತದೆ. ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಅಥವಾ ಪ್ರಗತಿ ಸಾಧ್ಯವೆಂದು ಮನಗಂಡ ಪ್ರಗತಿಪರ ರೈತ, ಯಶಸ್ವಿ ಉದ್ಯಮಿ ಶ್ರೀ ನೆಕ್ಕಂಟಿ ಸೂರಿಬಾಬು ನೇತೃತ್ವದಲ್ಲಿ ತಾಲೂಕಿನ ಶ್ರೀರಾಮನಗರದ ಶ್ರೀ ಸಾಯಿ ಪವನ್ ಎಜುಕೇಶನಲ್ ಟ್ರಸ್ಟ್ (ರಿ)ಆಶ್ರಯದಲ್ಲಿ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್-ಕಾಲೇಜು ಆರಂಭಿಸಲಾಗಿದೆ. ಗಂಗಾವತಿ-ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲೂ ಇತ್ತೀಚೆಗೆ ಶ್ರೀವಿದ್ಯಾನಿಕೇತನ ಪಿಯು(ವಿಜ್ಞಾನ)ಕಾಲೇಜು ಆರಂಭಿಸಲಾಗಿದೆ.
- ವಿದ್ಯಾನಿಕೇತನ ಪಬ್ಲಿಕ್ ಶಾಲೆ ಶ್ರೀರಾಮನಗರದ ಗ್ರಾಮೀಣ ಭಾಗದಲ್ಲಿರುವುದರಿಂದ ಕಲಂ 371(ಜೆ) ಮತ್ತು ಗ್ರಾಮೀಣ ಕೃಪಾಂಕ ಮೀಸಲಾತಿ ಲಭ್ಯ ಇದೆ.
- ವಿದ್ಯಾನಿಕೇತನ ಶಾಲೆ ಸಿಬಿಎಸ್‌ಇ ವಸತಿ ಶಾಲೆ ರಾಜ್ಯ ಹಾಗೂ ಕೇಂದ್ರ ಸರಕಾರದ ಪರವಾನಗಿ ಪಡೆದಿದೆ. 01-12 ತರಗತಿವರೆಗೆ ಪರವಾನಗಿ ಇದೆ.(ಸಂಯೋಜಿತ ಸಂಖ್ಯೆ:830163)
- ವಿಜ್ಞಾನ ಪದವಿ ಪೂರ್ವ ಕಾಲೇಜು ರಿ.ನಂ.ಆರ್.ಕೆ.294(ಸ್ಟೇಟ್ ಸಿಲಾಬಸ್)
- ಪದವಿ ಕಾಲೇಜು(ಬಿಎಸ್ಸಿ, ಬಿಸಿಎ, ಮತ್ತು ಬಿಕಾಂ) 2023-24ಕ್ಕೆ ಪ್ರವೇಶ ಆರಂಭಿಸಲಾಗಿದೆ.
ಶ್ರೀರಾಮನಗರದ ಕ್ಯಾಂಪಸ್ ವಿವರ:
- 7ಎಕರೆ ವಿಸ್ತೀರ್ಣದಲ್ಲಿ 2 ಲಕ್ಷ ಚ.ಅಡಿಗಳಷ್ಟು ಶಾಲೆ- ಕಾಲೇಜು, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ಸಮುತ್ಛಯ ಇದೆ.
- ವಿಶಾಲ ಸುಸಜ್ಜಿತ ಆಟದ ಮೈದಾನವಿದೆ.
- ಮಕ್ಕಳಿಗೆ ಚಿಕ್ಕಂದಿನಲ್ಲೇ ಕೃಷಿ ತೋಟಗಾರಿಕೆ ಪರಿಚಯಿಸಲು 15 ಎಕರೆಯಲ್ಲಿ ಕಾಲೇಜಿನ ಕೃಷಿಭೂಮಿ ಇದೆ.
- ಸುರಕ್ಷತೆಗಾಗಿ ಶಾಲೆ-ಕಾಲೇಜು ಹೊರಾಂಗಣ, ಒಳಾಂಗಣ ಪ್ರದೇಶದಲ್ಲಿ ದಿನದ 24 ಗಂಟೆ ವಾಚ್‌ಮ್ಯಾನ್ ಹಾಗೂ ಸಿಸಿ ಕ್ಯಾಮರಾಗಳ ನಿಗಾ ವಹಿಸಿದೆ.
- ವೈದ್ಯಕೀಯ ಸೇವೆ ಮತ್ತು ಪಕ್ಕದಲ್ಲೇ ಸುಸಜ್ಜಿತ ತಾಲೂಕಿಗೆ ಮಾದರಿಯಾದ ಸರಕಾರಿ ಆಸ್ಪತ್ರೆ ಇದೆ.
- ವೃತ್ತಿಪರ ವಿದ್ಯಾರ್ಥಿ ಸ್ನೇಹಿಯಾದ ಸಂವಾದ ನಡೆಸುವ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಇಲ್ಲಿದೆ.
- ವಿಶ್ವದ ಖ್ಯಾತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಮೈಕ್ರೋಸಾಫ್ಟ್‌ನೊಂದಿಗೆ ಒಪ್ಪಂದದಂತೆ ಕಂಪ್ಯೂಟರ್ ಶಿಕ್ಷಣ ಇದೆ.
- 40 ದಿನಗಳಿಗೊಮ್ಮೆ ಮಕ್ಕಳ ಶೈಕ್ಷಣಿಕ ಪ್ರಗತಿ ಜೀವನ ಕ್ರಮಗಳ ಕುರಿತು ಪಾಲಕರು-ಶಿಕ್ಷಕರ ಸಭೆಗಳನ್ನು ಕರೆಯಲಾಗುತ್ತದೆ.
- ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಮೊಬೈಲ್ ಮೂಲಕ ಪಾಲಕರಿಗೆ ನಿರಂತರ ಮಾಹಿತಿ ನೀಡಲಾಗುತ್ತಿದೆ.
ಖುಷಿಯಿಂದ ಕೃಷಿ…
ಕೃಷಿ ವಿಷಯ ವಿದ್ಯಾನಿಕೇತನ ವಿದ್ಯಾಸಂಸ್ಥೆ ಪ್ರಮುಖ ಆದ್ಯತೆಯಾಗಿದೆ. ಮಕ್ಕಳಿಗೆ ಕೃಷಿಯ ಸಾಧಕ ಬಾಧಕಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ಸಂಸ್ಥೆ 15 ಎಕರೆ ಭೂಮಿಯಲ್ಲಿ ತೋಟಗಾರಿಕೆ, ಸಾವಯವ ಕೃಷಿ ಮಾಡಲಾಗಿದೆ. ಹನಿ ನೀರಾವರಿ, ಹೂವು, ತರಕಾರಿ ಬೆಳೆಗಳ ಕುರಿತು ಪ್ರತಿ ವಾರ ಮಾಹಿತಿ ನೀಡಲಾಗುತ್ತದೆ. ಪ್ರಾಯೋಗಿಕವಾಗಿ ಪಠ್ಯ ಕ್ರಮವಾಗಿ ಕಲಿಸಲಾಗುತ್ತದೆ.
- ಮಕ್ಕಳ ಕಾರ್ಯಕ್ಷಮತೆ, ಶಿಸ್ತು, ಹಾಜರಾತಿ ಹೋಂ ವರ್ಕ್ ಪೂರ್ಣಗೊಳಿಸಲು 20 ವಿದ್ಯಾರ್ಥಿಗಳಿಗೊಬ್ಬರಂತೆ ಶಿಕ್ಷಕರು-ಉಪನ್ಯಾಸಕರನ್ನು ಮೆಂಟರ್‌ಗಳನ್ನಾಗಿ ನಿಯೋಜಿಸಲಾಗಿದೆ.
ಹೊಂಗಿರಣ..
ಕಲಿಕೆಯಲ್ಲಿ ಹಿಂದೆ ಬೀಳುವ ವಿದ್ಯಾರ್ಥಿಗಳಿಗೆ ವಿಷಯಗಳ ಮನವರಿಕೆ ಮಾಡಲು ಹೊಂಗಿರಣ ಯೋಜನೆ ಮೂಲಕ ಅವರನ್ನು ಸಹ ಮುಖ್ಯ ವಿದ್ಯಾರ್ಥಿಗಳೊಂದಿಗೆ ಸೇರ್ಪಡೆ ಮಾಡಲಾಗುತ್ತಿದೆ. ಇಂಗ್ಲಿಷ್, ಕನ್ನಡ, ವಿಜ್ಞಾನದ ಮೂಲ ಪರಿಕಲ್ಪನೆ ಮೂಡಿಸಲಾಗುತ್ತದೆ.
- ಇಂಗ್ಲಿಷ್ ಸಂವಹನದೊಂದಿಗೆ ವಿದ್ಯಾರ್ಥಿಗಳನ್ನು ವಿಷಯದಲ್ಲಿ ಬಲಿಷ್ಠ ಮಾಡಲು ಆತ್ಮಸ್ಥೈರ್ಯ ತುಂಬಲು ಇಂಗ್ಲಿಷ್ ಮಾತನಾಡಲು ಇತರೆ ಮಕ್ಕಳೊಂದಿಗೆ ಶಿಕ್ಷಕ -ಉಪನ್ಯಾಸಕರು ಸಂವಾದ ನಡೆಸುತ್ತಾರೆ.
- ಇಂಗ್ಲೀಷ್ ವಿಜ್ಞಾನ, ಗಣಿತ ಮತ್ತು ಕಂಪ್ಯೂಟರ್ ಶಿಕ್ಷಣ ಉತ್ತೇಜನಕ್ಕೆ ಸಂಸ್ಥೆ ರಾಷ್ಟ್ರೀಯ ಮಟ್ಟದ ಎನ್‌ಟಿಎಸ್ಸಿ ಮತ್ತು ಒಲಿಂಪಿಯಾಡ್ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ.
- ಶ್ರೀರಾಮನಗರ, ಗಂಗಾವತಿ, ಹಗರಿಬೊಮ್ಮನಹಳ್ಳಿ ಪಿಯುಸಿ ವಿಜ್ಞಾನ ಕಾಲೇಜುಗಳಲ್ಲಿ ಸಿಇಟಿ, ನೀಟ್, ಜೆಇಇ, ಐಐಟಿ ಪ್ರವೇಶಕ್ಕೆ ಪೂರ್ವ ನಿಯೋಜಿತ ಪರೀಕ್ಷಾ ತರಬೇತಿ ಕ್ಲಾಸ್‌ಗಳನ್ನು ಆಯೋಜಿಸಲಾಗುತ್ತದೆ.
- ಪ್ರತಿ ವಾರ ಪಾಠಗಳ ಬೋಧನೆ ಕೊನೆಯಲ್ಲಿ ಟೆಸ್ಟ್ ಇಡಲಾಗುತ್ತಿದ್ದು, ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ.
- ಯೋಗ, ನೃತ್ಯ, ಕರಾಟೆ, ಕ್ರೀಡೆ, ಸಂಗೀತ ಇತರೆ ಪಠೇತರ ಕಾರ್ಯ ಚಟುವಟಿಕೆಗಳು ಆಯೋಜಿಸಲಾಗುತ್ತಿದೆ.
ರ್‍ಯಾಂಕ್ ಗಳಿಕೆಯಲ್ಲಿ ಮುಂದು
2019-20 ನೇ ಸಾಲಿನಲ್ಲಿ ಸಿಬಿಎಸ್‌ಇ 10 ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಸಮರ್ಥ ಆರ್ ಉಪ್ಪಳ್ ರಾಷ್ಟ್ರಮಟ್ಟದಲ್ಲಿ 8ನೇ ರ್‍ಯಾಂಕ್ ಪಡೆದು ಸಂಸ್ಥೆಯ ಕೀರ್ತಿ ಪತಾಕೆ ಹಾರಿಸಿದ್ದಾನೆ. 2022ರಲ್ಲಿ ಜರುಗಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ ಅನುಷಾ ಹರವಿ 600ಕ್ಕೆ 592 ಅಂಕ ಪಡೆದು ಟಾಪರ್ ಆಗಿದ್ದಾಳೆ.
2022ರ ಸಿಬಿಎಸ್ಸಿ ಪಠ್ಯಕ್ರಮದ 10ನೇ ತರಗತಿ ಪರೀಕ್ಷೆಯಲ್ಲಿ ಹಿಮ ಬಿಂದು ರಾಷ್ಟ್ರಮಟ್ಟದಲ್ಲಿ 8ನೇ ರ್‍ಯಾಂಕ್(ಶೇ.98.6 ರಷ್ಟು ಅಂಕ) ಪಡೆದು ಕೊಪ್ಪಳ ಮತ್ತು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾಳೆ.
ಕಲ್ಯಾಣ ಕರ್ನಾಟಕಕ್ಕೆ ದ್ವಿತೀಯ ಪಿಯುಸಿಯಲ್ಲಿ ಪ್ರಥಮ ಸ್ಥಾನ..
- 2020-21ನೇ ಸಾಲಿನ ದ್ವಿತೀಯ ಪಿಯುಸಿ(ವಿಜ್ಞಾನ ವಿಭಾಗ) ಪರೀಕ್ಷೆಯಲ್ಲಿ ಅಲ್ಲಮಪ್ರಭು 592 ಅಂಕ ಪಡೆದು ಕಲ್ಯಾಣ ಕರ್ನಾಟಕಕ್ಕೆ ಪ್ರಥಮ, ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದಾನೆ.
- 2022ರಲ್ಲಿ ಜರುಗಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ ಅನುಷಾ ಹರವಿ 600ಕ್ಕೆ 592 ಅಂಕ ಪಡೆದು ಟಾಪರ್ ಆಗಿದ್ದಾಳೆ.
-ಕೆ.ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.