25ರಿಂದ ತುಂಗಭದ್ರಾ ಜಲಾಶಯ ಕಾಲುವೆಗಳಿಗೆ ನೀರು
Team Udayavani, Jul 22, 2020, 9:18 AM IST
ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಜು.25ರಿಂದ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ನಿರ್ಧರಿಸಿದ್ದಾರೆ ಎಂದು ತುಂಗಭದ್ರಾ ಯೋಜನಾ ವೃತ್ತದ ಅಧಿಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ತುಂಗಭದ್ರಾ ಡ್ಯಾಂನಿಂದ ಬಲದಂಡೆ ಕೆಳಮಟ್ಟದ ಕಾಲುವೆಗೆ ಜು.25ರಿಂದ ನ.30ರ ವರೆಗೂ 700 ಕ್ಯೂಸೆಕ್ ನಂತೆ ನೀರು ಹರಿಸಲಾಗುವುದು. ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಜು.25ರಿಂದ ನ.30ರ ವರೆಗೂ 1280 ಕ್ಯೂಸೆಕ್ ನೀರು, ರಾಯ-ಬಸವಣ್ಣ ಕಾಲುವೆಗೆ ಜೂ.1ರಿಂದ ಡಿ.10ರ ವರೆಗೂ 250 ಕ್ಯೂಸೆಕ್ ನೀರು, ನದಿಗೆ ಪೂರಕವಾಗಿ ಜು.25ರಿಂದ ನ.30ರ ವರೆಗೂ 60 ಕ್ಯೂಸೆಕ್ ನೀರು ಹರಿಸಲಾಗುವುದು. ಇನ್ನೂ ಎಡದಂಡೆ ಮುಖ್ಯ ಕಾಲುವೆ ಮತ್ತು ಮೇಲ್ಮಟ್ಟದ ಕಾಲುವೆಗೆ ಜು.25 ರಿಂದ ನ.30ರ ವರೆಗೂ 4100 ಕ್ಯೂಸೆಕ್‌ನಂತೆ ನೀರು, ಕಾರ್ಖಾನೆಗಳಿಗೆ ಜು.25ರಿಂದ ನ.30ರ ವರೆಗೂ 60 ಕ್ಯೂಸೆಕ್, ಏತ ನೀರಾವರಿ ಯೋಜನೆಗಳಿಗೆ ಜು.25 ರಿಂದ ನ.30ರ ವರೆಗೂ 100 ಕ್ಯೂಸೆಕ್ ನಂತೆ ನೀರು ಹರಿಸಲು ನಿರ್ಧರಿಸಲಾಗಿದೆ. ಆನ್ ಆ್ಯಂಡ್ ಆಫ್ ಪದ್ಧತಿ ಅಳವಡಿಕೆ: ತುಂಗಭದ್ರಾ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೆ ನೀರು ಒದಗಿಸಲು ಕಳೆದ ವರ್ಷದಂತೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಆನ್ ಆ್ಯಂಡ್ ಆಫ್ ಪದ್ಧತಿ ಅನುಸಾರ ಕಾಲುವೆಗಳಿಗೆ ನೀರು ಹರಿಸಲು ನಿರ್ಧಾರ ಮಾಡಲಾಗಿದೆ.
ಆನ್ ಆ್ಯಂಡ್ ಆಫ್ ಪದ್ಧತಿಯಂತೆ, ವಿತರಣಾ ಕಾಲುವೆ ಸಂಖ್ಯೆ 1 ರಿಂದ 16, 49,51,52,55,56 ಕಾಲುವೆಗೆ ಸೆ.1ರ ಬೆಳಗ್ಗೆ 8ರಿಂದ ಸೆ.4ರ ಬೆಳಗ್ಗೆ 8ರ ವರೆಗೂ, ಅ.01ರ ಬೆಳಗ್ಗೆ 8 ರಿಂದ ಅ.4ರ ಬೆಳಗ್ಗೆ 8 ಗಂಟೆ, ನ.1ರ ಬೆಳಗ್ಗೆ 8 ರಿಂದ ನ.4ರ ಬೆಳಗ್ಗೆ 8 ಗಂಟೆವರೆಗೂ, ಡಿ.1ರ ಬೆಳಗ್ಗೆ 8 ರಿಂದ ಡಿ.4ರ ಬೆಳಗ್ಗೆ 8ರ ವರೆಗೂ ಈ ವಿತರಣಾ ಕಾಲುವೆಗೆ ನೀರು ಹರಿಸುವುದು ಭಾಗಶಃ ಬಂದ್ ಮಾಡಲಾಗುವುದು.
ಇನ್ನೂ ವಿತರಣಾ ಕಾಲುವೆ 17ರಿಂದ 25, 36,37, 38, 40, 41, 42, 44, 45, 46, 48 ಕಾಲುವೆಗೆ ಸೆ.4ರ ಬೆಳಗ್ಗೆ 8 ರಿಂದ ಸೆ.7ರ ಬೆಳಗ್ಗೆ 8ರ ವರೆಗೂ, ಅ.4ರ ಬೆಳಗ್ಗೆ 8 ರಿಂದ ಅ.7ರ ಬೆಳಗ್ಗೆ 8ರ ವರೆಗೂ, ನ.4ರ ಬೆಳಗ್ಗೆ 8 ರಿಂದ ನ.7ರ ಬೆಳಗ್ಗೆ 8ರ ವರೆಗೂ, ಡಿ.4ರ ಬೆಳಗ್ಗೆ 8 ರಿಂದ ಡಿ.7ರ ಬೆಳಗ್ಗೆ 8ರ ವರೆಗೂ ನೀರು ಈ ಕಾಲುವೆಗಳಿಗೆ ನೀರು ಹರಿಸುವುದು ಬಂದ್ ಮಾಡಲಾಗುವುದು.
ಇನ್ನೂ ವಿತರಣಾ ಕಾಲುವೆ 27 ರಿಂದ 34, 62,63, 65, 66, 69, 71/ಎ, 73, 74, 78, 79, 81, 82, 84ನೇ ಕಾಲುವೆಗಳಿಗೆ ಸೆ.7ರ ಬೆಳಗ್ಗೆ 8 ರಿಂದ ಸೆ.10ರ ಬೆಳಗ್ಗೆ 8 ಗಂಟೆವರೆಗೂ, ಅ.7ರ ಬೆಳಗ್ಗೆ 8 ರಿಂದ ಅ.10ರ ಬೆಳಗ್ಗೆ 8ರ ವರೆಗೂ, ನ.7ರ ಬೆಳಗ್ಗೆ 8ರಿಂದ ನ.10ರ ಬೆಳಗ್ಗೆ 8ರ ವರೆಗೂ, ಡಿ.7ರ ಬೆಳಗ್ಗೆ 8 ರಿಂದ ಡಿ.10ರ ಬೆಳಗ್ಗೆ 8ರ ವರೆಗೂ ನೀರು ಹರಿಸುವುದು ಸ್ಥಗಿತ ಮಾಡಲಾಗುವುದು.
ಇನ್ನೂ ವಿತರಣಾ ಕಾಲುವೆ 76, 85,87, 89, 90,91,92ರ ವರೆಗೂ ಸೆ.10ರ ಬೆಳಗ್ಗೆ 8 ರಿಂದ ಸೆ.13ರ ಬೆಳಗ್ಗೆ 8ರ ವರೆಗೂ, ಅ.10ರ ಬೆಳಗ್ಗೆ 8 ರಿಂದ ಅ.13ರ ಬೆಳಗ್ಗೆ 8ರ ವರೆಗೂ, ನ.10ರ ಬೆಳಗ್ಗೆ 8 ರಿಂದ ನ.13ರ ಬೆಳಗ್ಗೆ 8ರ ವರೆಗೂ, ಡಿ.10ರ ಬೆಳಗ್ಗೆ 8 ರಿಂದ ಡಿ.13ರ ಬೆಳಗ್ಗೆ 8ರ ವರೆಗೂ ಕಾಲುವೆಗೆ ನೀರು ಹರಿಸುವುದು ಸ್ಥಗಿತ ಮಾಡಲು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ನಿರ್ಧರಿಸಿದ್ದಾರೆಂದು ನೀರಾವರಿ ಅಭಿಯಂತರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.