![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Dec 29, 2021, 7:43 PM IST
ಕುಷ್ಟಗಿ: ಕರಡಿಗಳಿಗೆ ಕಲ್ಲಂಗಡಿ ಹಣ್ಣು ಎಂದರೆ ತುಂಬಾ ಇಷ್ಟವಾಗಿರುವ ಹಿನ್ನೆಲೆಯಲ್ಲಿ ಪುನಃ ದಾಳಿ ಮಾಡುವ ಸಾದ್ಯತೆಗಳಿರುತ್ತವೆ ಎಂದು ಪ್ರಾದೇಶಿಕ ಅರಣ್ಯ ಇಲಾಖೆಯ ಉಪ ವಲಯಾಧಿಕಾರಿ ರಿಯಾಜ್ ಗನಿ ಹೇಳಿದರು.
ಬುಧವಾರ ಬೆಳಗ್ಗೆ ಹೊನಗಡ್ಡಿ ಗ್ರಾಮದ ಶರಣಪ್ಪ ಮ್ಯಾದನೇರಿ ಅವರ ಕಲ್ಲಂಗಡಿ ತೋಟಕ್ಕೆ ಭೇಟಿ ನೀಡಿ, ಕರಡಿಗಳಿಂದಾಗಿರುವ ಹಾನಿಯನ್ನು ಸ್ಥಾನಿಕವಾಗಿ ಪರಿಶೀಲಿಸಿದರು.
ಕರಡಿಗಳಿಂದ ಕಲ್ಲಂಗಡಿ ಉತ್ಪನ್ನ ಹಾನಿಯಾಗಿದ್ದು ಇಲಾಖೆಯಿಂದ ಪರಿಹಾರಕ್ಕೆ ಪತ್ರ ಬರೆಯುವ ಭರವಸೆ ನೀಡಿದರು.ರೈತ ಶರಣಪ್ಪ ಮ್ಯಾದನೇರಿ ಅವರ ಕಲ್ಲಂಗಡಿ ತೋಟದಲ್ಲಿ ಕರಡಿಗಳ ದಾಳಿಯ ನಂತರ ಒಣ ಭೂಮಿಯಾಗಿದ್ದರಿಂದ ಹೆಜ್ಜೆ ಗುರುತು ಮೂಡಿಲ್ಲ. ಹಣ್ಣುಗಳನ್ನು ಉಗುರುಗಳಿಂದ ಕಿತ್ತುಕೊಂಡು ತಿಂದಿವೆ. ಕರಡಿಗಳಿಗೆ ಹಸಿವಾದರೆ ಈ ರೀತಿ ದಾಳಿ ಇಟ್ಟು ಹಾಳು ಮಾಡುತ್ತವೆ. ಇದನ್ನು ನಿಯಂತ್ರಿಸಲು ಡಿ.30 ರಂದು ಕರಡಿಗಳ ಚಲನ ವಲನ ಗಮನಿಸಿ ಬೋನು ಇಡುವ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಕನಕಗಿರಿ, ಯಲಬುರ್ಗಾ ತಾಲೂಕುಗಳ ಗಡಿ ಪ್ರದೇಶದಲ್ಲಿ ಗುಡ್ಡಗಾಡು ಪ್ರದೇಶವಿದೆ.ಕರಡಿಗಳಿಂದ ದಾಳಿಯಾಗಿರುವ ಪ್ರದೇಶ ಕುಷ್ಟಗಿ ತಾಲೂಕಿನ ಹೊನಗಡ್ಡಿ ಪ್ರದೇಶವಾಗಿದೆ. ಮೂರು ತಾಲೂಕಿನ ಅರಣ್ಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಕೈಗೊಳ್ಳಬೇಕಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ರಿಯಾಜ್ ಗನಿ ಉದಯವಾಣಿ ಗೆ ಮಾಹಿತಿ ನೀಡಿದರು.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.