![kambala2](https://www.udayavani.com/wp-content/uploads/2025/02/kambala2-1-415x249.jpg)
![kambala2](https://www.udayavani.com/wp-content/uploads/2025/02/kambala2-1-415x249.jpg)
Team Udayavani, Jun 21, 2021, 8:31 PM IST
ವರದಿ: ಮಲ್ಲಪ್ಪ ಮಾಟರಂಗಿ
ಯಲಬುರ್ಗಾ: ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ 10 ವರ್ಷಗಳಿಂದ ತಮ್ಮ ಮಠದಲ್ಲಿ ಉಚಿತ ಯೋಗ ತರಬೇತಿ ಶಿಬಿರ ಆರಂಭಿಸಿದ್ದಾರೆ. ಈ ಮೂಲಕ ಭಕ್ತರಿಗೆ ನಿತ್ಯ ಯೋಗಾಸನ ಮಾಡಿಸುತ್ತಿದ್ದಾರೆ.
ಸ್ವಂತ ಖರ್ಚಿನಲ್ಲಿ ಯೋಗಾಭ್ಯಾಸಕ್ಕೆ ಬೇಕಾಗುವ ಎಲ್ಲ ಸಾಮಗ್ರಿ ನೀಡುತ್ತಿದ್ದಾರೆ. ಶಿಬಿರಾರ್ಥಿಗಳಿಗೆ ಬೆಳಗಿನ ಜಾವ 4:30ಕ್ಕೆ ಕರೆ ಮಾಡಿ ಎಲ್ಲರನ್ನೂ ಒಗ್ಗೂಡಿಸಿ ಯೋಗಾಭ್ಯಾಸ ಕಲಿಸುತ್ತಿದ್ದಾರೆ. ಇವರ ಶಿಬಿರದಲ್ಲಿ ಪಳಗಿದ ಅನೇಕರು ಯೋಗ ಶಿಕ್ಷಕರಾಗಿ ವಿವಿಧೆಡೆ ಸೇವೆ ಮಾಡುತ್ತಿದ್ದಾರೆ. 100ಕ್ಕೂ ಅಧಿ ಕ ಆಸನಗಳನ್ನು ಶಿಬಿರಾರ್ಥಿಗಳಿಗೆ ಹೇಳಿ ಕೊಡುತ್ತಿದ್ದಾರೆ. ಆರೋಗ್ಯ ಹಾಗೂ ಒತ್ತಡದ ಬದುಕಿನಲ್ಲಿ ಕಾಲಕಳೆಯುವ ಜನತೆಯಲ್ಲಿ ಮಾನಸಿಕ ನೆಮ್ಮದಿ,ದೈಹಿಕ ಸದೃಢತೆ ಹೊಂದಲಿ ಎಂಬ ಉದ್ದೇಶದಿಂದ ಯೋಗ ಕಲಿಸಲು ಮುಂದಾಗಿದ್ದಾರೆ. ಇವರ ಬಳಿ ಯೋಗ ಕಲಿತ ಹಲವಾರು ವಿದ್ಯಾರ್ಥಿಗಳು, ಯುವಕರು, ಜಿಲ್ಲಾ- ರಾಜ್ಯಮಟ್ಟದಲ್ಲಿ ನಡೆಯುವ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಸಹ ಮುಡಿಗೇರಿಸಿಕೊಂಡಿದ್ದಾರೆ.
ಪೌಷ್ಟಿಕ ಆಹಾರ ವಿತರಣೆ: ಬೆಳಗ್ಗೆ ಶಿಬಿರಾರ್ಥಿಗಳಿಗೆ ಪೌಷ್ಟಿಕ ಆಹಾರಗಳಾದ ಮೊಳಕೆ ಕಾಳು, ಹಣ್ಣುಗಳನ್ನು ನೀಡುತ್ತಿದ್ದಾರೆ. ಬರೀ ವಿಶ್ವ ಯೋಗ ದಿನಾಚರಣೆ ಸಮಯದಲ್ಲಿ ಅಷ್ಟೇ ಅಲ್ಲ ಶ್ರೀಮಠದಲ್ಲಿ ನಿತ್ಯ ಯೋಗ ಶಿಬಿರ ನಡೆಯುತ್ತದೆ. ಶಿಬಿರದಲ್ಲಿ ಪಟ್ಟಣ ವ್ಯಾಪ್ತಿಯ 120ಕ್ಕೂ ಹೆಚ್ಚು ಜನತೆ ಪಾಲ್ಗೊಳ್ಳುತ್ತಾರೆ.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
You seem to have an Ad Blocker on.
To continue reading, please turn it off or whitelist Udayavani.