ಮಹಿಳಾ ದಿನಾಚರಣೆ ಮಹಿಳೆಯರಿಗೆ ನಾಡಹಬ್ಬದಷ್ಟೇ ವಿಶೇಷ ದಿನ: ಬಿ.ಎಸ್. ಹೊನ್ನುಸ್ವಾಮಿ
Team Udayavani, Mar 8, 2022, 2:18 PM IST
ಕುಷ್ಟಗಿ: ಸಾಮಾಜಿಕ ಜಾಲತಾಣಗಳಿಂದ ಮಹಿಳೆಯರು ಮೋಸ ಹೋಗದೇ ಜಾಗೃತರಾಗಿರಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ಎಸ್. ಹೊನ್ನುಸ್ವಾಮಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮೋಸಕ್ಕೆ ಒಳಗಾದವರು ನ್ಯಾಯ ಪಡೆಯಲು ಮುಂದೆ ಬರಬೇಕೆಂದು ಕರೆ ನೀಡಿದರು.
ಪುರುಷರಷ್ಟೇ ಮಹಿಳೆಯೂ ಸಮಾನಳು ಹೆಣ್ಣು ಮಕ್ಕಳಿಗೆ ತಮ್ಮದೇ ಪಾತ್ರವಿದ್ದು ಯಶಸ್ವಿಯಾಗಿ ನಿರ್ವಹಿಸಿರಿ ಎಂದು ಕರೆ ನೀಡಿದರು.ಮಹಿಳಾ ದಿನಾಚರಣೆ ಮಹಿಳೆಯರಿಗೆ ನಾಡಹಬ್ಬದಷ್ಟೇ ವಿಶೇಷ ದಿನವಾಗಿದೆ ಎಂದರು.
ಇದನ್ನೂ ಓದಿ: ಮಹಿಳಾ ದಿನಾಚರಣೆ ವಿಶೇಷ: ಸ್ತ್ರೀ ಸಮಾನತೆ ಸಾರಿದ ಬಸವನಾಡಿನ ಪಂಚ ಮಹಿಳೆಯರ ಯಶೋಗಾಥೆ
ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ತಳವಾರ ಮಾತನಾಡಿ, ಸ್ವಾತಂತ್ರ್ಯ ನಂತರ ಮಹಿಳೆಯರಿಗೆ ಸಾಮಾಜಿಕ ಆದ್ಯತೆಗಳು ಸಿಗುತ್ತಿವೆ. ಯಾವೂದೇ ಕಾರಣಕ್ಕೂ ಲಿಂಗ ತಾರತಮ್ಯ ಸಲ್ಲದು ಎಂದರು. ಅತ್ಯಾಚಾರ, ದೌರ್ಜನ್ಯ ಪ್ರಕರಣಗಳಗುತ್ತಿದ್ದು ಅಸಹಾಯಕರಾಗದೇ ಎದಿರೇಟು ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸತೀಶ ಬಿ. ಮಾತನಾಡಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಗೌರವಿಸುವ ದೇಶ ನಮ್ಮದು ಎಂದರು.
ಇದನ್ನೂ ಓದಿ: ಮಹಿಳಾ ದಿನಾಚರಣೆಯ ವಿಶೇಷ : ಬಹುಮುಖ ಪ್ರತಿಭೆಯ ಕಲಾವಿದೆ ಚಿಮ್ಮಡದ ಸುಂದ್ರವ್ವ ಮೇತ್ರಿ
ತಾಲೂಕಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ವೆಂಕಟೇಶ ಈಳಗೇರ, ಸಹಾಯಕ ಸರ್ಕಾರಿ ಅಭಿಯೋಜಕ ರಾಯನಗೌಡ ಎಲ್.ವಕೀಲರಾದ ಸುಭದ್ರಾ ದೇಸಾಯಿ, ಲತಾ ಸ್ಥಾವರಮಠ ಮತ್ತೀತಿದ್ದರು. ಇದೇ ವೇಳೆ ಗಿನ್ನೀಸ್ ದಾಖಲೆ ಮಾಡಿದ ಅವನಿ ಗಂಗಾವತಿ ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಕಲಾವತಿ ಮೆಣೆದಾಳ, ಉಪನ್ಯಾಸಕಿ ಮಾಲಾ ಪಡಸಾಲಿಮನಿ, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ವಿಜಯಲಕ್ಷ್ಮೀ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.
ಅನ್ನಪೂರ್ಣ ಪಾಟೀಲ ನಿರೂಪಿಸಿದರು. ಪ್ರಾಸ್ತಾವಿಕವಾಗಿ ವಿದ್ಯಾವತಿ ಮಾತನಾಡಿದರು. ಮಂಜುಳಾ ಹಕ್ಕಿ ಸ್ವಾಗತಿಸಿದರು. ಸುರೇಶ ಅಡಪಟ್ಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
ಗಂಗಾವತಿ: ಹಳ್ಳದ ಬದಿ ಹೊಸ್ಕೇರಾ-ಡಗ್ಗಿ ದಲಿತರ ಶವ ಸಂಸ್ಕಾರ- ಅಸ್ಪ್ರಶ್ಯತೆ ಇನ್ನೂ ಜೀವಂತ!
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
ದೋಟಿಹಾಳ: ಅನುದಾನವಿಲ್ಲದೆ ಮುಚ್ಚುವ ಹಂತಕ್ಕೆ ತಾಂಡಾ ನಿಗಮದ ಗ್ರಂಥಾಲಯಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.