ಆಧಾರ್ ತಿದ್ದುಪಡಿಗೆ ಅಲೆದಾಟ
ರಾತ್ರಿಯಿಡೀ ಕಾಯ್ದರೂ ಆಗುತ್ತಿಲ್ಲ ಕೆಲಸ •ದಿನಕ್ಕೆ 30 ಟೋಕನ್
Team Udayavani, Jun 14, 2019, 11:31 AM IST
ಕೊಟ್ಟೂರು: ಪಟ್ಟಣದ ಅಂಚೆ ಕಚೇರಿಗೆ ತಹಶೀಲ್ದಾರ್ ಅನಿಲ್ ಕುಮಾರ ಭೇಟಿ ನೀಡಿ ಅಂಚೆ ಕಚೇರಿ ಸಿಬ್ಬಂದಿಯೊಂದಿಗೆ ಸಮಸ್ಯೆ ಕುರಿತು ಚರ್ಚಿಸಿದರು.
•ರವಿಕುಮಾರ ಎಂ.
ಕೊಟ್ಟೂರು: ಸರ್ಕಾರ ಹಲವು ಸೌಲಭ್ಯಗಳ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿಸಿದೆ. ಆಧಾರ್‌ಗಾಗಿ ಜನರು ಊಟ, ನಿದ್ರೆ ಬಿಟ್ಟು ಬ್ಯಾಂಕ್, ಪೋಸ್ಟ್ ಎದುರು ರಾತ್ರಿಯಿಡೀ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಖಾಸಗಿಯಾಗಿ ಹಾಗೂ ಸರ್ಕಾರದ ವತಿಯಿಂದ ಆಧಾರ್ ಕಾರ್ಡ್ ಮಾಡುವ ಕೇಂದ್ರಗಳಿಗೆ ಸರ್ಕಾರ ಅನುಮತಿ ನೀಡಿದ್ದರು. ಜನರಿಗೆ ಇದರ ಸಂಕಷ್ಟ ಇನ್ನೂ ತಪ್ಪಿಲ್ಲ. ಈಗಾಗಲೇ ಸರ್ಕಾರ ಘೋಷಿಸುವ ಹಲವಾರು ಯೋಜನೆಗಳಿಗೆ ಈ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಆದರೆ ಕೆಲವು ತಾಂತ್ರಿಕ ದೋಷದಿಂದಾಗಿ ಜನರ ಹೆಸರು ಜನ್ಮ ದಿನಾಂಕ, ವಿಳಾಸ, ಮೊಬೈಲ್ ನಂಬರನಂತಹ ದೋಷದಿಂದಾಗಿ ಸರ್ಕಾರದ ಯೋಜನೆ ಪಡೆಯಲು ಸಾಮಾನ್ಯ ಜನತೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದೋಷವನ್ನು ಸರಿಪಡಿಸಲು ಈಗ ನೀಡಿರುವ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿದರೆ ಕೇಂದ್ರಗಳಲ್ಲಿ ಹೆಚ್ಚು ಜನರ ದಟ್ಟಣೆ ಇರುವುದು ಹಾಗೂ ಇಂಟರ್‌ನೆಟ್ ತಾಂತ್ರಿಕ ದೋಷದಿಂದಾಗಿಯು ಎರಡು ಮೂರು ದಿನಗಳು ಅಲೆದಾಡುವ ಪರಿಸ್ಥಿತಿಯಾಗಿದೆ. ಕೊಟ್ಟೂರಿನಲ್ಲಿ ಪ್ರಧಾನ ಅಂಚೆ ಕಚೇರಿಯಲ್ಲಿ ಒಂದೇ ಕೇಂದ್ರದಲ್ಲಿ ಮಾತ್ರ ತಿದ್ದುಪಡಿ ಇರುವುದರಿಂದ ತುಂಬಾ ಕಷ್ಟಕರವಾಗಿದೆ. ಎಸ್‌ಬಿಐ ಬ್ಯಾಂಕ್ ಇತರ ಖಾಸಗಿ ಸಂಸ್ಥೆಗಳಿಗೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡುವ ಸೌಲಭ್ಯವನ್ನು ಸರ್ಕಾರ ಒದಗಿಸಿದ್ದರೂ, ಅವ್ಯಾವು ಕೆಲಸ ನಿರ್ವಹಿಸುತ್ತಿಲ್ಲ.
ಇಲ್ಲಿನ ರೈತರು ತಮ್ಮ ಕೆಲಸ, ಕಾರ್ಯ ಬಿಟ್ಟು ನಿಲ್ಲುವ ಪರಿಸ್ಥಿತಿ ಹಾಗೂ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳನ್ನು ಗೈರು ಹಾಜರಾಗಿ ನಿಲ್ಲುವ ಪರಿಸ್ಥಿತಿಯುಂಟಾಗಿದೆ. ಆದರೆ ದಿನ ಒಂದಕ್ಕೆ ಅಂಚೆ ಕಚೇರಿಯಲ್ಲಿ ಕೇವಲ 30 ಜನರಿಗೆ ಮಾತ್ರ ತಿದ್ದುಪಡಿ ಮಾಡಲು ಟೋಕನ್ ನೀಡುತ್ತಿದ್ದು, ಉಳಿದವರು ಸಾಲು ಸರದಿಯಲ್ಲಿ ನಿಂತು ಕಷ್ಟಪಟ್ಟರೂ ಫಲ ಸಿಗದೆ ನಿರಾಸೆಯಿಂದ ವಾಪಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಾವೇನು ಸರ್ಕಾರದ ಆಸ್ತಿ ಕೇಳುತ್ತಿಲ್ಲ. ಆಧಾರ್ ಕಾರ್ಡ್‌ನಲ್ಲಿ ದಾಖಲೆ ಸರಿಪಡಿಸುವಂತೆ ಕೇಳುತ್ತಿದ್ದೇವೆ. ಆದ್ದರಿಂದ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲ ಗ್ರಾಪಂ ವ್ಯಾಪ್ತಿಯಿಂದ ಹಿಡಿದು ಎಲ್ಲರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಹಾಗೂ ಅರ್ಜಿ ಸಲ್ಲಿಸಿದ ಕೂಡಲೇ ಸ್ವೀಕೃತಿಯಲ್ಲಿ ತಪ್ಪುಗಳು ಸರಿಯಾಗುವಂತೆ ಮುನ್ನೆಚ್ಚರಿಕೆ ವಹಿಸಬೇಕು.
•ಬಸವರಾಜ ಗುತ್ತಲ, ಸ್ಥಳೀಯರು.
ದಿನನಿತ್ಯದ ವಹಿವಾಟು ಹೆಚ್ಚಾಗಿರುವುದರಿಂದ ಎಲ್ಲ ಸಮಸ್ಯೆಗಳನ್ನು ನಾವೇ ಬಗೆಹರಿಸುತ್ತಿದ್ದೇವೆ. ಕೂಡಲೇ ಮೇಲಧಿಕಾರಿಗಳು ಆಧಾರ್ ಕಾರ್ಡ್ ತಿದ್ದುಪಡಿ/ ಹೊಸದು ಮಾಡಲು ಇತರೆ ಸರ್ಕಾರಿ ಕಚೇರಿ ಮತ್ತು ಬ್ಯಾಂಕ್‌ಗಳಿಗೆ ಹಂಚಿಕೆ ಮಾಡಬೇಕು.
•ಶೆಟ್ಟಿ ರಾಜಶೇಖರ್,
ಪೋಸ್ಟ್ ಮಾಸ್ಟರ್.
ಆಧಾರ್ ಕಾರ್ಡ್ ಕಡ್ಡಾಯವಾಗಿರುವುದರಿಂದ ಎಲ್ಲ ಸರ್ಕಾರ ಕೇಂದ್ರಗಳು ಹಾಗೂ ಗ್ರಾಪಂನಲ್ಲಿ ರೈತರಿಗೆ ವಿದ್ಯಾರ್ಥಿಗಳಿಗೆ ಆಧಾರ್ ತಿದ್ದುಪಡಿ ಮಾಡಲು ಅವಕಾಶ ನೀಡಬೇಕೆಂದು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಕೂಡಲೇ ತಿಳಿಸಿ ಸಮಸ್ಯೆ ಬಗೆಹರಿಸಲಾಗುವುದು.
•ಅನಿಲ್ ಕುಮಾರ್,
ತಹಶೀಲ್ದಾರರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್. ಸಂತೋಷ್ ಹೆಗ್ಡೆ
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.