ಉಪ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ : ಸಿ.ಸಿ.ಪಾಟೀಲ್
Team Udayavani, Nov 1, 2019, 10:58 PM IST
ಕೊಪ್ಪಳ: ಅನರ್ಹ ಶಾಸಕರ ಬಗ್ಗೆ ಬಿಜೆಪಿ ಸಿದ್ದತಾ ಸಭೆಯಲ್ಲಿ ಸಣ್ಣ ಪುಟ್ಟ ಅಭಿಪ್ರಾಯ ಬಂದಿವೆ. ಅದನ್ನು ಬಿಟ್ಟರೆ ಮತ್ತೆ ಯಾವುದೇ ಗೊಂದಲಗಳಿಲ್ಲ. ಉಪ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಿ ನಾವೇ ಗೆಲ್ಲುತ್ತೇವೆ. ಆ ವೇಳೆಗೆ ಬಿಜೆಪಿ 117 -118 ಸ್ಥಾನಕ್ಕೇರಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಅವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಅನರ್ಹ ಶಾಸಕರ ಪರ ಬಿಜೆಪಿ ನಾಯಕರು ವ್ಯತಿರೀಕ್ತ ಹೇಳಿಕೆ ನೀಡುತ್ತಿರುವ ವಿಚಾರದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಯಾವುದೇ ಬೇಸರ ವ್ಯಕ್ತಪಡಿಸಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ಅವರ ಪರವಾಗಿ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಪಕ್ಷ ಏನು ಹೇಳುತ್ತದೆ ನಾವು ಆ ಕೆಲಸ ಮಾಡುತ್ತೇವೆ ಅವರ ಪರವಾಗಿ ನಾವು ನಿಲ್ಲುತ್ತೇವೆ. ಪಕ್ಷದ ನಿರ್ಣಯಕ್ಕೆ ಬದ್ಧ ಎಂದರು.
ಟಿಪ್ಪು ಇತಿಹಾಸವನ್ನು ಪಠ್ಯದಿಂದ ಕೈ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ, ಟಿಪ್ಪುವಿನ ಒಂದು ಮುಖವನ್ನು ಮಾತ್ರ ನಾವು ನೋಡುತ್ತೇವೆ ಆದರೆ ಆತನ ಇನ್ನೊಂದು ಕರಾಳ ಮುಖವನ್ನು ನಾವು ನೋಡುತ್ತಿಲ್ಲ. ಆತನ ಮತಾಂಧತೆ, ಸಾಕಷ್ಟು ಹಿಂದುಗಳ ಹತ್ಯೆಯನ್ನೂ ನೋಡಬೇಕಿದೆ. ಹೀಗಾಗಿ ಪಠ್ಯದಿಂದ ವಿಷಯ ಕೈ ಬಿಡುವ ವಿಚಾರಕ್ಕೆ ರಾಜ್ಯ ಸರ್ಕಾರ ಒಂದು ನಿರ್ಣಯ ಕೈಗೊಳ್ಳಲಿದೆ. ಅದಕ್ಕೆ ನಮ್ಮ ಬೆಂಬಲವಿದೆ ಎಂದರು.
ಬಿಜೆಪಿ ಯಾವುದೇ ಭಾವನಾತ್ಮಕ ವಿಷಯಗಳನ್ನು ಜನರ ಮುಂದಿಟ್ಟಿಲ್ಲ. ಕಾಂಗ್ರೆಸ್ ಸುಮ್ಮನೆ ಇದನ್ನು ಪ್ರಚಾರ ಮಾಡುತ್ತಿದೆ. ಇದನ್ನೊಂದು ಬಿಟ್ಟು ಅವರಿಗೆ ಬೇರೆ ಮಾತಿಲ್ಲ. ಅದಕ್ಕಿಂತಲೂ ಕರ್ನಾಟಕದಲ್ಲಿ ಪ್ರವಾಹ ಬಂದಿದೆ. ಜನ ಸಂಕಷ್ಟ ಅನುಭವಿಸಿದ್ದಾರೆ. ಸಿಎಂ ಅವರು ನೆರೆ ಹಾನಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪರಿಹಾರ ಕಾರ್ಯವೂ ನಡೆದಿದೆ. ನೊಂದವರಿಗೆ ಪರಿಹಾರ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದರು.
ದೇವೆಗೌಡರು ಇನ್ನೆರಡು ತಿಂಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಎನ್ನುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇನ್ನೂ ಎರಡು ತಿಂಗಳು ಕಾಲವಕಾಶವಿದೆಯಲ್ಲ ಕಾದು ನೋಡೋಣ. ಹಿಂದೆ ಕುಮಾರಸ್ವಾಮಿ ಸರ್ಕಾರ ಬೀಳುವಾಗ ಗೌಡರು ಏನು ಹೇಳಿರಲಿಲ್ಲ ಆದರೂ ಸರ್ಕಾರ ಪತನವಾಯ್ತು. ಗೌಡ್ರ ಬಗ್ಗೆ ವಯಕ್ತಿಕವಾಗಿ ನನಗೆ ಗೌರವವಿದೆ. ಪುತ್ರನ ಸರ್ಕಾರ ಬೀಳುತ್ತೆ ಎನ್ನುವ ಕಲ್ಪನೆ ಅವರಿಗೇಕೆ ಬರಲಿಲ್ಲ ಎಂದರು.
ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಪರಿಹಾರ ಕೊಟ್ಟಿಲ್ಲ ಎನ್ನುವುದನ್ನ ತಮ್ಮ ಬದಾಮಿಯಲ್ಲಿಯೇ ತೋರಿಸಿ ಕೊಡಲಿ. ಯಾರಿಗೆ 1 ಲಕ್ಷ ಪರಿಹಾರ ಕೊಟ್ಟಿಲ್ಲ ಎಂದು ಸಾಬೀತು ಪಡಿಸಲಿ. ಪಠ್ಯ ಪುಸ್ತಕ ಕೊಟ್ಟಿಲ್ಲ ಎಂದು ಹೇಳಿದ್ದಾರಲ್ಲ. ಅದನ್ನು ತೋರಿಸಿ ಕೊಡಲಿ ಎಂದರು.
ಹಿಂಬಾಗಿಲಿನ ರಾಜಕಾರಣ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು ಕಾಂಗ್ರೆಸ್ ಏನು ಮುಂಬಾಗಿಲಿನ ಮೂಲಕ ಅಧಿಕಾರ ಹಿಡಿದಿದೆಯಾ ? ಒಂದಿ ದಿನವಾದರೂ ಶಾಸಕಾಂಗ ಸಭೆ ನಡೆಸಿ ಮಾತನಾಡಿದ್ದಾರಾ ? 14 ತಿಂಗಳ ಅಧಿಕಾರ ನಡೆಸಿದ್ದಾರಲ್ಲ. ಸರಿಯಾಗಿ ಸಂಸಾರ ನಡೆಸಿದ್ದಾರಾ ? ಎಂದರು.
ಇನ್ನೂ ಮರಳು ನೀತಿಗೆ ತಿದ್ದುಪಡಿ ಕುರಿತಂತೆ ನಮ್ಮ ಶಾಸಕರ ತಂಡವು ಗುಜರಾತ್ ರಾಜ್ಯಕ್ಕೆ ತೆರಳಿ ಅಲ್ಲಿನ ಮರಳು ತೆಗೆಯುವ ಕುರಿತಂತೆ ಮಾಹಿತಿ ಪಡೆದು ವಾಪಾಸ್ಸಾಗಿದೆ. ಅಲ್ಲಿನ ಮರಳು ನೀತಿಯ ಕುರಿತು ಸಿಎಂ ಜೊತೆ ಚರ್ಚಿಸಿ ಅದು ಸೂಕ್ತವೆನಿಸಿದರೆ ರಾಜ್ಯದಲ್ಲಿ ಅದನ್ನ ಅಳವಡಿಕೆ ಮಾಡುತ್ತೇವೆ. ಈಗಗಲೆ ಅಕ್ರಮದ ಬಗ್ಗೆ ಕಡಿವಾಣ ಹಾಕಲಾಗಿದೆ. ಆದರೂ ಸ್ವಲ್ಪ ಅಕ್ರಮ ನಡೆಯುತ್ತಿವೆ. ದಕ್ಷ ಅಧಿಕಾರಿ ನಿಯೋಜಿಸಿ ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.