Koppala; ವಿದ್ಯುತ್ ಕದ್ದವರಿಗೆ ಯಾವ ನೈತಿಕತೆಯಿದೆ: ಎಚ್ಡಿಕೆ ವಿರುದ್ಧ ಸಿದ್ದರಾಮಯ್ಯ ಗುಡುಗು
Team Udayavani, Nov 20, 2023, 12:52 PM IST
ಕೊಪ್ಪಳ: ವಿದ್ಯುತ್ ಕದ್ದು ದಂಡ ಕಟ್ಟಿದವರು ನಮ್ಮ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ವಿರುದ್ದ ಗುಡುಗಿದರು.
ಕೊಪ್ಪಳ ತಾಲೂಕಿನ ಬಸಾಪುರ ಬಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ವಿದ್ಯುತ್ ಕದ್ದವರಿಗೆ ನನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ಅವರಿಗೆ ನನ್ನ ಬಗ್ಗೆ ದ್ವೇಷ, ಅಸೂಯೆ ಇದೆ. ಹಾಗಾಗಿ ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಯತಿಂದ್ರ ಬಗ್ಗೆ ಆರೋಪ ಮಾಡುವವರ ಬಳಿ ದಾಖಲೆ ಇವೆಯಾ? ಅವರೇನು ದುಡ್ಡ ಕದ್ದಿದ್ದಾರಾ? ಯತೀಂದ್ರ ದುಡ್ಡಿನ ವ್ಯವಹಾರ ಮಾಡಿದ್ದಾರಾ? ಅವರು ಸಿಎಸ್ಆರ್ ಫಂಡ್ ಬಗ್ಗೆ ಮಾತನಾಡಿದ್ದಾರೆ. ಹಿಂದೆ ಕುಮಾರಸ್ವಾಮಿ ಅವರೇ ವರ್ಗಾವಣೆ ದಂಧೆ ಮಾಡಿದ್ದು ಇಡೀ ಜಗತ್ತಿಗೆ ಗೊತ್ತಿದೆ ಎಂದರು.
ಇದನ್ನೂ ಓದಿ:Leo OTT release: ಓಟಿಟಿ ಎಂಟ್ರಿಗೆ ರೆಡಿಯಾದ ʼಲಿಯೋʼದಾಸ್; ಯಾವಾಗ ರಿಲೀಸ್?
ಗ್ಯಾರೆಂಟಿ ಯೋಜನೆಗಳ ವಿಚಾರ, ಗ್ಯಾರೆಂಟಿಗಳನ್ನು ಯಾರು ವಿರೋಧ ಮಾಡಿದರು, ಈ ದೇಶದ ಪ್ರಧಾನಿ ಅವರೆ ಗ್ಯಾರೆಂಟಿಗಳನ್ನು ನೀಡಲು ಹೊರಟಿದ್ದಾರೆ. ಬಿಜೆಪಿ ಸರ್ಕಾರ ಎಲ್ಲೆಲ್ಲಿ ಚುನಾವಣೆಗಳಿವೆ. ಅಲ್ಲಲ್ಲಿ ಗ್ಯಾರೆಂಟಿಗಳನ್ನು ಘೋಷಣೆ ಮಾಡುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಬಹಳ ವರ್ಷದಿಂದ ಅಧಿಕಾರದಲ್ಲಿದ್ದಾಗ ಮಾಡಲಿಲ್ಲ. ಇದೀಗ ಚುನಾವಣೆ ಎಂದು ಮಾಡುತ್ತಿದ್ದಾರೆ ಎಂದರು. ಶ್ರೀರಾಮುಲು ಮಗಳ ಮದುವೆ ಕಾರ್ಡ್ ಕೊಡಲು ಬಂದಿದ್ದಾರೆ ಅಷ್ಟೇ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
Hubli: ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ಸ್ವಾಗತಿಸುವೆ: ಎಸ್.ಆರ್.ಪಾಟೀಲ
High Court: ಜಯಲಲಿತಾ ಸಂಬಂಧಿಗೆ ಚಿನ್ನ, ವಸ್ತು ಮರಳಿಸಲು ಹೈ ನಕಾರ
Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?
Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.