ಬಾಕಿ ವೇತನಕ್ಕಾಗಿ ಪೌರ ಕಾರ್ಮಿಕರ ಸತ್ಯಾಗ್ರಹ
Team Udayavani, Aug 20, 2019, 1:27 PM IST
ಕಾರಟಗಿ: ಬಾಕಿ ವೇತನ ನೀಡುವಂತೆ ಒತ್ತಾಯಿಸಿ ಗುತ್ತಿಗೆ ಪೌರಕಾರ್ಮಿಕರು ಪುರಸಭೆ ಎದುರು ಪ್ರತಿಭಟನೆ ನಡೆಸಿದರು.
ಕಾರಟಗಿ: ಗುತ್ತಿಗೆ ಪೌರಕಾರ್ಮಿಕರಿಗೆ ವೇತನ ಪಾವತಿಸುವಂತೆ ಆಗ್ರಹಿಸಿ ಗುತ್ತಿಗೆ ಪೌರಕಾರ್ಮಿಕರು ಪುರಸಭೆ ಎದುರು ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಜಿಲ್ಲಾ ಪ್ರಗತಿಪರ ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಪರಶುರಾಮ ಮಾತನಾಡಿ, ಕಾರಟಗಿ ಪುರಸಭೆಯಲ್ಲಿ 21 ಪೌರಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ 2 ವರ್ಷದಿಂದ ಈ ಕಾರ್ಮಿಕರಿಗೆ ವೇತನ ಪಾವತಿಸದೇ ಪುರಸಭೆ ಆಡಳಿತ ಮಲತಾಯಿ ಧೋರಣೆ ತೋರುತ್ತಿದೆ. ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ 21 ಜನರಲ್ಲಿ 7 ಜನ ಲೋಡರ್, 10 ಜನ ಮನೆಮುಂದೆ ಕಸ ಸಂಗ್ರಹಿಸುವವರು. ಮೂವರು ವಾಹನ ಚಾಲಕರು, ಒಬ್ಬರು ಪುರಸಭೆ ಕಚೇರಿಯಲ್ಲಿ ಜವಾನರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೇತನ ಪಾವತಿಗಾಗಿ ಎರಡು ವರ್ಷಗಳಿಂದ ಎರಡು ತಿಂಗಳಿಗೊಮ್ಮೆ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸುತ್ತಿದ್ದೇವೆ. ಕಾರ್ಯ ನಿರ್ವಹಿಸುತ್ತಲಿದ್ದರೂ ವೇತನ ಪಾವತಿಸದೇ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ವೇತನ ನೀಡದೆ ಜೀವನ ನಡೆಸುವುದು ಕಷ್ಟಕರವಾಗಿದೆ. ಪೌರಕಾರ್ಮಿಕರಿಗೆ ನೇರ ಪಾವತಿ ಯೋಜನೆಯಡಿ ಉದ್ಯೋಗ ಭದ್ರತೆ ಕಲ್ಪಿಸಿ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.
ಪ್ರಗತಿಪರ ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಭಾರಧ್ವಾಜ್ ಮಾತನಾಡಿ, ಎರಡು ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರಟಗಿ ಪುರಸಭೆ ಗುತ್ತಿಗೆ ಪೌರ ಕಾರ್ಮಿಕರನನ್ನು ಮೊದಲು ಕಾಯಂಗೊಳಿಸಬೇಖು. 2 ವರ್ಷದಿಂದ ಬಾಕಿಯಿರುವ ವೇತನ ಶೀಘ್ರ ಪಾವತಿಸಬೇಕು. ಈಗಾಗಲೆ ವೇತನವಿಲ್ಲದೇ ಪೌರಕಾರ್ಮಿಕರ ಕುಟುಂಬಗಳು ಜೀವನ ನಿರ್ವಹಿಸಲಾಗದೆ ಬೀದಿಪಾಲಾಗುವ ಸ್ಥಿತಿಗೆ ತಲುಪಿದ್ದಾರೆ. 2-3 ಬಾರಿ ಧರಣಿ ನಡೆಸಿದ ಸಂದರ್ಭದಲ್ಲಿ ನೀಡಿದ್ದ ಭರವಸೆಗಳು ಈಡೇರಿಲ್ಲ ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ ಎಂದರು.
ಪೌರ ಕಾರ್ಮಿಕ ಹನುಮಂತಿ ಮಾತನಾಡಿ, ವೇತನವಿಲ್ಲದೇ ನಿತ್ಯ ಹೊಟ್ಟೆ ತುಂಬಿಸಿಕೊಳ್ಳುವುದು ದುಸ್ತರವಾಗಿದೆ. ಪೌರ ಕಾರ್ಮಿಕರ ಹಿತ ಕಾಪಾಡುವವರೆ ಹೀಗೆ ನಿರ್ಲಕ್ಷ ವಹಿಸಿದರೆ ನಮ್ಮ ಮುಂದಿನ ನಮ್ಮ ಸ್ಥಿತಿಗತಿ ಹೊಣೆಯಾರು? ನಮ್ಮ ಮುಂದಿನ ತರಾತುರಿ ನಿರ್ಧಾರಗಳಿಗೆ ಪುರಸಭೆಯೆ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.
ಪೌರಕಾರ್ಮಿಕರಾದ ಶೇಖರಪ್ಪ, ಹುಲಗಪ್ಪ, ದುರಗಪ್ಪ, ಕೆ. ಗಂಗಪ್ಪ, ದುರಗಪ್ಪ, ಆನಂದ, ಹುಲಗಪ್ಪ, ಮಲ್ಲೇಶಪ್ಪ, ಮಾರೆಮ್ಮ, ಹುಲಿಗೆಮ್ಮ, ಅಯ್ಯಮ್ಮ, ಜಲಾಲೆಮ್ಮ, ಮಹಾಕಾಳಮ್ಮ, ದುರಗಮ್ಮ, ಹನುಮಂತ, ಮಹಾಂಕಾಳಿ, ಶರಣಮ್ಮ, ಜ್ಯೋತಿ, ಲಕ್ಷಿ ್ಮೕ, ದ್ಯಾವಮ್ಮ, ದೊಡ್ಡ ದ್ಯಾವಮ್ಮ, ಸಣ್ಣ ದ್ಯಾವಮ್ಮ, ಶರಣಮ್ಮ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.