ಹೈಕದಲ್ಲಿ ಇನ್ಮುಂದೆ ಕಲ್ಯಾಣದ ಉತ್ಸವ
Team Udayavani, Sep 17, 2019, 12:29 PM IST
ಕೊಪ್ಪಳ: ನಗರದ ಪ್ರವಾಸಿ ಮಂದಿರದಲ್ಲಿ ಹೈ-ಕಗಾಗಿ ಹೋರಾಟಿದ ಸ್ವಾತಂತ್ರ್ಯ ಹೋರಾಟಗಾರರ ಜೀವನಗಾಥೆಯ ಕುರಿತು ಶಿರೂರು ವೀರಭದ್ರಪ್ಪ ಅವರ ಪುತ್ರ ಡಾ| ಬಿ.ವಿ ಶಿರೂರು ಹಾಗೂ ಸಾಹಿತಿ ಎಚ್.ಎಸ್.ಪಾಟೀಲ್ ಅವರು ಜೀವನದ ಹೋರಾಟಗಳನ್ನು ವಿವರಿಸಿದರು.
ಕೊಪ್ಪಳ: ರಾಜ್ಯ ಸರ್ಕಾರ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಬದಲಾಗಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಯನ್ನಾಗಿ ಮಾಡಲು ಆದೇಶ ಹೊರಡಿಸಿದೆ. ಇನ್ಮುಂದೆ ವಿಮೋಚನೆ ಬದಲು ಕಲ್ಯಾಣದ ಉತ್ಸವ ಹೈ-ಕ ಜಿಲ್ಲೆಯಲ್ಲಿ ಮೊಳಗಲಿದೆ.
ಹೌದು, ಹೈದ್ರಾಬಾದ್ ಕರ್ನಾಟಕದಲ್ಲಿ ವಿಮೋಚನೆ ಎನ್ನುವ ಪದ ಇತಿಹಾಸದ ಪುಟ ಸೇರಲಿದೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಹೈ-ಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿ ಆದೇಶ ಹೊರಡಿಸಿದೆ. ಕಲ್ಯಾಣದ ಉತ್ಸವ ಆಚರಣೆಗೆ ಆದೇಶ ಹೊರಡಿಸಿದ್ದಕ್ಕೆ ಹೈ-ಕದಲ್ಲಿ ಪರ-ವಿರೋಧ ಮಾತುಗಳು ವ್ಯಕ್ತವಾಗಿವೆ.
ದೇಶದ ಸ್ವಾತಂತ್ರ್ಯಕ್ಕಾಗಿ ಸಹಸ್ರಾರು ಮಹನೀಯರ ತ್ಯಾಗ, ಬಲಿದಾನದ ಫಲವಾಗಿ ಬ್ರಿಟಿಷರ ಕಪಿಮುಷ್ಠಿಯಿಂದ ದೇಶಕ್ಕೆ 1974ರ ಆಗಸ್ಟ್ 15 ರಂದು ಸ್ವಾತಂತ್ರ್ಯ ದೊರೆತಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆತಿದ್ದರೂ ಹೈದ್ರಾಬಾದ್ ಕರ್ನಾಟಕದಲ್ಲಿ ಮಾತ್ರ ಸ್ವಾತಂತ್ರ್ಯ ದೊರೆತಿರಲಿಲ್ಲ. ಇಲ್ಲಿನ್ನೂ ನಿಜಾಮರ ಆಳ್ವಿಕೆಯೇ ಮುಂದುವರೆದಿತ್ತು. ನಿಜಾಮ ಗುಲಾಮಗಿರಿಯಿಂದ ನಮಗೆ ಮುಕ್ತಿ ನೀಡಬೇಕೆಂದು ಈ ಭಾಗದ ನೂರಾರು ಸ್ವಾತಂತ್ರ್ಯ ಹೋರಾಟಗಾರರು ಹೋರಾಟ ಮಾತ್ರ ಅವಿಸ್ಮರಣೀಯ.
ಅದರಲ್ಲೂ ಶಿರೂರು ವೀರಭದ್ರಪ್ಪ, ಮುಂಡರಗಿ ಭೀಮರಾಯ, ಶಿವಮೂರ್ತಿಸ್ವಾಮಿ ಅಳವಂಡಿ ಸೇರಿದಂತೆ ಹಲವು ಹೋರಾಟಗಾರರ ಫಲವಾಗಿ ಹೈ-ಕ ಭಾಗದಲ್ಲಿ ನಿಜಾಮರ ಆಳ್ವಿಕೆಯಿಂದ ವಿಮೋಚನೆ ದೊರೆಯಿತು. ಇವರ ಹೋರಾಟದ ಪ್ರತಿ ದಿನವೂ ಅವಿಸ್ಮರಣೀಯವಾಗಿವೆ. ನಿಜಕ್ಕೂ ಹೈ-ಕ ಹೋರಾಟಗಾರರ ಬಗ್ಗೆ ಸರ್ಕಾರ ಪ್ರತಿ ವರ್ಷ ವಿಮೋಚನಾ ದಿನಾಚರಣೆಯಂದು ಸ್ಮರಣೆ ಮಾಡಿ ಮತ್ತೆ ಮರೆಯುತ್ತಿವೆ. ಅವರ ಹೋರಾಟದ ಜೀವನಗಾಥೆಗಳನ್ನು ಹೊರತಂದಿಲ್ಲ.
ಹೋರಾಟದಲ್ಲಿನ ಕಷ್ಟ ನೋವು, ನಲಿವು, ಅವರ ಶ್ರಮದ ಕುರಿತು ಇಂದಿನ ಯುವ ಜನತೆಗೆ ಬಹುಪಾಲು ಮಾಹಿತಿಯೇ ಇಲ್ಲ. ಪುಸ್ತಕದ ರೂಪದಲ್ಲೂ ಹೊರ ಬಂದಿಲ್ಲ ಎಂಬುದೇ ಬೇಸರದ ಸಂಗತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.