Vijayanagara ಸಾಮ್ರಾಜ್ಯ ಸ್ಥಾಪನೆಯಾಗಿದ್ದು ಹಿಂದೂ ಧರ್ಮ ಸಂರಕ್ಷಣೆಗಾಗಿ: ವಿದ್ಯಾರಣ್ಯ ಶ್ರೀ
ಆನೆಗೊಂದಿ ರಾಜವಂಶಸ್ಥರ ವಿಜಯನಗರ ಉತ್ಸವಕ್ಕೆ ಚಾಲನೆ
Team Udayavani, Feb 8, 2024, 7:32 PM IST
ಗಂಗಾವತಿ:ಹಿಂದೂ ಧರ್ಮದ ಸಂರಕ್ಷಣೆಗಾಗಿ ವಿಜಯನಗರ ಸಾಮ್ರಾಜ್ಯ ದಕ್ಷಿಣ ಭಾರತದಲ್ಲಿ ಸ್ಥಾಪನೆಗೊಂಡು ಧರ್ಮ ಕಾರ್ಯವನ್ನು ನೆರವೇರಿಸಿದೆ ಎಂದು ಹಂಪಿ ಗಾಯತ್ರಿ ಪೀಠದ ಪೂಜ್ಯ ಭಾರತಿ ವಿದ್ಯಾರಣ್ಯ ಮಹಾಸ್ವಾಮಿಗಳು ಹೇಳಿದರು.
ಆನೆಗೊಂದಿಯ ಪುರಾತನ ಅರಮನೆಯಲ್ಲಿ ಆನೆಗೊಂದಿ ರಾಜವಂಶಸ್ಥರು ಆಯೋಜಿಸಿರುವ ವಿಜಯನಗರ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಜಯನಗರ ಸಾಮ್ರಾಜ್ಯದಲ್ಲಿ ಅರಸರು ಸರ್ವ ಜನಾಂಗಗಳನ್ನು ಪ್ರೀತಿ ವಿಶ್ವಾಸದ ಮೂಲಕ ಆಳ್ವಿಕೆ ನಡೆಸಿ ನೆಲ ಜಲ ಧರ್ಮ ಸಂರಕ್ಷಣೆ ಮಾಡುವ ಮೂಲಕ ಮಾದರಿಯಾಗಿದ್ದರು ದೇಶವಿದೇಶದ ಪ್ರವಾಸಿಗರು ವಿಜಯನಗರಕ್ಕೆ ಭೇಟಿ ನೀಡಿ ಇಲ್ಲಿಯ ಕೃಷಿ , ಶಿಲ್ಪಕಲೆ ಸಂಗೀತ ,ಸಾಹಿತ್ಯ ಮತ್ತು ಆಧ್ಯಾತ್ಮವನ್ನು ತಿಳಿದುಕೊಂಡು ಹೋಗಿದ್ದಾರೆ. ಭಾರತ ದೇಶ ಸ್ವಾತಂತ್ರ್ಯ ನಂತರ ವಿಜಯನಗರ ಸಾಮ್ರಾಜ್ಯದ ಹಲವು ಉಪಯುಕ್ತ ಮಾಹಿತಿಗಳನ್ನು ಗಣತಂತ್ರದಲ್ಲಿ ಅಳವಡಿಸಿಕೊಳ್ಳುವ ಮೂಲಕ ವಿಜಯನಗರದ ಪುಣ್ಯಸ್ಥಾನ ಮಾಡಲಾಗಿದೆ. ಜನರು ದೇಶ ಭಾಷೆ ಧರ್ಮದ ಬಗ್ಗೆ ಅಭಿಮಾನವುಳ್ಳವರಾಗಿರಬೇಕು ಎಂದರು.
ರಾಜ ವಂಶಸ್ಥ ಶ್ರೀ ಕೃಷ್ಣದೇವರಾಯ ಮಾತನಾಡಿ, ವಿಜಯನಗರ ಸಾಮ್ರಾಜ್ಯ ಮಾದರಿಯ ಸಾಮ್ರಾಜ್ಯವಾಗಿದ್ದು, ಈ ಕಾಲದಲ್ಲಿ ನೀರಾವರಿ ಸೇರಿದಂತೆ ಕೃಷಿ ಮತ್ತು ವ್ಯಾಪಾರ ಜವಳಿ ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ರಾಜ್ಯ ಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದ ನಂತರ ಜನರಿಗೆ ಬೇಕಾಗಿರುವ ಮೂಲ ಸೌಲಭ್ಯ ನೀಡುತ್ತಾ ಕಲೆ ಸಾಹಿತ್ಯ ಧರ್ಮವನ್ನು ಸರ್ವರೂ ಸಂರಕ್ಷಣೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಆನೆಗೊಂದಿ ರಾಜವಂಶಸ್ಥ ಮನೆತನದವರು ವಿಜಯನಗರ ಉತ್ಸವ ಆಯೋಜನೆ ಮಾಡಿ ಹಲವಾರು ಕಲೆಯ ಸಾಹಿತ್ಯ ಪ್ರಕಾರಗಳನ್ನು ಉಳಿಸುವ ಕೆಲಸ ಮಾಡುತ್ತಿದ್ದು, ಇದಕ್ಕೆ ಇಡೀ ಸಮುದಾಯ ಸಂರಕ್ಷಣೆ ಮಾಡಬೇಕಿದೆ ಎಂದರು. ಈ ಸಂದರ್ಭದಲ್ಲಿ ರಾಜಮಾತೆ ಚಂದ್ರಕಾಂತದೇವಿ ರತ್ನಶ್ರೀ ರಾಯ, ತಿರುಮಲ ದೇವರಾಯ ಸೇರಿದಂತೆ ಇತಿಹಾಸಕಾರರು ಮತ್ತು ಅಧ್ಯಯನಕಾರರು ಸ್ಥಳೀಯ ಆನೆಗೊಂದಿ ಗಣ್ಯರು ಪ್ರಮುಖರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.