ಸತತ 5 ಗಂಟೆ ನಡೆದ ಐಸಿಸಿ ಸಭೆ ಗೊಂದಲದಲ್ಲೇ ಅಂತ್ಯವಾಯ್ತು !
ಕೊನೆ ಭಾಗದ ರೈತರಿಗಾಗಿ ಬಿಗಿಪಟ್ಟು ಸಭೆ ನಿರ್ಣಯಕ್ಕೆ ರೈತ ಮುಖಂಡರ ವಿರೋಧಆಂಧ್ರ ಕೋಟಾ ನೀರು ಆಯಾ ತಿಂಗಳಲ್ಲಿ ಬಳಸಲಿ
Team Udayavani, Nov 22, 2019, 12:18 PM IST
ಕೊಪ್ಪಳ: ತಾಲೂಕಿನ ಮುನಿರಾಬಾದ್ ನೀರಾವರಿ ಕಚೇರಿಯಲ್ಲಿ ನಡೆದ 113ನೇ ನೀರಾವರಿ ಸಲಹಾ ಸಮಿತಿ ಸಭೆಯು ಬೆಳಗ್ಗೆ 11ಕ್ಕೆ ಆರಂಭವಾಗಿ ಸಂಜೆ 4 ಗಂಟೆವರೆಗೂ ಸತತ 5 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿ ಕೊನೆಯಲ್ಲಿ ಗೊಂದಲದಲ್ಲಿಯೇ ಅಂತ್ಯವಾಯಿತು.
ನಾಲ್ಕು ವರ್ಷಗಳಿಂದ ಎರಡನೇ ಬೆಳೆಗೆ ನೀರು ಕೊಡಲಾಗಿರಲಿಲ್ಲ. ಈ ಬಾರಿ ಡ್ಯಾಂಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಹಿನ್ನೆಲೆಯಲ್ಲಿ 2ನೇ ಬೆಳೆಗೆ ನೀರು ಹರಿಸುವ ವಿಚಾರದಲ್ಲಿ ರೈತರ ಜೊತೆ ಡಿಸಿಎಂ ಲಕ್ಷ್ಮಣ ಸವದಿ ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದರು.
ಸಭೆಯಲ್ಲಿ ಮಾಜಿ ಶಾಸಕ, ಸಚಿವರ ಜೊತೆಯೂ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು. ರೈತ ಮುಖಂಡರಿಂದಲೂ ಅಭಿಪ್ರಾಯ ಪಡೆದರು. ತರುವಾಯ ಮಧ್ಯಾಹ್ನ 2ರಿಂದ ಸಂಜೆ 4ಗಂಟೆ ವರೆಗೂ ಶಾಸಕ, ಸಂಸದರ ಜೊತೆ ಹಾಗೂ ಅಧಿ ಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದರು. ಎರಡನೇ ಬೆಳೆಗೆ ನೀರು ಪಕ್ಕಾ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ರೈತ ಸಮೂಹಕ್ಕೆ ಸವದಿ ಕೊನೆಯಲ್ಲಿ ಜನವರಿ ತಿಂಗಳು ಸಭೆ ನಡೆಸಿ ರೈತರಿಗೆ ನೀರು ಕೊಡುವ ಚಿಂತನೆಯ ಮಾತನ್ನಾಡಿದರು. ಆದರೆ ನಿರ್ಣಯದ ಪ್ರಕಟಣೆಯನ್ನು ಮಾಧ್ಯಮಕ್ಕೆ ಮಾಹಿತಿ ನೀಡಿದರು. ಆದರೆ ರೈತ ಮುಖಂಡರು ಮಾತ್ರ ಜಲಾಶಯದಲ್ಲಿ ನೀರಿದೆ. ಎರಡನೇ ಬೆಳೆಗೆ ನೀರು ಲಭ್ಯವಿದೆ. ಆದರೂ ಮತ್ತೆ ಜನವರಿ ತಿಂಗಳಲ್ಲಿ ಸಭೆ ನಡೆಸುವುದು ಏಕೆ? ಈಗಲೇ ಅದನ್ನು ನಿರ್ಣಯಿಸಿ ದಿನಾಂಕ ಪ್ರಕಟಿಸಿದರೆ ರೈತರು ಭತ್ತದ ಮಡಿಗಳನ್ನು ಹಾಕಲಿದ್ದಾರೆ. ನೀವು ಹೀಗೆ ಮುಂದಿನ ತಿಂಗಳು ಎಂದು ಹೇಳಿದರೆ ರೈತರಲ್ಲಿ ಗೊಂದಲವಾಗಲಿದೆ ಎಂದು ಸಭೆಗೆ ಒತ್ತಾಯ ಮಾಡಿದರು. ಇದಕ್ಕೆ ತಲೆಯಾಡಿಸಿದ ಸವದಿ ಅವರು ಎರಡನೇ ಬೆಳೆಗೆ ನೀರು ಕೊಡಲು ಕ್ರಮ ವಹಿಸಲಾಗುವುದು ಎಂದರು. ಗೊಂದಲದಲ್ಲಿಯೇ ಸಭೆ ನಿರ್ಣಯವನ್ನು ಮಾಧ್ಯಮಕ್ಕೆ ತಿಳಿಸಿ ತೆರಳಿದರು.
ಕೊನೆ ಭಾಗಕ್ಕೆ ನೀರಿಗಾಗಿ ಬಿಗಿಪಟ್ಟು: ತುಂಗಭದ್ರಾ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಯ ಕೊನೆ ಭಾಗದ ರೈತರ ಭೂಮಿಗೆ ನೀರು ಹರಿಸಬೇಕೆಂದು ಆ ಭಾಗದ ಶಾಸಕರು ಐಸಿಸಿ ಸಭೆಯಲ್ಲಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಭೆಯಲ್ಲಿ ಹಲವು ಚರ್ಚೆಗಳು ನಡೆದವು. ಎಡದಂಡೆ ನಾಲೆಗೆ 4200 ಕ್ಯೂಸೆಕ್ ನೀರು ಹರಿಸಿದರೆ ಮಾತ್ರ ಕೊನೆ ಭಾಗದ ರೈತರಿಗೆ ನೀರು ತಲುಪಲಿದೆ. 3800 ಕ್ಯೂಸೆಕ್ ನಷ್ಟು ನೀರು ಹರಿಸಿದರೆ ನಮಗೆ ನೀರು ಲಭ್ಯವಾಗಲ್ಲ. ರೈತರು ಸಂಕಷ್ಟ ಎದುರಿಸುವಂತಹ ಪರಿಸ್ಥಿತಿ ಬರಲಿದೆ. ಕೊನೆಯ ಭಾಗದ ರೈತರ ಕಷ್ಟವನ್ನು ಆಲಿಸಬೇಕೆಂದು ಬಿಗಿಪಟ್ಟು ಹಿಡಿದಿದ್ದರಿಂದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದವು. ಕಾಲುವೆ ಆಧುನೀಕರಣದ ನೆಪ ಹಾಗೂ ಅಗಲೀಕರಣ ಮಾಡಿದ್ದರಿಂದ ನೀರು ರಭಸವಾಗಿ ಹರಿಯಲ್ಲ. ಹೀಗಾಗಿ ಕೊನೆ ಭಾಗಕ್ಕೆ ನೀರು ಸಕಾಲಕ್ಕೆ ತಲುಪಲ್ಲ. ಕೂಡಲೇ ಇದನ್ನು ಪರಿಶೀಲನೆ ನಡೆಸಬೇಕು. ಇನ್ನೂ ಆನ್ ಆ್ಯಂಡ್ ಆಫ್ ಪದ್ಧತಿ ಮಾಡಿದರಂತೂ ನಮಗೆ ನೀರೇ ಬರಲ್ಲ ಎಂದು ಸಭೆಯಲ್ಲಿ ಚರ್ಚೆ ನಡೆದವು.
2 ಲಕ್ಷ ಎಕರೆ ಅಕ್ರಮ ಭತ್ತ ನಾಟಿ!: ಜನಪ್ರತಿನಿಧಿಗಳ ಜೊತೆ ನಡೆದ ಐಸಿಸಿ ಆಂತರಿಕ ಸಭೆಯಲ್ಲಿ ತುಂಗಭದ್ರಾ ಜಲಾಶಯದ ಭತ್ತ ನಾಟಿ ಪ್ರದೇಶ ವಿಸ್ತಾರವಾಗಿದೆ. ಎಲ್ಲ ರೈತರಿಗೂ ನೀರು ಹರಿಸಲು ಕಷ್ಟಸಾಧ್ಯವಾಗಿದೆ. 6 ಲಕ್ಷ ಎಕರೆ ಪ್ರದೇಶದಿಂದ 8 ಲಕ್ಷ ಎಕರೆ ಪ್ರದೇಶವಾಗಿದೆ. ಇದರಿಂದ ಭತ್ತ ಅಕ್ರಮ ನಾಟಿಯಾಗುವ ಬಗ್ಗೆ ಚರ್ಚೆ ನಡೆಸಬೇಕು ಎಂದು ಅಧಿಕಾರಿ ವರ್ಗ ಸಭೆ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಯಾವ ಶಾಸಕರು ಪ್ರತಿ ಮಾತನಾಡದೇ, ರೈತರನ್ನು ವಿರೋಧ ಹಾಕಿಕೊಳ್ಳಲು ಯಾವುದೇ ಶಾಸಕರು ತಯಾರಿಲ್ಲ. ಎಲ್ಲ ರೈತರಿಗೂ ನೀರು ಕೊಡಬೇಕು ಎನ್ನುವ ಉತ್ತರ ನೀಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಯಿತು.
ಕಾಂಗ್ರೆಸ್ ಪ್ರತಿಭಟನೆ: ತುಂಗಭದ್ರಾ ಡ್ಯಾಂನಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಆದರೂ ಎರಡನೇ ಬೆಳೆಗೆ ನೀರು ಕೊಡಲು ಸಲಹಾ ಸಮಿತಿ ಸಭೆಯಲ್ಲಿ ಮೀನಮೇಷ ಎಣಿಸಲಾಗುತ್ತಿದೆ. ಕೂಡಲೇ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಕೈ ಮುಖಂಡರು ಒತ್ತಾಯ ಮಾಡಿದರು. ಬಿಜೆಪಿ ಸರ್ಕಾರ ರೈತರಿಗೆ ನೀರು ಕೊಡದೇ ಮೋಸ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.