ಕುಷ್ಟಗಿಗೆ ಬಂದ ಚಳಿಗಾಲದ ಅತಿಥಿಗಳು


Team Udayavani, Nov 17, 2019, 1:07 PM IST

kopala-tdy-3

ಕುಷ್ಟಗಿ: ಪೂರ್ವ ಯುರೋಫ್‌, ಮಧ್ಯ ಏಷ್ಯಾದ ಪರ್ವತ ಪ್ರದೇಶದ ಕೇಸರಿ ಮೈನಾ (ಕಬ್ಬಕ್ಕಿ) ಹಕ್ಕಿಗಳು ತಾಲೂಕಿಗೆ ವಲಸೆ ಬಂದಿವೆ. ಗ್ರಾಮೀಣ ಪ್ರದೇಶದಲ್ಲಿ ಕಬ್ಬಕ್ಕಿ ಎಂದು ಕರೆಯುವ ವಿದೇಶಿ ಹಕ್ಕಿಗಳ ಕಲರವ, ಹಾರಾಟ ಮನಮೋಹಕವೆನಿಸುತ್ತಿದೆ. ಈ ಹಕ್ಕಿಗಳ ಸಮೂಹ ಕುಷ್ಟಗಿ ತಾಲೂಕಿನ ಹೊಲಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಕಂಡುಬರುತ್ತದೆ. ಈ ವಿದೇಶಿ ಹಕ್ಕಿಗಳು ಬಾನಂಗಳದಲ್ಲಿ ಹಾರುತ್ತಿರುವ ದೃಶ್ಯ ಪಕ್ಷಿ ಪ್ರಿಯರನ್ನು ಸೆಳೆಯುತ್ತಿದೆ.

ಕೇಸರಿ ಮೈನಾ, ಗುಲಾಬಿ ಕಬ್ಬಕ್ಕಿ, ರೋಜಿ ಸ್ಟ್ರಾಲಿಂಗ್‌, ರೋಜಿ ಸ್ಪ್ರಾಲಿಂಗ್ ಎಂದು ಕರೆಯಲಾಗುವ ವಿದೇಶಿ ಹಕ್ಕಿ ದೇಶಿಯ ಗೊರವಂಕ ಹಕ್ಕಿಯನ್ನು ಹೋಲುತ್ತದೆ. 23 ಸೆಂ.ಮೀ. ಇವಿರುವ ಈ ಹಕ್ಕಿ ಎದೆ, ಬೆನ್ನು ಕೇಸರಿ ಬಣ್ಣ, ರೆಕ್ಕೆ ಬಾಲ, ತಲೆ ಹೊಳೆಯುವ ನೀಲಿಗಪ್ಪಿನ ಬಣ್ಣ ಹೊಂದಿರುತ್ತದೆ. ತಲೆ ಮೇಲೆ ಹಿಂದಕ್ಕೆ ಬಾಗಿರುವ ನೀಳ ಕರಿ ಜುಟ್ಟು ಇದೆ. ಹೆಣ್ಣು ಮತ್ತು ಗಂಡು ನೋಡಲು ಒಂದೇ ತರ ಇರುತ್ತವೆ. ಅತ್ತಿ, ಆಲ, ಗೋಣಿ ಮರಗಳು ಮತ್ತು ಲಂಟನಾ ಹಣ್ಣುಗಳನ್ನು ತಿನ್ನುತ್ತವೆ. ಹೂವಿನ ಮಕರಂಧ ಹೀರುವುದರಿಂದ ಪರಾಗ ಸ್ಪರ್ಶಕ್ಕೂ ಸಹಾಯ ಮಾಡುತ್ತವೆ. ಈ ಹಕ್ಕಿ ದಕ್ಷಿಣ ಭಾರತದಲ್ಲಿ ಕಂಡುಬರುವುದು ಕಡಿಮೆ. ಭಾರತಕ್ಕೆ ಚಳಿಗಾಲದ ಪ್ರಾಂಭಕ್ಕೆ ಬಂದು ಜನವರಿ, ಫೆಬ್ರವರಿ ವರೆಗೂ ಇರುತ್ತವೆ.

ಪೂರ್ವ ಯುರೋಪಿನ ಫ್ರಾನ್ಸ್‌, ಐರ್ಲ್ಯಾಂಡ್‌, ಇಂಗ್ಲೆಂಡ್‌ ಮತ್ತು ಮದ್ಯ ಏಷ್ಯಾದ ಪರ್ವತ ತಪ್ಪಲುಗಳಲ್ಲಿ ಗೂಡು ಕಟ್ಟಿ ಮರಿ ಮಾಡುತ್ತವೆ. ಚಳಿಗಾದಲ್ಲಿ ಭಾರತ ಮತ್ತು ಪಾಕಿಸ್ತಾನಕ್ಕೆ ಬರುವ ಗುಲಾಬಿ ಕಬ್ಬಕ್ಕಿ, ಬೇಸಿಗೆಯನ್ನು ಅಪಘಾನಿಸ್ತಾದಲ್ಲಿ ಕಳೆಯುತ್ತವೆ. ಕಬ್ಬಕ್ಕಿ ಗಲಾಟೆ ಸ್ವಭಾವದ ಹಕ್ಕಿಗಳಾಗಿದ್ದು, ಸಮೂಹವಾಗಿ ವಾಸಿಸುವ ಇವು ಐನೂರಕ್ಕೂ ಅಧಿ ಕ ಸಂಖ್ಯೆಯಲ್ಲಿ ಹಿಂಡು ಹಿಂಡಾಗಿ ಹಾರುತ್ತವೆ. ಗಿಡದಲ್ಲಿ ಕುಳಿತಾಗ ಸದಾ ಕೂಗುತ್ತವೆ. ಇವು ಪೈರಿನ ಮೇಲೆ ದಾಳಿ ಇಡುತ್ತಿವೆ. ತೆನೆಯಲ್ಲಿ ಕಾಳು ತಿನ್ನುವ ಜೊತೆಗೆ ಕೀಟಗಳನ್ನು ತಿನ್ನುವುದರಿಂದ ರೈತರು ಇದರಿಂದಾಗುವ ಹಾನಿ ಸಹಿಸಿಕೊಳ್ಳುವುದುಂಟು.

 

-ಮಂಜುನಾಥ ಮಹಾಲಿಂಗಪುರ

ಟಾಪ್ ನ್ಯೂಸ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

3-tavaragera

Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್

4-gangavathi

Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ

12-koppala

Koppala ಗವಿಮಠ ಜಾತ್ರೆಗೆ ನಟ ಅಮಿತಾಬ್‌ ಬಚ್ಚನ್‌?

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Exam

VAO ಹುದ್ದೆ: ಅಂತಿಮ ಕೀ ಉತ್ತರ ಪ್ರಕಟ

highcourt

ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್‌ ಸೂಚನೆ

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.