ಯುವಕರೇ ದೇಶದ ಸಂಪತ್ತು : ಚಿದಾನಂದ
Team Udayavani, Jan 16, 2022, 10:26 PM IST
ಕನಕಗಿರಿ: ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಾಗಿ ಶಾರೀರಕವಾಗಿ, ಮಾನಸಿಕವಾಗಿ, ದಷ್ಟ-ಪುಷ್ಟವಾಗಿದ್ದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಯುವಕರು ದೇಶದ ಸಂಪತ್ತು, ಆದರೆ ಪ್ರಸ್ತುತ ಕಾಲದಲ್ಲಿ ದುಷ್ಟಚಟಕ್ಕೆ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹಿರಿಯ ಆಪ್ತ ಸಮಾಲೊಚಕ ಚಿದಾನಂದ ಇಂಡಿ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ನಿಯಂತ್ರಣ ಘಟಕ, ತಾಲೂಕು ಆರೋಗ್ಯ ಇಲಾಖೆ, ಗಂಗಾವತಿ ಸಮುದಾಯ ಆರೋಗ್ಯ ಕೇಂದ್ರ, ಆರ್. ಆರ್.ಸಿ ಹಾಗೂ ರಾಷ್ಟ್ರೀಯ ಯೋಜನಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಟಿಬಿ ಜಿಲ್ಲಾ ಮೇಲ್ವಿಚಾರಕ ಧಾನಗೌಡರು ಮಾತನಾಡಿ, ಸಾಂಕ್ರಾಮಿಕ ರೋಗಗಳಲ್ಲಿ ಒಂದಾದ ಟಿಬಿ ಕಾಯಿಲೆಗೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ. ಟಿಬಿ ಕಾಯಿಲೆಯು ಸರ್ವ ಸಾಮಾನ್ಯವಾಗಿ ಎಲ್ಲರಿಗೂ ಬರುವಂತಹ ಒಂದು ಕಾಯಿಲೆಯಾಗಿದ್ದು, 100 ರಲ್ಲಿ 40 ಜನಕ್ಕೆ ಇದ್ದೆ ಇರುತ್ತದೆ.
ಅದು ಹೊರಗೆ ಕಾಣಿಸಿಕೊಳ್ಳುವುದು ಮನುಷ್ಯನ ರೋಗ ನಿರೋದಕ ಶಕ್ತಿ ಕಡಿಮೆಯಾದಾಗ, ಭಾರತದಲ್ಲಿ ಟಿಬಿ ಕಾಯಿಲೆಯಿಂದ ಪ್ರತಿ 5 ನಿಮಿಷಕ್ಕೆ ಸಾವುಗಳು ಸಂಭವಿಸುತ್ತಿವೆ. ಆದ್ದರಿಂದ ಶಿಕ್ಷಣವಂತರಾದ ಪ್ರತಿಯೊಬ್ಬ ವಿದ್ಯಾರ್ಥಿಯು ನಿಮ್ಮ ಅಕ್ಕಪಕ್ಕದ ಜನರಿಗೆ ಇಂತಹ ಕಾಯಿಲೆ ಬಗ್ಗೆ ಸರಿಯಾದ ಮಾಹಿತಿ ನೀಡಿ ಎಂದರು. ಆಪ್ತ ಸಮಾಲೋಚಕ ಅಮೀನ್ ಸಾಬ್ ನಿರೂಪಿಸಿದರು, ಸಿದ್ದರಾಮಪ್ಪ ಸ್ವಾಗತಿಸಿದರು. ಉಪನ್ಯಾಸಕಿ ಆಶಿಕಾ ಎಚ್ .ಸಿ ಪ್ರಮಾಣ ವಚನ ಬೋಧಿಸಿದರು. ಸ್ವಾಮಿ ವಿವೇಕಾನಂದರ ಕುರಿತು ವಿದ್ಯಾರ್ಥಿಗಳಾದ ಶಾಹೀನಾ ಬೇಗಂ, ಸೋಮನಾಥ, ವಿಠಲ ಬಾಷಣ ಮಾಡಿದರು. ಪ್ರಾಚಾರ್ಯರಾದ ವೆಂಕಟೇಶ ಬಿ. ವೈದ್ಯಾಧಿ ಕಾರಿಗಳಾದ ಡಾ| ಶ್ವೇತಾಶ್ರೀ, ಡಾ| ಭರಮರಾಜ, ಪಂಚಾಯಿತಿ ಸಿಬ್ಬಂದಿ, ಪ್ರಕಾಶ, ಉಪನ್ಯಾಸಕರಾದ ಲಲಿತಾ ಕಿನ್ನಾಳ, ಡಾ| ವೀರೇಶ ಕೆಂಗಲ್, ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ, ಶಿವಾನಂದ, ಸೇರಿದಂತೆ ಇತರರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Politics: ಮಗನ ಪರ ನಿಲ್ಲಬೇಡಿ: ಬಿಎಸ್‌ವೈಗೆ ರಮೇಶ್ ಜಾರಕಿಹೊಳಿ; ಬಿವೈವಿ ಆಕ್ರೋಶ
Gangavathi: ಸಂಕ್ರಾಂತಿ: ತುಂಗಭದ್ರಾ ನದಿಯಲ್ಲಿ ಸಾವಿರಾರು ಜನರಿಂದ ಪುಣ್ಯ ಸ್ನಾನ
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ