ನಗರಸಭೆ ನೌಕರರ ಕೈಗೆ ವಾಕಿ-ಟಾಕಿ

ಆಡಳಿತ ಚುರುಕುಗೊಳಿಸಲು ಹೊಸಯತ್ನ|ಮೇಲುಸ್ತುವಾರಿ 40 ನೌಕರರಿಗೆ ವಾಕಿ-ಟಾಕಿ

Team Udayavani, Mar 19, 2021, 9:25 PM IST

fgw

ಕೊಪ್ಪಳ: ಮೊದಲೆಲ್ಲಾ ಪೊಲೀಸರ ಕೈಯಲ್ಲಿ ಕಾಣುತ್ತಿದ್ದ ವೈಯರ್‌ಲೆಸ್‌ ವಾಕಿ-ಟಾಕಿ ಇನ್ಮುಂದೆ ನಗರಸಭೆ ನೌಕರರ ಕೈಯಲ್ಲೂ ಜನರು ಕಾಣಬಹುದಾಗಿದೆ.

ವಾರ್ಡಿನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಕಡತಗಳ ಸಮಸ್ಯೆ, ಪೆಂಡಿಂಗ್‌ ವರ್ಕ್‌ ಸೇರಿ ಯಾವುದೇ ಸಮಸ್ಯೆಯಿದ್ದರೂ ಪೌರಾಯುಕ್ತರು ನೇರವಾಗಿಯೇ ನೌಕರರಿಗೆ ವಾಕಿ-ಟಾಕಿಯಲ್ಲಿ ಮಾಹಿತಿ ಪಡೆಯಬಹುದು. ಸಮಸ್ಯೆ ಇತ್ಯರ್ಥಕ್ಕೆ ಇದೊಂದು ಸುಲಲಿತ ಮಾರ್ಗವಾಗಿದೆ. ನಗರಸಭೆ ಆಡಳಿತ ಯಂತ್ರ ಚುರುಕುಗೊಳಿಸಲು, ಜನರಿಗೆ ಸಕಾಲಕ್ಕೆ ಸಮಸ್ಯೆ ನಿವಾರಣೆಗೆ ಮುಂದಾಗಲು ಪೌರಾಯುಕ್ತ ಮಂಜುನಾಥ ಅವರು ಹೊಸದೊಂದು ಪ್ರಯತ್ನಕ್ಕೆ ಮುಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ದಿನದಲ್ಲಿ ಎಲ್ಲೆಡೆ ಆಡಳಿತ ವರ್ಗ ಜಿಡ್ಡುಗಟ್ಟಿದೆ. ಯಾವುದೇ ಕೆಲಸಗಳು ಸರಿಯಾಗಿ ನಡೆಯಲ್ಲ. ವಾರ್ಡಿನ ಸಮಸ್ಯೆಗಳನ್ನು ಕೇಳುವವರೇ ಇಲ್ಲ ಎನ್ನುವ ಆರೋಪ, ದೂರು ನಗರದಲ್ಲಿ ಸಹಜವಾಗಿ ಕೇಳಿ ಬರುತ್ತಿವೆ. ವಾರ್ಡ್‌ನಲ್ಲಿ ನಾಯಿ, ಹಂದಿ ಸತ್ತರೂ ಕಾರ್ಮಿಕರು ಅದನ್ನು ತೆಗೆದು ಹಾಕಲು ನಾಲ್ಕಾರು ದಿನ ತೆಗೆದುಕೊಳ್ಳುತ್ತಾರೆ. ಕುಡಿಯುವ ನೀರು ಪೂರೈಕೆಯಲ್ಲೂ ಇಂತಹ ಸಮಸ್ಯೆ ಇದೆ.

ಇನ್ನೂ ಮೇಲಾಧಿಕಾರಿಗಳು ತಮ್ಮ ಕಚೇರಿ ಸಿಬ್ಬಂದಿ, ಮೇಲುಸ್ತುವಾರಿಗೆ ಮೊಬೈಲ್‌ ಮೂಲಕ ಕರೆ ಮಾಡಿದರೆ ಒಂದಿಲ್ಲೊಂದು ಕಾರಣ ಹೇಳುವುದು. ಕೆಲವರು ಮೊಬೈಲ್‌ ಸ್ವಿಚ್‌ಆಫ್‌ ಮಾಡಿಕೊಳ್ಳುವುದು. ಇಲ್ಲವೇ ಮೊಬೈಲ್‌ ಬ್ಯೂಸಿ ಮಾಡಿಕೊಂಡು ಓಡಾಡುವ ಪ್ರಸಂಗಗಳು ನಡೆದಿವೆ. ಹಾಗಾಗಿ ಆಡಳಿತಕ್ಕೆ ವೇಗ ಸಿಗುತ್ತಿಲ್ಲ. ಹಿರಿಯ ಅ ಧಿಕಾರಿಗಳು ಕರೆ ಮಾಡಿದರೂ ಸ್ಪಂದನೆ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲವನ್ನು ದೂರ ಮಾಡಿ ಜನರಿಗೆ ಸುಲಲಿತವಾಗಿ ಸೇವೆ ಕೊಡಲು, ಜೊತೆಗೆ ವಾರ್ಡಿನ ಸಮಸ್ಯೆಯು ಅ ಧಿಕಾರಿಗಳ ಗಮನಕ್ಕೆ ಬಂದರೆ ತಕ್ಷಣ ಮೇಲುಸ್ತುವಾರಿಗಳಿಗೆ ಸಮಸ್ಯೆ ಗಮನಕ್ಕೆ ತಂದು ಅದನ್ನು ನಿವಾರಿಸಲು ವಾಕಿ-ಟಾಕಿ ಪ್ರಯೋಗ ಮಾಡಲಾಗಿದೆ.

 40 ನೌಕರರಿಗೆ ವಾಕಿ-ಟಾಕಿ:

ಕೊಪ್ಪಳ ನಗರಸಭೆಯ ಪ್ರಮುಖ 40 ನೌಕರರಿಗೆ ವಾಕಿ-ಟಾಕಿ ವಿತರಣೆ ಮಾಡಲಾಗಿದೆ. ಇಲ್ಲಿ ಪೌರಾಯುಕ್ತರು ಕಚೇರಿಯಲ್ಲಿಯೇ ಕುಳಿತು ಯಾವುದೇ ಕಡತದ ವಿಷಯಕ್ಕೆ ಸಂಬಂ ಧಿಸಿದಂತೆ ವಾಕಿಯಲ್ಲಿ ನೇರವಾಗಿ ತಮ್ಮ ಸಿಬ್ಬಂದಿಯಿಂದ ಮಾಹಿತಿ ಪಡೆಯಲು ನೆರವಾಗಲಿದೆ. ಇನ್ನೂ ಕುಡಿಯುವ ನೀರಿನ μಲ್ಟರ್‌ ಇರುವ ಸ್ಥಳದಲ್ಲಿ, ಕಾತರಕಿ ಬಳಿಯ ಜಾಕ್‌ವೆಲ್‌ ಪಾಯಿಂಟ್‌ನಲ್ಲಿ, ಕಸ ವಿಲೇವಾರಿ ಘಟಕ, ಮುನಿರಾಬಾದ್‌ ಪಾಯಿಂಟ್‌ನಲ್ಲಿ ವಾಕಿ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾದರೆ ತಕ್ಷಣವೇ ವಾಕಿ ಮೂಲಕ ಅಲ್ಲಿನ ಸಿಬ್ಬಂದಿಗೆ ಮಾಹಿತಿ ತಿಳಿಸಿ, ಯಾವ ಸಮಸ್ಯೆ ಇದೆ. ಅದಕ್ಕೆ ಪರಿಹಾರವೇನು ಎನ್ನುವುದನ್ನು ಕಂಡುಕೊಳ್ಳಲು ಈ ವಾಕಿ ನೆರವಾಗಲಿದೆ.

ನಗರದ ಯಾವುದೇ ವಾರ್ಡ್‌ನಲ್ಲಿ ಕುಡಿಯುವ ನೀರು, ವಿದ್ಯುತ್‌ ಸಮಸ್ಯೆ, ಚರಂಡಿ ಸ್ವತ್ಛಗೊಳಿಸುವುದು, ಕಸದ ಸಮಸ್ಯೆಯ ಕುರಿತು ಆ ವಾರ್ಡಿನ ಜನತೆ ನಗರಸಭೆ ಅಧಿ ಕಾರಿಗಳ ಗಮನಕ್ಕೆ ತಂದರೆ ತಕ್ಷಣವೇ ಆಯಾ ವಾರ್ಡಿನ ಮೇಲುಸ್ತುವಾರಿಗೆ ವಾಕಿ ಮೂಲಕ ಸಮಸ್ಯೆ ಗಮನಕ್ಕೆ ತಂದು ತಕ್ಷಣವೇ ಪರಿಹಾರ ಮಾಡಲಿದ್ದಾರೆ. ಈ ವಾಕಿ-ಟಾಕಿಯು ಕನಿಷ್ಠ 5 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಸಂಪರ್ಕ ಸಾ ಧಿಸಲಿದೆ. ಇಲ್ಲಿ ಯಾವುದೇ ಅಧಿಕಾರಿಗಳು ಸುಳ್ಳು ಹೇಳುವಂತಿಲ್ಲ. ಕಾರಣವನ್ನೂ ಹೇಳುವಂತಿಲ್ಲ.

ದತ್ತು ಕಮ್ಮಾರ 

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್‌ ಕೊಪ್ಪಳದಲ್ಲಿ ಆತ್ಮಹ*ತ್ಯೆ

Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್‌ ಕೊಪ್ಪಳದಲ್ಲಿ ಆತ್ಮಹ*ತ್ಯೆ

13(1

Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು

12-

Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು

Shivaraj-Tangadagi

Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್‌ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.