ಕೃಷ್ಣಾ ಬಿ ಸ್ಕೀಂ ಏತ ನೀರಾವರಿ ಪೈಪಲೈನ್ ಸೋರಿಕೆ
10-15 ಎಕರೆ ಜಮೀನಿನಲ್ಲಿ ಕೊಚ್ಚಿ ಹೋದ ಮಣ್ಣು
Team Udayavani, Apr 27, 2022, 11:48 AM IST
ಕುಷ್ಟಗಿ: ಕೃಷ್ಣಾ ಬಿ ಸ್ಕೀಂ ಏತ ನೀರಾವರಿ ಯೋಜನೆ ಬೃಹತ್ ಪೈಪಲೈನ್‌ನಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲಾಗಿದ್ದು, ಮುದುಟಗಿ ಗ್ರಾಮದ ಬಳಿ ಎರಡು ಕಡೆ ಪೈಪ್‌ಲೈನ್ ಸೋರಿಕೆಯಿಂದ ರೈತರ ಜಮೀನಿನ ಮಣ್ಣು ಕೊಚ್ಚಿ ಹೋಗಿದೆ.
ಕೃಷ್ಣಾ ಬಿಸ್ಕೀಂ ಕೊಪ್ಪಳ ಏತ ನೀರಾವರಿ ಯೋಜನೆಯಲ್ಲಿ ಮುದಟಗಿ ಬಳಿ 620 ಆರ್. ಎಲ್.ಗೆ ಮಿನಿ ಡೆಲೆವರಿ ಚೇಂಬರ್ ಹಾಗೂ 640 ಆರ್.ಎಲ್.ಗೆ ಕಲಾಲಬಂಡಿ ಡೆಲೆವರಿ ಚೇಂಬರ್ ನಿರ್ಮಿಸಲಾಗಿದೆ. ಇತ್ತೀಚಿಗೆ ಕಲಾಲಬಂಡಿಯ ಡೆಲೆವರಿ ಚೇಂಬರ್‌ವರೆಗೆ ಪ್ರಾಯೋಗೀಕವಾಗಿ ನಾರಾಯಣಪುರ ಜಲಾಶಯದ ಕೃಷ್ಣಾ ಹಿನ್ನೀರನ್ನು ಒಂದು ಪಂಪ್ ಮೂಲಕ ಹರಿಸಲಾಗಿದೆ. ಮಂಗಳವಾರ ಬೆಳಗ್ಗೆ ಹೂಲಗೇರಾ ಸಂಪರ್ಕಿಸುವ ಮುದುಟಗಿ ಡೆಲಿವೆರಿ ಚೇಂಬರ್ ಗೆ ಪ್ರಯೋಗೀಕವಾಗಿ ಎರಡು ಪಂಪ್ ಮೂಲಕ ನೀರು ಹರಿಸಿರುವುದಕ್ಕೆ ಮುದುಟಗಿ ಬಳಿ ಭಾರಿ ಪ್ರಮಾಣದಲ್ಲಿ ನೀರು ಸೋರಿಕೆಯಾಗಿದೆ.
ಮುದುಟಗಿ ಬಳಿ ರೈತ ಸಿದ್ಧಪ್ಪ ಬಿಂಗಿ, ನಾಗಪ್ಪ ಬಾವಿಮನಿ ಅವರ ಹೊಲದಲ್ಲಿ ಅಳವಡಿಸಿರುವ ಪೈಪ್ ವೆಲ್ಡಿಂಗ್ ಕಿತ್ತು ಹೋದ ಪರಿಣಾಮವಾಗಿ ಜಮೀನಿನಲ್ಲಿ ಫಲವತ್ತಾದ ಮಣ್ಣು ಕಿತ್ತು ಹೋಗಿದೆ ಮತ್ತು ಮಹಾಂತೇಶ ಕುಂಬಾರ ಅವರ ಇಟ್ಟಂಗಿ ಬಟ್ಟಿ ಸಹ ಹಾಳಾಗಿದೆ. ಅಂದಾಜು 10ರಿಂದ 15 ಎಕರೆ ಜಮೀನು ಸಂಪೂರ್ಣ ಹಾನಿಯಾಗಿದೆ ಎಂದು ರೈತರು ಅಳಲು ತೊಡಿಕೊಂಡರು. ಪೈಪ್ ಲೈನ್ ಸೋರಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೂಡಲೇ ನೀರು ಹರಿವು ಸ್ಥಗಿತಗೊಳಿಸಿ, ದುರಸ್ತಿಗೆ ಮುಂದಾಗಲು ಸಂಬಂಧಿ ಸಿದ ಕೆಬಿಜೆ ಎನ್.ಎಲ್. ಅಧಿಕಾರಿಗಳಿಗೆ ಸೂಚಿಸಿದರು. ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ ಮಾತನಾಡಿ, ಕೊಪ್ಪಳ ಏತ ನೀರಾವರಿ ಯೋಜನೆಯನ್ನು ತಾತ್ಕಾಲಿಕವಾಗಿ ಬಲಕುಂದಿಯವರೆಗೆ ನೀರು ಬಂದಿತ್ತು. ಅಲ್ಲಿಂದ ಕಲಾಬಂಡಿ ಡೆಲೆವರಿ ಚೇಂಬರ್‌ಗೆ ನೀರು ಎತ್ತುವಳಿ ಸಂದರ್ಭದಲ್ಲಿ ಮುದುಟಗಿ ಬಳಿ ಎರಡು ಕಡೆ ಸೋರಿಕೆಯಾಗಿದೆ. ಇಲಾಖೆ ಅಧಿಕಾರಿಗಳು ಗಮನಿಸಿ ಕೆಲಸ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಬಾರದು. ನೀರು ಹರಿದು ಜಮೀನು ಕೊಚ್ಚಿ ಹೋಗಿದ್ದು, ಬಾವಿಯಲ್ಲಿ ಹೂಳು ತುಂಬಿದ್ದು ಇದಕ್ಕೆ ಪರಿಹಾರ ಕೊಡಿಸಲು ಸಂಬಂ ಧಿಸಿದ ಅಧಿ ಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.