ಕಾಂಗ್ರೆಸ್‌ ಪ್ರಣಾಳಿಕೆ ಜೀವಕೇಂದ್ರಿತ:ಡಾ| ಬಿ.ಎಲ್‌.ಶಂಕರ್‌

Team Udayavani, Apr 6, 2019, 4:52 PM IST

Udayavani Kannada Newspaper

ಚಿಕ್ಕಮಗಳೂರು: ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಜನರ ಬದುಕಿಗೆ ಸಂಬಂಧಿ ಸಿದ ಜೀವಕೇಂದ್ರಿತವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಡಾ| ಬಿ.ಎಲ್‌. ಶಂಕರ್‌ ಬಣ್ಣಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಅವರು ಮಾತನಾಡಿ, ಯಾವುದೇ ಚುನಾವಣೆಯಲ್ಲಿ ಆಡಳಿತ ಪಕ್ಷ ತಾವು ಮಾಡಿರುವ ಸಾಧನೆ,
ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ಜನರಿಗೆ ತಿಳಿಸುತ್ತವೆ. ವಿರೋಧ ಪಕ್ಷ ಆಡಳಿತ ಪಕ್ಷದ ವೈಫಲ್ಯಗಳನ್ನು ಜನರ ಮುಂದಿಡುವ ಕೆಲಸ ಮಾಡುತ್ತವೆ. ಆದರೆ ಈ ಚುನಾವಣೆಯಲ್ಲಿ
ಸಾಧನೆಗಳನ್ನು ಜನರ ಮುಂದಿಡದೆ ಬೇರೆಯ ವಿಷಯಗಳಾದ ದೇಶದ ಸಮಗ್ರತೆ ಮತ್ತು ಬಲಿಷ್ಠ ನಾಯಕತ್ವ ವಿಷಯ ಪ್ರಸ್ತಾಪಿಸಿ ಜನರನ್ನು ಭಾವನಾತ್ಮಕವಾಗಿ ಪರಿವರ್ತಿಸಲಾಗುತ್ತಿದೆ ಎಂದು ಹೇಳಿದರು.

ಭಾವನಾತ್ಮಕ ಮಾತುಗಳು ಕ್ಷಣಿಕ. ಕಾಂಗ್ರೆಸ್‌ ಜನರ ಬದುಕಿಗೆ ಸಂಬಂ ಸಿದ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ವಿಷಯಾಧಾರಿತ ಚುನಾವಣೆಗೆ ನಾಂದಿ ಹಾಡಿದೆ ಎಂದು
ನುಡಿದರು.

ಚುನಾವಣಾ ಪ್ರಣಾಳಿಕೆಯಲ್ಲಿನ ನ್ಯಾಯ್‌ ಯೋಜನೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ.33 ರಷ್ಟು ಮಹಿಳಾ ಮೀಸಲಾತಿಗೆ ಸಮ್ಮತಿಸಲಾಗಿದೆ. ದೇಶದಲ್ಲಿ ಖಾಲಿ ಇರುವ
24 ಲಕ್ಷ ಹುದ್ದೆಗಳನ್ನು ಭರ್ತಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸುವ ಮೂಲಕ
ರೈತರನ್ನು ಋಣ ಮುಕ್ತರನ್ನಾಗಿಸುವ ವಿಷಯವನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ  ಪ್ರಸ್ತಾಪಿಸಿದ್ದು, ಹೊಸ ಕೃಷಿ ಆಯೋಗ ರಚನೆಗೆ ನಿರ್ಧರಿಸಲಾಗಿದೆ.

ಸಾರ್ವಜನಿಕ ಆರೋಗ್ಯವನ್ನು ಒಂದು ಹಕ್ಕಾಗಿ ಪರಿವರ್ತಿಸಲಾಗುವುದೆಂದು ತಿಳಿಸಿದ್ದು, ಒಂದನೇ ತರಗತಿಯಿಂದ 12 ನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ಉಚಿತ ಕಡ್ಡಾಯ ಶಿಕ್ಷಣವನ್ನು ಕಾಂಗ್ರೆಸ್‌ ಪಕ್ಷ ಅಧಿ ಕಾರಕ್ಕೆ ಬಂದರೆ ನೀಡಲಿದೆ.
ಜಿಎಸ್‌ಟಿಯ ಎರಡನೆಯ ಆವೃತ್ತಿಯನ್ನು ಏಕರೂಪ ತೆರಿಗೆ ಪದ್ಧತಿ ಜಾರಿಗೊಳಿಸುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ತಿಳಿಸಿದೆ ಎಂದು
ನುಡಿದರು. ವನವಾಸಿಗಳನ್ನು ಒಕ್ಕಲೆಬ್ಬಿಸಿದಂತೆ ನೋಡಿಕೊಳ್ಳಲು ಈ ಹಿಂದಿರುವ ಕಾಯ್ದೆಯ ಯಥಾವತ್‌ ಜಾರಿಗೆ ನಿರ್ಧರಿಸಿದ್ದು, ವಸತಿ ರಹಿತರಿಗೆ ಮನೆ ಕಟ್ಟಿಕೊಡಲು ಜಾಗ ನೀಡುವುದು, ವಾಯುಮಾಲಿನ್ಯ ತಡೆಗಟ್ಟಲು ಹಾಗೂ ಪರಿಸರ ವನ್ಯಜೀವಿ ಸಂರಕ್ಷಣೆಗೆ ಒತ್ತು ನೀಡುವ ವಿಷಯ ಪ್ರಸ್ತಾಪಿಸಲಾಗಿದೆ ಎಂದರು.

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಜಿಎಸ್‌ಟಿ ಕೆಳಗೆ ತರುವುದು, ಉದ್ಯೋಗ ಖಾತ್ರಿ ಯೋಜನೆಯ 100 ದಿನದ ಕೆಲಸವನ್ನು 150ಕ್ಕೆ ಹೆಚ್ಚಿಸುವುದಲ್ಲದೇ ಈಗ ಕೇಂದ್ರ
ಸರ್ಕಾರವನ್ನು ಟೀಕಿಸಿದವರಿಗೆ, ಅದರ ವಿರುದ್ಧ ಮಾತನಾಡುವವರಿಗೆ ದೇಶದ್ರೋಹದ ಹಣೆಪಟ್ಟಿ ಕಟ್ಟುತ್ತಿದ್ದು, ಆ ಕಾನೂನನ್ನು ಕಿತ್ತು ಹಾಕುವುದಾಗಿ ತಿಳಿಸಲಾಗಿದೆ. ಸಿಬಿಐ, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಸೇರಿದಂತೆ ಸ್ವಾಯತ್ತ ಸಂಸ್ಥೆಗಳಿಗೆ
ಗೌರವ ಮತ್ತು ಕಾನೂನು ರಕ್ಷಣೆ ನೀಡುವ ಕುರಿತು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ ಎಂದು ನುಡಿದರು.

ರಾಜ್ಯದಲ್ಲಿ ಯುಪಿಎ ಸರ್ಕಾರದ ಕಾರ್ಯಕ್ರಮ, ಸಿದ್ದರಾಮಯ್ಯ
ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ ಅನ್ನಭಾಗ್ಯದಿಂದ ಆರೋಗ್ಯಭಾಗ್ಯದವರೆಗಿನ ಯೋಜನೆ, ಸಮ್ಮಿಶ್ರ ಸರ್ಕಾರದ ಸಾಲಮನ್ನಾ, ಬಡವರ ಬಂಧು ಕಾರ್ಯಕ್ರಮವನ್ನು ಜನರಿಗೆ
ತಿಳಿಸಲಾಗುವುದು ಎಂದರು.

ಎ.ಎನ್‌.ಮಹೇಶ್‌, ಶಿವಾನಂದಸ್ವಾಮಿ, ಅತಿಕ್‌ ಕೈಸರ್‌, ಶಿವಮೊಗ್ಗದ ಮಂಜುನಾಥ್‌ ಪೂಜಾರಿ, ಕ್ಷೇತ್ರ ಸಮಿತಿ ಅಧ್ಯಕ್ಷ ಹಂಪಾಪುರ ಮಂಜೇಗೌಡ ಇದ್ದರು.

ಟಾಪ್ ನ್ಯೂಸ್

S.Korea: Plane skids on runway and hits wall: Watch video here

S.Korea: ರನ್‌ ವೇಯಲ್ಲಿ ಸ್ಕಿಡ್‌ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrest-woman

Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

S.Korea: Plane skids on runway and hits wall: Watch video here

S.Korea: ರನ್‌ ವೇಯಲ್ಲಿ ಸ್ಕಿಡ್‌ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.