ಕುಷ್ಟಗಿ: ಕುಡಿಯುವ ನೀರಿನ ಹಾಹಾಕಾರ: ಬೇಸತ್ತ ಗ್ರಾಮಸ್ಥರಿಂದ ಖಾಲಿ ಕೊಡ ಹಿಡಿದು ಪ್ರತಿಭಟನೆ
Team Udayavani, Mar 14, 2022, 12:02 PM IST
ಕುಷ್ಟಗಿ: ಕುಷ್ಟಗಿ ಪಟ್ಟಣದ 5ನೇ ವಾರ್ಡನಲ್ಲಿ ಕುಡಿಯುವ ನೀರಿನ ಹಾಹಾಕಾರಕ್ಕೆ ಬೇಸತ್ತ ನಾಗರೀಕರು ಖಾಲಿ ಕೊಡಗಳಿಂದ ಮಹಿಳೆಯರು, ಮಕ್ಕಳು ಯುವಕರು ಪುರಸಭೆ ಸದಸ್ಯ ಚಿರಂಜೀವಿ ಹಿರೇಮಠ ಮನೆಯ ಮುಂದೆ ಧರಣಿ ನಡೆಸಿದರು. ನಂತರ ಮುಖ್ಯ ಬೀದಿಯಲ್ಲಿ ಖಾಲಿ ಕೊಡಗಳ ಮೆರವಣಿಗೆ ನಡೆಸಿ ಪುರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 20 ದಿನಗಳಿಂದ 24×7 ನದಿ ನೀರು ಇಲ್ಲ, ಅಂತರ್ಜಲ ನೀರು ಇಲ್ಲ, ಸಮಸ್ಯೆ ತೀವ್ರವಾಗಿದ್ದರೂ ಟ್ಯಾಂಕರ್ ನೀರು ಸಹ ಇಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ನೀರು ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಪುರಸಭೆ ಸದಸ್ಯ ಚಿರಂಜೀವಿ ಹಿರೇಮಠ ಸ್ಪಂಧಿಸದೇ ನಿರ್ಲಕ್ಷೆ ಮುಂದುವರಿಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಖಾಲಿ ಕೊಡಗಳೊಂದಿಗೆ ಪುರಸಭೆ ಮುತ್ತಿಗೆ ಹಾಕಿದರು. ಈ ವೇಳೆ ಪುರಸಭೆ ಸದಸ್ಯ ಚಿರಂಜೀವಿ ಹಿರೇಮಠ ವಿರುದ್ದ ಹಾಯ್ದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ನಿವಾಸಿ ನಾಗರಾಜ್ ಬನ್ನಿಗೋಳ ಮಾತನಾಡಿ ಕಳೆದ 20 ದಿನಗಳಿಂದ ಸದರಿ ವಾರ್ಡಗೆ ನೀರು ಪೂರೈಕೆ ಇಲ್ಲ. ಬೇಸಿಗೆ ಶುರುವಾಗಿದ್ದು ನೀರಿಗಾಗಿ ಹೈರಾಣ ಆಗಿದ್ದೇವೆ. ಇದಕ್ಕೆ ಪರ್ಯಾಯ ಕ್ರಮವಹಿಸಿಲ್ಲ. ವಾರ್ಡನಲ್ಲಿ ಅಭಿವೃದ್ಧಿ ಕೆಲಸ ನಡೆದಿಲ್ಲ ಬೀದಿ ವಿದ್ಯುದ್ದೀಪ ಅಳವಡಿಸಿಲ್ಲ. ಸೋಲಾರ್ ವಿದ್ಯುದ್ದೀಪವನ್ನು ಜನವಸತಿ ಪ್ರದೇಶದಲ್ಲಿ ಅಳವಡಿಸದೇ ಸುಪ್ರೀಯ ಲಾಡ್ಜ್ ಬಳಿ ಅಳವಡಿಸಿದ್ದಾರೆ. ಪುರಸಭೆ ಸದಸ್ಯರಾಗಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ ಸಮಸ್ಯೆಯನ್ನು ಪರಿಹರಿಸದೇ ಪುರಸಭೆ ಅಧಿಕಾರಿಗಳ ಬೆರಳು ಮಾಡುತ್ತಿದ್ದಾರೆಂದು ಆರೋಪಿಸಿದ ಅವರು ಸಮಸ್ಯೆ ಇದೆ ವಾರ್ಡಿಗೆ ಬನ್ನಿ ಎಂದರೆ 4 ನೇ ವಾರ್ಡ ಸದಸ್ಯ ವಸಂತ ಮೇಲಿನಮನಿ ಅವರನ್ನು ಕಳಿಹಿಸಿದ್ದಾರೆಂದು ನಾಗರಾಜ ಬನ್ನಿಗೋಳ ಆರೋಪಿಸಿದರು.
ಈ ವೇಳೆ ಜಂಬಣ್ಣ ಬೂದರ್, ಯಲ್ಲಪ್ಪ ವಗ್ಗರ, ಮಹಾಂತೇಶ ಗದ್ದಿ, ರಾಮಪ್ಪ ಬನ್ನಿಗೋಳ ದುರಗಪ್ಪ ಕಟ್ಟಿಹೊಲ ಸೇರಿದಂತೆ ಮಹಿಳೆಯರು ಮಕ್ಕಳು ಈ ದಿಢೀರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
5 ನೇ ವಾರ್ಡ ಸದಸ್ಯ ಚಿರಂಜೀವಿ ಹಿರೇಮಠ ಪ್ರತಿಕ್ರಿಯಿಸಿ 24×7 ನೀರು ಪೂರೈಸುವ ತಾಂತ್ರಿಕ ಸಮಸ್ಯೆಗೆ ನೀರಿನ ಸಮಸ್ಯೆಯಾಗಿದೆ. ಕಳೆದ ಮೂರು ದಿನಗಳಿಂದ ಇಡೀ ಪಟ್ಟಣಕ್ಕೆ ನೀರಿಲ್ಲ.ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.