ಸ್ವಂತ ಖರ್ಚಿನಲ್ಲಿ ಗ್ರಂಥಾಲಯ ತೆರೆದ ಯುವಕರು
Team Udayavani, Nov 23, 2019, 3:20 PM IST
ಕುಷ್ಟಗಿ: ತಾಲೂಕಿನ ಸಾಸ್ವಿಹಾಳ ಗ್ರಾಮದಲ್ಲಿ ಯುವಕರಿಬ್ಬರ ಇಚ್ಛಾಶಕ್ತಿಯಿಂದ ಗ್ರಾಮೀಣ ಗ್ರಂಥಾಲಯಕ್ಕೆ ಪರ್ಯಾಯವಾಗಿ ಶ್ರೀ ರಾಮಲಿಂಗೇಶ್ವರ ಗ್ರಂಥಾಲಯ ತಲೆ ಎತ್ತಿದ್ದು, ಯುವಕರು ಸ್ವಂತ ಖರ್ಚಿನಲ್ಲಿ ಜ್ಞಾನದಾಸೋಹ ಕಲ್ಪಿಸಿರುವುದು ಮಾದರಿ ಎನಿಸಿದೆ.
ತಾಲೂಕಿನ ಜುಮ್ಲಾಪೂರ ಗ್ರಾಪಂ ವ್ಯಾಪ್ತಿಯ ಸಾಸ್ವಿಹಾಳ 2 ಸಾವಿರ ಜನಸಂಖ್ಯೆ ಹೊಂದಿದೆ. ಈ ಗ್ರಾಮದ ದೇವಪ್ಪ ಮಡಿವಾಳರ ಹಾಗೂ ಶಶಿಧರ ಹುಲಿಯಾಪೂರ ಪದವೀಧರರಾಗಿದ್ದು, ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಯುವಕರಿಬ್ಬರು ತಮ್ಮೂರಿಗೆ ಏನಾದರೂ ಸೇವೆ ಮಾಡಬೇಕೆಂಬ ತುಡಿತದ ಹಿನ್ನೆಲೆಯಲ್ಲಿ ಅವರಿಗೆ ಹೊಳೆದಿದ್ದೇ ಈ ಗ್ರಂಥಾಲಯ. ಗ್ರಾಮದ ಮಧ್ಯ ಭಾಗದಲ್ಲಿ ಖಾಲಿ ಬಿದಿದ್ದ ಭವನವನ್ನು ಸ್ವತ್ಛಗೊಳಿಸಿ, ಸುಣ್ಣಬಣ್ಣ ಹಚ್ಚಿ ಶ್ರೀ ರಾಮಲಿಂಗೇಶ್ವರ ಹೆಸರಿನಲ್ಲಿ ಗ್ರಂಥಾಲಯ ಆರಂಭಿಸಿದ್ದಾರೆ. ಈ ಗ್ರಂಥಾಲಯಕ್ಕೆ 18 ಸಾವಿರ ರೂ. ಮೌಲ್ಯದ ಪುಸ್ತಕಗಳನ್ನು ಖರೀದಿಸಿದ್ದಾರೆ.
ಐಎಎಸ್, ಐಪಿಎಸ್, ಕೆಎಎಸ್, ಸಾಮನ್ಯ ಅಧ್ಯಯನ, ಸೈನಿಕ, ಪೊಲೀಸ್ ಪೇದೆ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ಪುತಸ್ತಕ ಹಾಗೂ ಭಾರತ ಸಂವಿಧಾನ, ಸಮಗ್ರ ಕರ್ನಾಟಕ ಇತಿಹಾಸ, ಕಂಪ್ಯೋಟರ್ ಜ್ಞಾನ, ಚಾಣಕ್ಯ ಕಣಜ, ರಾಜಕೀಯ, ಭೂಗೋಳ ಶಾಸ್ತ್ರ, ಕನ್ನಡ ಸಾಹಿತ್ಯ ಕೋಶ, ಜ್ಞಾನ ವಿಕಸನದ ಪುಸ್ತಕಗಳನ್ನು ಖರೀದಿಸಿ ತಂದಿದ್ದಾರೆ. ಈ ಪುಸ್ತಕಗಳ ಸುರಕ್ಷಿತವಾಗಿಡಲು ಅಲಮೆರಾವನ್ನು ಸಹ ಖರೀ ದಿಸಿದ್ದಾರೆ. ಅಲ್ಲದೇ ನಿತ್ಯ ನಾಲ್ಕು ದಿನ ಪತ್ರಿಕೆಗಳನ್ನು ಅದು ಕೂಡ ಸ್ವಂತ ಖರ್ಚಿನಲ್ಲಿ ಗ್ರಂಥಾಲಯದ ಓದುಗರಿಗೆ ತರಿಸುತ್ತಿದ್ದಾರೆ.
ಈ ಗ್ರಂಥಾಲಯದ ಓದುಗರಾಗಲು ಮೊದಲಿಗೆ ಸದಸ್ಯತ್ವದ ಶುಲ್ಕ 20 ರೂ.ಪಾವತಿಸಬೇಕು. ಒಮ್ಮೆ ಪಾವತಿಸಿದರೆ ಮುಗಿಯಿತು ದಿನವೂ ಬಂದು ಓದಬಹುದಾಗಿದೆ. ದಿನಕ್ಕೆ ಒಂದೇ ಪುಸ್ತಕ ಓದುವ ಅವಕಾಶವಿದ್ದು, ಪಡೆದ ಪುಸ್ತಕ ಹಿಂತಿರುಗಿಸಿ ಮತ್ತೂಂದು ಪುಸ್ತಕ ಪಡೆದು ಅಲ್ಲಿಯೇ ಕುಳಿತು ಓದಬಹುದಾಗಿದೆ. ಒಂದು ವೇಳೆ ಪಡೆದ ಪುಸ್ತಕ ಕಳೆದರೆ, ಹಾಳು ಮಾಡಿದರೆ ಪುಸ್ತಕದ ಒಟ್ಟು ಮೊತ್ತ ಪಾವತಿಸುವ ಕಠಿಣ ನಿಯಮ ಅಳವಡಿಸಿಕೊಳ್ಳಲಾಗಿದೆ. ಅಲ್ಲದೇ ಮೊಬೈಲ್, ಧೂಮಪಾನ ನಿಷೇ ಧಿಸಲಾಗಿದ್ದು, ದಿನವೂ 30 ಜನ ಯುವಕರು, ಸಾರ್ವಜನಿಕರು ಬಂದು ಓದುವುದು ರೂಢಿಸಿಕೊಂಡಿದ್ದಾರೆ.
ಪುಸ್ತಕದ ಮುಖಬೆಲೆ ಕೊಟ್ಟು ಖರೀದಿ ಸುವ ಶಕ್ತಿ ಇಲ್ಲದಿದ್ದರೂ ಅದೇ ಪುಸ್ತಕಗಳನ್ನು 20 ರೂ. ಸದಸ್ಯತ್ವ ಶುಲ್ಕದಲ್ಲಿ ಸಿಗುತ್ತಿರುವುದು ವರದಾನವಾಗಿದೆ. ಇದು ವಿದ್ಯಾರ್ಥಿಗಳಿಗೆ ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಪೂರಕವೆನಿಸಿದೆ. ಸರ್ಕಾರದ ಗ್ರಾಮೀಣ ಗ್ರಂಥಾಲಯ ಇದ್ದು, ಇಲ್ಲದಂತಾಗಿದ್ದು. ಶ್ರೀರಾಮಲಿಂಗೇಶ್ವರ ಗ್ರಂಥಾಲಯದ ಪುಸ್ತಕಗಳನ್ನು ಈ ಗ್ರಂಥಾಲಯಕ್ಕೆ ನೀಡಿದರೆ ಸಾಕಷ್ಟು ಅನುಕೂಲವೇ ಆಗಲಿದೆ – ಮಂಜುನಾಥ ದಂಡಿನ ವಿದ್ಯಾರ್ಥಿ, ಸಾಸ್ವಿಹಾಳ
-ಮಂಜುನಾಥ ಮಹಾಲಿಂಗಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.