ಮೋದಿ ಸಮಾವೇಶಕ್ಕೆ ಸಾಗರೋಪಾದಿ ಜನಸ್ತೋಮ
ಗವಿಸಿದ್ದೇಶ್ವರ, ಆಂಜನೇಯ ನೆನೆದ ಮೋದಿ ಎಲ್ಲಲ್ಲೂ ಮೋದಿ.. ಮೋದಿ.. ಜೈಕಾರ
Team Udayavani, Apr 13, 2019, 11:09 AM IST
ಕೊಪ್ಪಳ: ಸಮಾವೇಶ ಪೆಂಡಾಲ್ ಹೊರಗಡೆಯೂ ಜನಸ್ತೋಮ ಬಿಸಿಲಿನಲ್ಲೇ ನಿಂತು ಪ್ರಧಾನಿ ಮೋದಿ ಭಾಷಣ ಆಲಿಸಿತು.
ಕೊಪ್ಪಳ/ಗಂಗಾವತಿ: ಭತ್ತದ ನಾಡು ಗಂಗಾವತಿಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶಕ್ಕೆ ಲಕ್ಷ ಲಕ್ಷ ಜನಸ್ತೋಮ ಮೋದಿ ಸಮಾವೇಶಕ್ಕೆ ಸಾಕ್ಷಿಯಾಯಿತು. ಎಲ್ಲೆಲ್ಲೂ ಮೋದಿ ಪರ ಜೈಕಾರ.. ಪೊಲೀಸರ ಭದ್ರತೆ ಕಾಪಾಡಿಕೊಳ್ಳಲು ಮಾಡಿದ ಹರಸಾಹಸ ಜನರ ಪ್ರೀತಿ, ಅಭಿಮಾನಕ್ಕೆ ಸ್ವತಃ ಮೋದಿಯೇ ಅಭಾರಿಯಾಗಿ ನಿಮ್ಮ ಪ್ರೀತಿಯ ಸೌಭಾಗ್ಯ ನನ್ನ ಪುಣ್ಯವೇ ಸರಿ ಎಂದು ಗುಣಗಾನ ಮಾಡಿದರು.
ಬಿಜೆಪಿ ಕಾರ್ಯಕ್ರಮ ಮಧ್ಯಾಹ್ನ 3 ಗಂಟೆಗೆ ನಡೆಯುವ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಸಮಾವೇಶದ ಸ್ಥಳಕ್ಕೆ ಆಗಮಿಸಿದ್ದ ಲಕ್ಷಾಂತರ ಜನರು ಬಿಸಲು ಲೆಕ್ಕಿಸದೇ ಬಂದು ಕುಳಿತು ಮೋದಿ ಹಾದಿಯನ್ನೇ ನೋಡುತ್ತಿದ್ದರು.
ಎಲ್ಲೆಡೆಯೂ ಜನ ಸಂಗುಳಿ ನೋಡಿದ ಪೊಲೀಸರೇ ಕಕ್ಕಾಬಿಕ್ಕಿಯಾಗಿ ಜನರ ನಿಯಂತ್ರಣ ಮಾಡುವಲ್ಲಿ ಹರ ಸಾಹಸ ಪಡುತ್ತಿದ್ದರು.
ಮಧ್ಯಾಹ್ನದ ವೇಳೆಗೆ ಜನರ ನಿಯಂತ್ರಣ ಮಾಡಿಯೇ ಪೊಲೀಸರು ನಿತ್ರಾಣಕ್ಕೆ
ಬಿದ್ದಿದ್ದರು. ಎಲ್ಲೂ ನೋಡಿದರೂ ಮೋದಿಯ ಮಾತು-ಗುಣಗಾನ ಕೇಳಿ ಬಂದಿತು. ಅಲ್ಲದೇ, ಕೇಸರಿಯಮ ವಾತಾವರಣ ನೋಡಿ ಎಲ್ಲರೂ ತಬ್ಬಿಬ್ಟಾಗುತ್ತಿದ್ದರು. ಗಂಗಾವತಿ ಕೃಷಿ ವಿಸ್ತರಣಾ ಕೇಂದ್ರದ ಮುಂದೆ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಪೆಂಡಾಲ್‌ನಲ್ಲಿನ ಮಿತಿಯನ್ನೂ ಮೀರಿ ಜನಸ್ತೋಮ ಸೇರಿತ್ತು. ನಗರದ ಇಸ್ಲಾಂಪುರ ಸರ್ಕಲ್‌ನಿಂದ ಹಿಡಿದು ಸಮಾವೇಶದವರೆಗೂ ಜನರು ನಡೆದುಕೊಂಡೇ ಆಗಮಿಸಿದ್ದರು.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಗಮಿಸಿದ ಮೋದಿ ನೇರ ವೇದಿಕೆಯತ್ತ ಆಗಮಿಸಿ ಜನರತ್ತ ಕೈ ಬೀಸಿದರು. ಮೋದಿಯನ್ನು ಹತ್ತಿರದಿಂದ ನೋಡಲು ಆಗಮಿಸುತ್ತಿದ್ದ ಯುವಕರನ್ನು ನೋಡಿ ಮತ್ತೆ ಅವರತ್ತ ಕೈ ಬೀಸಿ ಅಲ್ಲೇ ನಿಂತ
ಸ್ಥಳದಲ್ಲೇ ಇರಿ ನಾನು ನಿಮ್ಮ ಮಾತನಾಡುವೆ ಎಂದು ಸನ್ನೆ ಮಾಡಿ ಸೆಲ್ಯೂಟ್ ಹೊಡೆದರು. ಆದರೂ ಮೋದಿಯ ಸ್ಟೈಲ್‌ಗೆ ಫಿದಾ ಆದ ಯುವ ಜನತೆ ಮೋದಿ.. ಮೋದಿ.. ಎನ್ನುವ ಜೈಕಾರ ಕೂಗುತ್ತಲೇ ಇದ್ದರು.
ಇತ್ತ ಭಾಷಣ ಆರಂಭಿಸಿದ ಮೋದಿ ಆರಂಭದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ
ಸ್ವಾಮೀಜಿ, ಮಠಗಳ ಸಂತರು, ಅಂಜನಾ ದ್ರಿ ಬೆಟ್ಟ ಸೇರಿದಂತೆ ಹಲವು ಮಠಗಳ ಸ್ಮರಣೆ ಮಾಡುತ್ತಲೇ ಮಾತು ಆರಂಭಿಸಿದರು. ಎಲ್ಲಲ್ಲೂ ಮಾತಿನ ಮಧ್ಯೆ ಮೋದಿ ಬಗ್ಗೆ ಜೈಕಾರ ಹಾಕುತ್ತಿದ್ದಂತೆ, ಜನರ ನಿಯಂತ್ರಣ ತಪ್ಪಿ ಮೋದಿ ವೇದಿಕೆಯ ಸಮೀಪದಲ್ಲಿಯೇ ಯುವಕರು ಆಗಮಿಸಿದರು. ಇದರಿಂದ
ಸ್ವತಃ ಮೋದಿ ಅವರೇ ವೇದಿಕೆಯ ಕೊನೆಯ ಭಾಗಕ್ಕೆ ತೆರಳಿ ಯುವ ಸಮೂಹದತ್ತ ಕೈ ಬೀಸಿ ನಿಮ್ಮ ಪ್ರೀತಿ, ವಾತ್ಸಲ್ಯಕ್ಕೆ ತುಂಬ ಅಭಾರಿಯಾಗಿದ್ದೇನೆ. ಈ ಪುಣ್ಯ ಭೂಮಿಯಲ್ಲಿ ಈ ಜನಸಾಗರ ನೋಡಿದ್ದು ನನ್ನ ಸೌಭಾಗ್ಯವೇ ಸರಿ. ಪ್ರತಿಯೊಬ್ಬರೂ ತಾಳ್ಮೆಯಿಂದ ಇರಿ. ಸಾವಧಾನವಾಗಿರಿ ಎಂದರಲ್ಲದೇ, ಈ ಜನಸ್ತೋಮದ ಆಶೀರ್ವಾದ ನಮಗೆ ಬೇಕಿದೆ. ಮತದಾನದ ದಿನದಂದು ಇದೇ ರೀತಿ ಬೃಹತ್ ಪ್ರಮಾಣದಲ್ಲಿ ಮತಗಟ್ಟೆಗಳ ಮುಂದೆ ನಿಂತ ವೋಟ್ ಮಾಡಿಸಬೇಕೆಂಬ ಸಂದೇಶ
ನೀಡಿದರು.
ಮೋದಿಗೆ ಬೆಳ್ಳಿ ಗದೆ ಅರ್ಪಣೆ
ಪ್ರಧಾನಿ ನರೇಂದ್ರ ಮೋದಿ ಹನುಮನು ಜನಿಸಿದ ನಾಡಿಗೆ ಆಗಮಿಸುತ್ತಿರುವ
ಹಿನ್ನೆಲೆಯಲ್ಲಿ ಗಂಗಾವತಿಯ ಹನುಮ ಮಾಲಾಧಾರಿಗಳು ಬೆಳ್ಳಿ
ಗದೆ ಅರ್ಪಣೆ ಮಾಡಿದರು. ಅಲ್ಲದೇ, ಹಲವು ಮಾಲಾಧಾರಿಗಳು ವೇದಿಕೆ
ಮುಂಭಾಗದಲ್ಲಿಯೇ ಕುಳಿತು ಮೋದಿ ಪರ ಜೈಕಾರ ಕೂಗಿದರು. ಜೊತೆಗೆ ಅಲ್ಲಲ್ಲಿ ನಿಂತು ವಿವಿಧ ವ್ಯವಸ್ಥೆ ಮಾಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?
Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್ ರಾಡಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.