![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, May 3, 2022, 2:57 PM IST
ಕುಕನೂರು: ಶರಣರು ನಡೆದ ಈ ಪುಣ್ಯದ ನಾಡಲ್ಲಿ ಪ್ರತಿಯೊಬ್ಬರು ಶರಣರ ತತ್ವಾದರ್ಶಗಳ ಪಾಲಕರಾದರೆ ಸದ್ಗುಣಗಳು ಪ್ರಾಪ್ತಿಯಾಗುತ್ತವೆ ಎಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ತಿಂಥಣಿ ಶಾಖಾಮಠದ ಸಿದ್ಧರಾಮಾನಂದಪುರಿ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಭಟಪನಳ್ಳಿಯಲ್ಲಿ ಶ್ರೀ ಭೀಮಾಂಬಿಕಾದೇವಿ ಮೂರ್ತಿ ಪ್ರತಿಷ್ಠಾಪನೆ, ಪುರಾಣ ಮಂಗಲೋತ್ಸವ ಹಾಗೂ ದೇವಿಯ ಜಾತ್ರಾ ನಿಮಿತ್ತ ಹಮ್ಮಿಕೊಳ್ಳಲಾದ ಸಾಮೂಹಿಕ ವಿವಾಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಸಾನಿಧ್ಯ ವಹಿಸಿ ಮಾತನಾಡಿದರು.
ಮನಷ್ಯನಲ್ಲಿ ಸದ್ಗುಣ, ಸದ್ವಿಚಾರ, ಸದಾಚಾರ, ಸಹಬಾಳ್ವೆ ಭಾವನೆಗಳು ಬಂದಾಗ ಅವನ ಮೌಲ್ಯ ಹೆಚ್ಚಿಸಿ ದೇವರ ರೂಪ ಪಡೆಯುತ್ತಾನೆ. ಹಿಂದೆ ಶರಣಾಧೀಶರಲ್ಲಿ ಪರೋಪಕಾರ, ತ್ಯಾಗಮಯ ಬದುಕು ಧರ್ಮದ ತಳಹದಿಯಲ್ಲಿ ನಡೆದುದ್ದರಿಂದ ಇಂದು ನಾವು ಅವರ ಆರಾಧಕರಾಗಿದ್ದೇವೆ. ಶರಣರು ನೀಡಿದ ಸಂದೇಶಗಳು ಪ್ರಸ್ತುತ ಅತ್ಯಂತ ಮಹತ್ವದಾಯಕವಾಗಿವೆ. ಮನುಷ್ಯರಲ್ಲಿ ಮಾನವೀಯ ಗುಣಗಳನ್ನು ಕಾಯ್ದುಕೊಂಡು ಭಾವೈಕ್ಯತೆಗೆ ನಾಂದಿಯಾಗಿವೆ. ಶ್ರೀ ಭೀಮಾಂಬಿಕಾ ದೇವಿ ಹಲವು ನಿಂದನೆಗಳನ್ನು ಅನುಭವಿಸಿದರೂ ಅವನ್ನೆಲ್ಲ ಮೆಟ್ಟಿ ನಿಂತು ಧರ್ಮದಿಂದ ನಡೆದುಕೊಂಡು ದೇವತೆಯಾದಳು. ಶ್ರೀ ಭೀಮಾಂಬಿಕೆ ಅಂತಹವರ ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸದಾ ಸದ್ಗುಣಿಗಳಾಗಿ ಬದುಕಬೇಕು. ಧರ್ಮದ ಸ್ಥಳದಲ್ಲಿ ವಿವಾಹಿತರಾದ ನವ ದಂಪತಿಗಳು ಜೀವನದಲ್ಲಿ ಪರಸ್ಪರ ಅರ್ಥೈಹಿಸುಕೊಂಡು ಆದರ್ಶ ದಂಪತಿಗಳಾಗಬೇಕು ಎಂದು ಆಶಿರ್ವದಿಸಿದರು.
ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಸಂಸದ ಸಂಗಣ್ಣ ಕರಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಭಾವೈಕ್ಯತೆ, ಒಗ್ಗಟ್ಟು ತಾಳ್ಮೆ ಸ್ವಭಾವ ಪಟ್ಟಣದಲ್ಲಿ ಕಾಣಲು ಸಾಧ್ಯವಿಲ್ಲ. ಸಾಮೂಹಿಕ ವಿವಾಹಗಳಂತಹ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುವುದರಿಂದ ಸಮಾಜದಲ್ಲಿ ಪರಸ್ಪರ ಬಾಂಧವ್ಯ ಜತೆಗೆ ಸಮಾನತೆ ಮೂಡುತ್ತದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಗುಳಗಣ್ಣವರ ಮಾತನಾಡಿ, ಶರಣರ ಜೀವನದ ಚರಿತ್ರೆಯನ್ನು ಆಲಿಸುವುದು ಆತ್ಮ ಶುದ್ಧಿಗೆ ಪೂರಕವಾಗಿದೆ. ಭಟಪನಳ್ಳಿ ಗ್ರಾಮ ಚಿಕ್ಕದಾದರೂ ಅಧ್ಯಾತ್ಮಿಕ ಕಾರ್ಯಗಳಲ್ಲಿ ಶ್ರೀಮಂತವಾಗಿದೆ. ಹಿರಿಯರು, ಯುವಕರು ಒಂದಾಗಿ ಸಾಮೂಹಿಕ ವಿವಾಹಗಳಂತಹ ಕಾರ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸುವುದು ಸಾಮಾನ್ಯದ ಕೆಲಸವಲ್ಲ ಎಂದು ಶ್ಲಾಘಿಸಿದರು.
ಶಿವಸಮಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶಿವಶಾಂತವೀರ ಶರಣರು, ಪೂಜ್ಯರಾದ ಮಹಾದೇವಯ್ಯ ದೇವರು, ಚಿದಾನಂದಯ್ಯ ಗುರುವಿನ ಸಾನಿಧ್ಯ ವಹಿಸಿದ್ದರು. ಡಾ| ಎಚ್.ಡಿ. ಪಾಟೀಲ್ ಅಧ್ಯಕ್ಷತೆ ವಹಿಸಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ರಾಜ್ಯ ಕುರಿ ಮತ್ತು ಹುಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೆರೆ ಮಾತನಾಡಿದರು. ವೀರನಗೌಡ ಪಾಟೀಲ್ ಬಳೂಟಗಿ, ಸಿದ್ಧಣ್ಣ ನೀರಲೂಟಿ, ಮರಿಯಪ್ಪ ಅಳವುಂಡಿ, ಗ್ರಾಪಂ ಅಧ್ಯಕ್ಷ ಮಹೇಶ ದೊಡ್ಮನಿ, ಪಿಡಿಒ ಪರಶುರಾಮ ನಾಯಕ್, ಜಡಿಯಪ್ಪ ಬಂಗಾಳಿ, ತಹಶೀಲ್ದಾರ್ ಕಿಶನ್ ಕಲಾಲ್ ಇದ್ದರು. ಶಿವರಾಜ ಗುರಿಕಾರ ನಿರ್ವಹಿಸಿದರು. 8 ಜತೆ ಸಾಮೂಹಿಕ ವಿವಾಹ, 108 ಕುಂಭಮೇಳ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
You seem to have an Ad Blocker on.
To continue reading, please turn it off or whitelist Udayavani.