ಕುಷ್ಟಗಿ: ಮಾರುತಿ ಚಿತ್ರಮಂದಿರದಲ್ಲಿ ವಿರಾಟಪುರ ವಿರಾಗಿ ಚಲನಚಿತ್ರ ಪ್ರದರ್ಶನ
ಉದಯವಾಣಿ ಇಂಪ್ಯಾಕ್ಟ್
Team Udayavani, Jan 14, 2023, 1:14 PM IST
ಕುಷ್ಟಗಿ: ಹಾನಗಲ್ಲ ಶ್ರೀ ಗುರು ಕುಮಾರಸ್ವಾಮೀಗಳು ಇಲ್ಲದೇ ಇದ್ದಲ್ಲಿ ನಮ್ಮಂತಹ ಮಠಾಧೀಶರು ಕಾವಿ ತೊಡುತ್ತಿರಲಿಲ್ಲ ಎಂದು ಕುಷ್ಟಗಿ ಮದ್ದಾನೇಶ್ವರ ಮಠದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕುಷ್ಟಗಿ ಮಾರುತಿ ಚಿತ್ರಮಂದಿರದಲ್ಲಿ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ಜೀವನಾಧರಿತ ವಿರಾಟಪುರ ವಿರಾಗಿ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಾನಗಲ್ ಗುರು ಕುಮಾರಸ್ವಾಮಿಗಳು ವೀರಶೈವ ಲಿಂಗಾಯತ ಧರ್ಮ ಸಂಸ್ಥಾಪಕರಾಗಿ ಧರ್ಮವನ್ನು ಮುನ್ನೆಡಿಸಿದ ಕೀರ್ತಿ ಹಾನಗಲ್ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ. ಶಿವಯೋಗ ಮಂದಿರದಲ್ಲಿ ಗೋವು ಸಾಕಾಣಿಕೆ, ದೀನ- ದಲಿತರಿಗೆ ಸನ್ಮಾರ್ಗವನ್ನು ಕರುಣಿಸಿದವರಾಗಿದ್ದಾರೆ. ಇಂತಹ ಮಹಾನೀಯರ ಚಿತ್ರವನ್ನು ಈಗಿನ ಪೀಳಿಗೆಗೆ ತಿಳಿಯಲಿ ಎನ್ನುವ ಸದುದ್ದೇಶದ ಹಿನ್ನೆಲೆಯಲ್ಲಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.ಈ ಚಿತ್ರವನ್ನು ಸರ್ವ ಧರ್ಮಿಯರು ವೀಕ್ಷಿಸಿ ಅವರ ಜೀವನ ಮೌಲ್ಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಾರುತಿ ಚಿತ್ರ ಮಂದಿರದಲ್ಲಿ ಪ್ರತಿ ದಿನ ನಾಲ್ಕು ಪ್ರದರ್ಶನಗಳಿದ್ದು, ಭಕ್ತಾದಿಗಳು ಈ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದ ಅವರ ಮಕರ ಸಂಕ್ರಾಂತಿಯ ಶುಭಾಶಯಗಳು ಹಾರೈಸಿದರು.
ದೇವೇಂದ್ರಪ್ಪ ಬಳೂಟಗಿ, ಎಸ್.ಎಚ್. ಹಿರೇಮಠ, ಟಿ.ಬಸವರಾಜ್, ಕೆ.ಮಹೇಶ, ದೊಡ್ಡಬಸನಗೌಡ ಪಾಟೀಲ ಬಯ್ಯಾಪೂರ, ಬಸನಗೌಡ ಪಾಟೀಲ, ಶಿವಕುಮಾರ ಗಂಧದಮಠ, ಶಾಂತರಾಜ ಗೋಗಿ, ಹ.ಯ.ಈಟಿಯವರ್, ಮುತ್ತಣ್ಣ ಬಾಚಲಾಪೂರ, ಚಿತ್ರಮಂದಿರ ಮಾಲೀಕ ವಿಶ್ವನಾಥ ಮಹಾಂತಯ್ಯಮಠ, ವ್ಯವಸ್ಥಾಪಕ ನವಾಜ್, ಕಿರಣ ಜ್ಯೋತಿ, ಬಸವರಾಜ ಗಾಣಗೇರ, ವೀರೇಶ ಬಾಗಲವಾಡ ಹಿರೇಮಠ, ಮಲ್ಲಪ್ಪ ಗದ್ದಿ, ಶರಣಪ್ಪ ಬೆಳ್ಯಾಲ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.