ಆರೋಗ್ಯ ಕೇಂದ್ರಕ್ಕೆ ನರ್ಸ್ ನಿಯೋಜಿಸಲು ಒತ್ತಾಯ
Team Udayavani, Nov 20, 2019, 5:04 PM IST
ಕೂಡ್ಲಿಗಿ: ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ 10-12 ವರ್ಷಗಳಿಂದಲೂ ಆರೋಗ್ಯ ಉಪಕೇಂದ್ರ ಕಟ್ಟಡವಿದ್ದರೂ ನರ್ಸ್ ವಾಸಿಸುತ್ತಿಲ್ಲ. ಹಾಗಾಗಿ ರೋಗ್ಯ ಉಪಕೇಂದ್ರ ಕಟ್ಟಡ ಇದ್ದೂ ಇಲ್ಲದಂತೆ ನಿರರ್ಥಕವಾಗಿದೆ. ಆರೋಗ್ಯ ಉಪಕೇಂದ್ರದಲ್ಲಿ ನರ್ಸ್ ಇರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು
ನೋಡಿಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
5 ಹಳ್ಳಿಗಳು ಬಣವಿಕಲ್ಲು ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಬರುತ್ತವೆ. 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ರಾಷ್ಟ್ರೀಯ ಹೆದ್ದಾರಿ 50 ಸಹ ಈ ಗ್ರಾಮದ ಮೂಲಕವೇ ಹಾದು ಹೋಗಿದೆ. ಅಲ್ಲದೇ ಈ ಗ್ರಾಮದಲ್ಲಿ 100ಕ್ಕೂ ಹೆಚ್ಚು ಬಾಲಕಿಯರಿರುವ ಕಸ್ತೂರಿಬಾ ವಸತಿ ಶಾಲೆ ಇದೆ. ರಾತ್ರಿ ಸಮಯದಲ್ಲಿ ಆರೋಗ್ಯ ಸಮಸ್ಯೆ ಬಂದರೆ ಪ್ರಥಮ ಚಿಕಿತ್ಸೆಗೆ ನರ್ಸ್ ಇಲ್ಲ ಎಂದರೆ ಹೇಗೆ? ಪ್ರಥಮ ಚಿಕಿತ್ಸೆಗೂ 15ರಿಂದ 20 ಕಿಮೀ ದೂರದ ಕೂಡ್ಲಿಗಿ ಮತ್ತು ಹೊಸಹಳ್ಳಿಗೆ ಹೋಗಬೇಕಾಗುತ್ತದೆ. ಹಾಗಾಗಿ ಆರೋಗ್ಯ ಉಪಕೇಂದ್ರದಲ್ಲಿ ನರ್ಸ್ ಇರುವಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ತರು ಆಗ್ರಹಿಸಿದರು.
ಬಣವಿಕಲ್ಲು ಗ್ರಾಮದಲ್ಲಿ 2 ಆರೋಗ್ಯ ಉಪಕೇಂದ್ರ ಕಟ್ಟಡಗಳಿದ್ದರೂ 4 ವರ್ಷಗಳಿಂದಲೂ ಒಬ್ಬ ನರ್ಸ್ ಇಲ್ಲ. ಆರೋಗ್ಯ ತೊಂದರೆಯಾದರೆ ಪ್ರಥಮಚಿಕಿತ್ಸೆಗೂ ಆರೋಗ್ಯ ಉಪಕೇಂದ್ರವಿದ್ದರೂ ಪ್ರಯೋಜನವಿಲ್ಲದಂತಾಗಿದೆ.
ಬಿ.ಚೌಡೇಶ, ಗ್ರಾಮದ ಯುವಕ
ಬಣವಿಕಲ್ಲು ಗ್ರಾಮದಲ್ಲಿ 2 ಆರೋಗ್ಯ ಉಪಕೇಂದ್ರಗಳಿವೆ. ಒಂದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದೆ. ಇನ್ನೊಂದು ಊರ ಹೊರವಲಯದಲ್ಲಿದೆ. ಯಾಸ್ಮಿàನ್ ಬಾನುರನ್ನು ಬಣವಿಕಲ್ಲು ಗ್ರಾಮಕ್ಕೆ ನರ್ಸ್ ಆಗಿ ನಿಯೋಜಿಸಲಾಗಿದೆ. ಕೆಲ ಕಾರಣ ನೀಡಿ ನರ್ಸ್ ಅಲ್ಲಿ ವಾಸ ಮಾಡುತ್ತಿಲ್ಲ. ಈಗ ಆದಷ್ಟು ಬೇಗನೇ ನರ್ಸ್ ಬಣವಿಕಲ್ಲು ಗ್ರಾಮದಲ್ಲಿ ಇರುವಂತೆ ಕ್ರಮ ಕೈಗೊಳ್ಳುತ್ತೇನೆ.
ಡಾ| ಷಣ್ಮುಖನಾಯ್ಕ,
ಕೂಡ್ಲಿಗಿ ತಾಲೂಕು ಆರೋಗ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.