ಅಂತರಂಗ-ಬಹಿರಂಗ ಶುದ್ಧಿಯಾಗಲಿ
•ಶರಣರ ಆದರ್ಶಗಳಲ್ಲಿದೆ ನಮ್ಮ ಬದುಕು•ಧನ-ಅಧಿಕಾರ-ಕುಲ ಮಧ ತೊಲಗಲಿ
Team Udayavani, Aug 22, 2019, 1:37 PM IST
ಕೊಪ್ಪಳ: ನಗರದ ಶಿವಶಾಂತ ಮಂಗಲ ಭವನದಲ್ಲಿ ಬುಧವಾರ ನಡೆದ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು
ಕೊಪ್ಪಳ: ಬಸವಾದಿ ಶರಣರು 12ನೇ ಶತಮಾನದಲ್ಲಿ ಮಹಾ ಕ್ರಾಂತಿಯನ್ನೇ ಮಾಡಿದ್ದಾರೆ. ಅವರ ಆದರ್ಶಗಳಲ್ಲಿಯೇ ನಮ್ಮ ಜೀವನದ ಸಾಮರಸ್ಯ ಅಡಗಿದೆ. ಉತ್ತಮರ ಸಂಗ, ಆಚಾರ, ವಿಚಾರಗಳು ನಮ್ಮನ್ನು ಉನ್ನತಿಗೆ ಕೊಂಡೊಯ್ಯಲಿವೆ. ನಾವು ಧನ, ಅರ್ಥ ಹಾಗೂ ಕುಲ ಮಧದಿಂದ ದೂರ ಇರಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಶಿವಶಾಂತ ಮಂಗಲ ಭವನದಲ್ಲಿ ಬುಧವಾರ ಮತ್ತೆ ಕಲ್ಯಾಣ ಸಮಿತಿಯಿಂದ ನಡೆದ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಏಷ್ಟೋ ಜನರು ದೇವರನ್ನು ಒಲಿಸಿಕೊಳ್ಳಲು ಮಠ, ಮಂದಿರ, ಮಸೀದಿ, ಚರ್ಚ್‌ಗಳಿಗೆ ತೆರಳಿ ಗಂಟೆಗಳ ಕಾಲ ಧ್ಯಾನ, ಮೌನಾಚರಣೆ ಮಾಡುತ್ತಾರೆ. ಆದರೆ ದೇಗುಲದಿಂದ ಹೊರ ಬಂದಾಕ್ಷಣ ಮತ್ತೆ ಲೌಖೀಕ ಬದುಕಿನಲ್ಲಿ ತೊಡಗಿ ಮಾಡಬಾರದ್ದನ್ನು ಮಾಡುತ್ತಾರೆ. ಅಂತರಂಗದಲ್ಲಿ ಒಂದಿದ್ದರೆ, ಬಹಿರಂಗದಲ್ಲಿ ಒಂದು ಮಾಡುತ್ತಾರೆ. ಮೊದಲು ಅಂತರಂಗ, ಬಹಿರಂಗ ಶುದ್ಧಿ ಮಾಡಿಕೊಳ್ಳಬೇಕಿದೆ. ಒಳ್ಳೆಯ ಮಾತು, ಒಳ್ಳೆಯ ಕಾರ್ಯ, ಎಲ್ಲರ ಹಿತ ಬಯಸುವುದು, ಉತ್ತಮರ ಸಂಗವು ನಮ್ಮನ್ನು ಶುದ್ಧಿಗೊಳಿಸಲಿದೆ. ಇತ್ತೀಚೆಗಂತೂ ಶುದ್ಧಿಗಾಗಿ ದೂರದ ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಬಸವಣ್ಣ ಕಾಯಕವೇ ಕೈಲಾಸ ಎಂದಿದ್ದಾರೆ. ನಿಮ್ಮ ಕಾಯಕದಲ್ಲಿಯೇ ನೀವು ದೇವರನ್ನು ಕಾಣಿ. ಶ್ರಮವಿಲ್ಲದೇ ನಾವು ಉನ್ನತಿಗೆ ಬರಲು ಸಾಧ್ಯವಿಲ್ಲ ಎಂದರು.
ನಾವು ನಡೆಯುವ ಮಾರ್ಗ ಸರಿಯಾಗಿರಬೇಕು. ನಿನ್ನೊಳಗಿನ ವೇಷ, ದಾರಿ, ಮುಖವಾಡ ಸರಿಯಿದ್ದರೆ ಬದುಕು ಬಂಗಾರವಾಗಲಿದೆ. ನಮ್ಮ ವ್ಯಕ್ತಿತ್ವ ಬೆಳಗಲಿದೆ. ಒಳ್ಳೆಯವರ ಒಡನಾಟ ಬೆಳೆಸಿಕೊಂಡರೆ, ಸಜ್ಜನರ ಒಡನಾಟ ಹೆಚ್ಚಾದರೆ ನಮ್ಮ ವ್ಯಕ್ತಿತ್ವವೂ ಬದಲಾಗುತ್ತದೆ. ನಾವು ಹಣ, ಆಸ್ತಿ ಗಳಿಸಿದರೂ ಸಾವಿರ ವರ್ಷ ಬದುಕಲು ಸಾಧ್ಯವಿಲ್ಲ. ಆದರೆ ಬುದ್ಧ, ಬಸವಣ್ಣ ತಮ್ಮ ಆದರ್ಶಗಳಿಂದಲೇ ಇಂದು ಜೀವಂತವಾಗಿದ್ದಾರೆ. ಗಾಂಧಿಧೀಜಿ ಅವರ ಆದರ್ಶವನ್ನು ನಾವು ನೆನೆಯುತ್ತಿದ್ದೇವೆ. ವೈಚಾರಿಕ ವಿಚಾರ ಬೆಳೆಸಿಕೊಂಡರೆ ಸೂರ್ಯ ಇರುವವರೆಗೂ ಮನುಷ್ಯ ಬದುಕಿರುತ್ತಾನೆ. ಆದರ್ಶವಾದಿಗಳು ಎಂದೂ ಶ್ರೀಮಂತಿಕೆಯ ಹಿಂದೆ ಓಡಲಿಲ್ಲ. ಆಸೆಯೇ ದುಃಖಕ್ಕೆ ಮೂಲ ಎಂದು ಸಾರಿದರು. ಆ ಆಶಯವನ್ನು ನಮ್ಮ ಕಾಯಕದ ಮೂಲಕ ಈಡೇರಿಸಿಕೊಳ್ಳಬೇಕು. ಆದರೆ ಇಂದು ಗ್ರಾಪಂ ಸದಸ್ಯನಿಂದ ಹಿಡಿದು ರಾಷ್ಟ್ರಪತಿವರೆಗೂ ಅಧಿಕಾರದ ಮಧ ಏರಿದೆ ಎಂದರು.
ಮನುಷ್ಯನಿಗೆ ಇಂದು ಆನೆ ಮಧ ಬಂದಿದೆ. ಆನೆಗೆ ಮಧ ಏರಿದಾಗ ಏನೂ ಕಾಣಿಸಿಲ್ಲ. ಇಂದು ಪರಿಸ್ಥಿತಿ ಹಾಗಾಗಿದೆ. ಧನ ಮಧ, ಕುಲ ಮಧ ಹಾಗೂ ಅರ್ಥ ಮಧ ಹೆಚ್ಚು ಅಪಾಯಕಾರಿ ಎಂದು ಶರಣರು ಸಾರಿ ಸಾರಿ ಹೇಳಿದ್ದಾರೆ. ಇನ್ನೂ ಕುಲ ಮಧದಿಂದ ನಾವು ದೂರ ಇರಬೇಕು. ಈ ಜಗತ್ತಿನಲ್ಲಿ ಗಾಳಿ, ಬೆಳಕಿಗೆ ಜಾತಿಯಿಲ್ಲ. ಈ ಮೂರು ಆಶಯಗಳೊಂದಿಗೆ ಮತ್ತೆ ಕಲ್ಯಾಣ ಆರಂಭಿಸಿದ್ದೇವೆ. ಇಲ್ಲಿನ ವಿಚಾರಗಳು ಎಲ್ಲರಿಗೂ ತಲುಪಬೇಕು. ವ್ಯಕ್ತಿ ಬದಲಾದರೆ ದೇಶ ಬದಲಾಗುತ್ತದೆ. ನಾವು ನಮ್ಮ ವ್ಯಕ್ತಿತ್ವದ ಜೊತೆಗೆ ಸಮಾಜದ ವ್ಯಕ್ತಿತ್ವ ರೂಪಿಸೋಣ ಎಂದರು.
ಡಾ| ಸಿದ್ಧನಗೌಡ ಪಾಟೀಲ್ ಮಾತನಾಡಿ, ಇಂದು ಧಮನವೇ ಧರ್ಮದ ಮೂಲವಯ್ಯ ಎನ್ನುವ ಭಾವನೆ ಬಂದಿದೆ. ಚರ್ಚ್, ದೇವಾಲಯ ಸಂಕೇತಗಳೇ ಹೊರತು ಭಾವನೆಯಲ್ಲ. ಧರ್ಮ ಎನ್ನುವುದು ಅಂತರಾತ್ಮದೊಳಗೆ ಇದೆ. ಧಾರ್ಮಿಕ ಸಂಕೇತಗಳ ಮಧ್ಯೆ ಇಂದು ಸಂಘರ್ಷ ನಡೆದಿದೆ. ಧರ್ಮಾಂಧರಿಂದ ಸಮಾಜ ಕೆಡುತ್ತಿದೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಹೇಳಿದ ಅಂಶಗಳೇ ಇಂದು ಸಂವಿಧಾನದ ರಾಜ್ಯ ನಿರ್ದೇಶನದ ತತ್ವಗಳು ಒಳಗೊಂಡಿವೆ ಎಂದರು.
12ನೇ ಶತಮಾನದಲ್ಲಿ ಬಸವಣ್ಣ ವೇದದ ನೀತಿಗಳ ವಿರುದ್ಧ ಹೋರಾಡಿದರು. ಪ್ರಭುತ್ವವನ್ನೇ ಧಿಕ್ಕಾರ ಮಾಡಿ ಕಾಯಕವೇ ಕೈಲಾಸ. ಅಲ್ಲಿಯೇ ದೇವರನ್ನು ಕಾಣಿ ಎಂಬ ಸಂದೇಶ ಸಾರಿದರು. ಆದರೆ ಇಂದು ವಂಚನೆಯ ವ್ಯವಸ್ಥೆ ಹೆಚ್ಚಾಗಿದೆ. ಆಯ್ದಕ್ಕಿ ಲಕ್ಕಮ್ಮ ಈಸಕ್ಕಿ ಆಸೆ ನಮಗೇಕಯ್ಯ ಎಂದು ಪತಿಗೆ ಹೇಳಿದ್ದರಂತೆ. ಒಂದು ದಿನಕ್ಕೆ ಆಗುವಷ್ಟು ಅಕ್ಕಿ ನಮಗಿದೆ. ನಾಳೆಯ ಅಕ್ಕಿ ನಮಗೇಕೆ ಎಂದು ಹೇಳಿದ್ದಳು. ಆದರೆ ಇಂದು ಕೋಟಿ ಕೋಟಿ ಲೂಟಿ ಹೊಡೆದು ಪರಾರಿಯಾಗುವ ಸಂಸ್ಕೃತಿ ಬೆಳೆದಿದೆ. ಇಂದು ಬಸವಣ್ಣನ ಕಾಯಕ ಚಿಂತನೆ, ಲಕ್ಕಮ್ಮನ ಚಿಂತನೆಗಳು ಅವಶ್ಯವಾಗಿವೆ ಎಂದರು.
ಅರ್ಥ, ಅಹಂಕಾರ, ಕುಲ ಮಧ ತೊಲಗಿದುವುದು ಮತ್ತೆ ಕಲ್ಯಾಣದ ಆಶಯವಾಗಿದೆ. ಜಗತ್ತಿನ ಎಲ್ಲ ಧರ್ಮಗಳು ಮನುಷ್ಯ ಹೇಗೆ ಬಾಳಬೇಕು ಎಂದು ಬೋಧಿಸಿವೆ. ಹಲವಾರು ಧರ್ಮಗಳು ಕೂಡಿಕೊಂಡು ಹೇಗೆ ಬದುಕಬೇಕು ಎಂದು ಯಾವ ಧರ್ಮ ಹೇಳಿಲ್ಲ. ಆದರೆ ಬಸವಣ್ಣ ಅದನ್ನು ಹೇಳಿದ್ದಾರೆ. ತಾತ್ವಿಕವಾಗಿ, ಮಾನಸಿಕವಾಗಿ ನಮ್ಮ ಚಿಂತನೆಗಳ ಮೂಲಕ 12ನೇ ಶತಮಾನದ ಚಿಂತನೆ ಮಾಡೋಣ, ಮಾನವ ಧರ್ಮ ಕಾಪಾಡೋಣ ಎನ್ನುವ ಸಂದೇಶ ನೀಡಿದರು. ಸಮಾರಂಭದಲ್ಲಿ ಸಾವಿತ್ರಿ ಮಜಂದಾರ, ಮೌಲಾನಾ ಮಹ್ಮದ್ ಇಮ್ತಿಯಾಜ್ ಸೇರಿದಂತೆ ರೈತ ಮುಖಂಡರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.