9 ವರ್ಷ ಹಿಂದೆ ಸ್ವಚ್ಛಗೊಳಿಸಿದ ನೀರಿನ ತೊಟ್ಟಿ

ತೊಟ್ಟಿಯಲ್ಲಿ ತೇಲುತ್ತಿರುವ ಸತ್ತ ಜಲಚರಗಳು „ ಅಧಿಕಾರಕ್ಕಾಗಿ ಜನಪ್ರತಿನಿಧಿಗಳ ಕಿತ್ತಾಟ, ಅಧಿಕಾರಿಗಳ ನಿರ್ಲಕ್ಷ್ಯ

Team Udayavani, Oct 10, 2019, 5:12 PM IST

10-October-21

ಎಚ್‌.ಬಿ.ಮಂಜುನಾಥ
ಕೆ.ಆರ್‌.ಪೇಟೆ: ಸರ್ಕಾರಗಳು ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಪರಿಸರ ಸ್ವಚ್ಛತೆ, ಶುದ್ಧ ನೀರಿಗಾಗಿ ಕೋಟ್ಯಂತರ ರೂಗಳು ವೆಚ್ಚ ಮಾಡುವ ಜತೆಗೆ ಜಾಗೃತಿ ಕಾರ್ಯಕ್ರಮಗಳಿಂದ ಮನವರಿಕೆ ಮಾಡಿಕೊಡುವ ಅಧಿಕಾರಿಗಳೇ ಪಟ್ಟಣಕ್ಕೆ ಕಲುಷಿತ ನೀರು ಸರಬರಾಜು ಮಾಡುತ್ತಿರುವುದು ವಿಪರ್ಯಾಸ.

ಸುಮಾರು 40 ಸಾವಿರ ಜನಸಂಖ್ಯೆ ಇರುವ ಪಟ್ಟಣದ ಜನತೆಗೆ ಪ್ರತಿದಿನ ಕನಿಷ್ಠ ಎರಡು ಲಕ್ಷ ಲೀಟರ್‌ ನೀರಿನ ಅಗತ್ಯವಿದೆ. ಪಟ್ಟಣಕ್ಕೆ ಹೇಮಾವತಿ ನದಿಯಿಂದ ನೀರು ಸರಬರಾಜಾಗುತ್ತಿದೆ. ಆದರೆ ಕುಡಿಯುವ ನೀರು ಶುದ್ಧೀಕರಿಸದೇ ನೇರವಾಗಿ ಸರಬರಾಜು ಮಾಡು ತ್ತಿರುವುದರಿಂದ ಪಟ್ಟಣ ನಾಗರೀಕರಿಗೆ ಗಂಟಲು ಕೆರೆತ, ಕೆಮ್ಮು, ನೆಗಡಿ, ಜ್ವರ ವಿವಿಧ ಕಾಯಿಲೆ ದಾಳಿ ಮಾಡುತ್ತಿವೆ. ಆದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕುಡಿಯುವ ನೀರಿನ ಶುದ್ಧೀಕರಣಕ್ಕೆ ಸ್ವಚ್ಛಗೊಳಿಸುವ ಬಗ್ಗೆ ಯೋಚನೆ ಹಾಗೂ ಯೋಜನೆ ರೂಪಿಸಲು ಮುಂದಾಗುತ್ತಿಲ್ಲ.

9 ವರ್ಷದಿಂದಲೂ ಸ್ವತ್ಛ ಮಾಡಿಲ್ಲ: ಕುಡಿಯುವ ನೀರು ಸರಬರಾಜು ಮಾಡುವ ಯಾವುದೇ ಪರಿಕರಗಳನ್ನು ಕನಿಷ್ಟ ಆರು ತಿಂಗಳಿಗೆ ಒಮ್ಮೆಯಾದರೂ ಸ್ವಚ್ಛ ಮಾಡಬೇಕು. ಆದರೆ ಕೆ.ಆರ್‌.ಪೇಟೆ ಪಟ್ಟಣಕ್ಕೆ ಕುಡಿಯುವ ನೀರನ್ನು ಶುದ್ಧಿಕರಣ ಮಾಡಲು ಸಾದಗೋನಹಳ್ಳಿ ಸಮೀಪ ನಿರ್ಮಾಣ ಮಾಡಿರುವ ನೀರು ಶುದ್ಧೀಕರಣ ಘಟನ ಕಳೆದ 9 ವರ್ಷಗಳಿಂದ ಸ್ವಚ್ಛತೆಯೇ ಕಂಡಿಲ್ಲ. ಸದರಿ ಘಟಕವನ್ನು ಸ್ವತ್ಛಗೊಳಿಸಿ ಅಲ್ಲಿರುವ ತೊಟ್ಟಿಗಳಿಗೆ ಬಿಳಿ ಬಣ್ಣ ಬಳಿಸಬೇಕು. ಆಗ ನೀರಿನ ಸ್ವಚ್ಛತೆ ತೊಟ್ಟಿಯಲ್ಲಿ ಸ್ವಷ್ಟವಾಗಿ ಕಾಣುತ್ತದೆ. ಆದರೆ ಇಲ್ಲಿರುವ ತೊಟ್ಟಿ ವರ್ಷಗಟ್ಟಲೆ ಕೊಳೆಯುತ್ತಿದ್ದು, ತೊಟ್ಟಿಯಲ್ಲಿ ಪಾಚಿ ಕಟ್ಟಿಕೊಂಡಿದೆ.

ತೊಟ್ಟಿಗೆ ಆಲಂ ಪೌಡರ್‌ ಬಳಸಲ್ಲ: ಹೇಮಾವತಿ ನದಿಯಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಾಗುತ್ತದೆ. ನೀರು ತುಂಬಿರುವ ಸಮಯದಲ್ಲಿ ಹೇಮಾವತಿ ನದಿ ಸ್ವಚ್ಛವಾಗಿರುತ್ತದೆ. ನದಿಯಲ್ಲಿ ನೀರು ಕಡಿಮೆ ಯಾದಂತೆ ನೀರೂ ಕಲುಷಿತವಾಗುತ್ತದೆ. ಆ ನೀರನ್ನು ಶುದ್ಧೀಕರಿಸದೇ ಕುಡಿದರೆ ಕೆಮ್ಮು ಜ್ವರ ಬರುವುದು ಖಚಿತ. ಹೀಗಿದ್ದರೂ ಪುರಸಭಾ ಅಧಿಕಾರಿಗಳು, ಮರಳು, ಜಲ್ಲಿ, ಬಳಸಿ ಸ್ವಚ್ಛ ಮಾಡುವ ಜೊತೆಗೆ ಆಲಂ ಪೌಡರ್‌ ಹಾಕಿ ನೀರನ್ನು ಸ್ವಚ್ಛ ಮಾಡುತ್ತಿಲ್ಲ. ನೀರಿಗೆ ಹಾಕಲು ತಂದಿರುವ ಆಲಂ ಪೀಸ್‌ಗಳು ಬಳಕೆಯಾಗದೇ ಅಲ್ಲಿಯೇ ಧೂಳು ತಿನ್ನುತ್ತಿವೆ. ತೊಟ್ಟಿಗೆ ಹಾಕಿರುವ ಮರಳು ಮತ್ತು ಜಲ್ಲಿ ಸಂಪೂರ್ಣ ಪಾಚಿಯಿಂದ ಮುಚ್ಚಿಹೋಗಿದ್ದು, ನೀರಿನೊಳಗೆ ತ್ಯಾಜ್ಯ ಸಸಿಗಳೂ ಬೆಳೆದುಕೊಂಡಿವೆ.

ಮೀನು ಸಮೇತ ಸಮೇತ ನೀರು ಪೂರೈಕೆ: ಪಟ್ಟಣದಲ್ಲಿ ಆರ್ಥಿವಾಗಿ ಸ್ಥಿತಿವಂತರು ತಮ್ಮ ಮನೆಗಳಲ್ಲಿಯೇ ನೀರು ಶುದ್ಧೀಕರಣ ಯಂತ್ರ ಅಳವಡಿಸಿಕೊಂಡಿದ್ದಾರೆ. ಮತ್ತೆ ಕೆಲವರು ಬಿಸಿಲರಿ ನೀರು ಕೊಂಡುಕೊಳ್ಳುವರು. ಬಡವರು ಮಾತ್ರ ಅವರ ಮನೆಯ ನಲ್ಲಿಗಳಲ್ಲಿ ಬರುವ ಕಲುಷಿತ ನೀರನ್ನೇ ಕುಡಿದು ಕೆಮ್ಮು ಮತ್ತು ಜ್ವರಕ್ಕೆ ತುತ್ತಾಗುತ್ತಿದ್ದಾರೆ. ಶುದ್ಧೀಕರಣ ಘಟಕದಲ್ಲಿ ಜಲಚರಗಳು ಸತ್ತು ನೀರಿನಲ್ಲಿ ತೇಲುತ್ತಿದ್ದರೂ, ಅವುಗಳನ್ನೂ ಸ್ವಚ್ಛ  ಮಾಡದೆ ಅದೇ ತೊಟ್ಟಿ ನೀರು ಪೂರೈಸಲಾಗುತ್ತಿದೆ. ಜೊತೆಗೆ ನಲ್ಲಿಯಲ್ಲಿ ಜೀವಂತ ಮೀನು ಬಂದಿರುವ ನಿದರ್ಶನಗಳಿವೆ.

ಟಾಪ್ ನ್ಯೂಸ್

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ

India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ

BPL-CARD

Food Department Operation: ಬಿಪಿಎಲ್‌ ಚೀಟಿದಾರರಿಗೆ ಎಪಿಎಲ್‌ ಕಾವು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Agri

State Government Programme: ರೈತರಿಂದ ದೂರ ಸರಿದ ಕೃಷಿ ಯಂತ್ರಧಾರೆ

Byndoor-Vahical

Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.