ರಂಗಮಂದಿರ ಶಿಥಿಲ: ವಿದ್ಯಾರ್ಥಿಗಳ ಆತಂಕ
ಹಂದಿಗೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುರವಸ್ಥೆ
Team Udayavani, Aug 1, 2019, 1:33 PM IST
ಕುಮಟಾ: ಶಿಥಿಲಾವಸ್ಥೆಗೆ ಜಾರಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಂಗಮಂದಿರ.
ಕುಮಟಾ: ತಾಲೂಕಿನ ಹಂದಿಗೋಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಂಗಮಂದಿರವು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಇದರಿಂದ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೀವ್ರ ಆತಂಕಕ್ಕಿಡಾಗಿದ್ದಾರೆ.
ಶಾಲೆಯಲ್ಲಿ ಸುಮಾರು 60 ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಸುಸಜ್ಜಿತ ಶಾಲಾ ಕಟ್ಟಡಗಳು ಹಾಗೂ ಸುತ್ತಮುತ್ತಲಿನ ಪರಿಸರ ಮೊದಲಾದವುಗಳಿಂದ ವಿದ್ಯಾರ್ಥಿಗಳ ಗಮನ ಸೆಳೆಯುತ್ತಿದೆ. ಆದರೆ ಶಾಲಾ ಆವರಣದ ಮಧ್ಯಭಾಗದಲ್ಲಿರುವ ರಂಗಮಂದಿರುವ ಶಿಥಿಲಾವಸ್ಥೆಗೆ ಜಾರಿದ್ದು ಆತಂಕಕ್ಕೆ ಕಾರಣವಾಗಿದೆ. ಸುಮಾರು 25 ವರ್ಷಗಳ ಹಿಂದೆ ಪಜಾ ಅನುದಾನದಡಿ ಈ ರಂಗಮಂದಿರ ನಿರ್ಮಿಸಲಾಗಿತ್ತು. ಆದರೆ ಈಗ ರಂಗಮಂದಿರದ 6 ಕಂಬಗಳೂ ಸಹ ದುರ್ಬಲಗೊಂಡಿದ್ದು, ಸಿಮೆಂಟ್ ಪ್ಲಾಸ್ಟರ್ ಅಲ್ಲಲ್ಲಿ ಕಿತ್ತು ಬೀಳುತ್ತಿವೆ. ತೀವ್ರ ಆತಂಕದ ಸ್ಥಿತಿ ಎದುರಾಗಿರುವುದರಿಂದ ಮಕ್ಕಳ ಹಿತ ದೃಷ್ಟಿಯಿಂದ ರಂಗಮಂದಿರದಲ್ಲಿ ಮಾಡುತ್ತಿದ್ದ ಪ್ರಾರ್ಥನೆಯನ್ನು ಸ್ಥಳಾಂತರಿಸಲಾಗಿದೆ.
ರಂಗಮಂದಿರ ಸರಿಪಡಿಸಲು ಸಾಕಷ್ಟು ಹಣ ವ್ಯಯವಾಗುವುದರಿಂದ ಪಂಚಾಯತದಿಂದ ಅಷ್ಟು ಅನುದಾನ ಬಿಡುಗಡೆಗೊಳಿಸುವುದು ಕಷ್ಟಸಾಧ್ಯ. ಶಾಸಕರ ಇಲ್ಲವೇ ಸಂಸದರ ನಿಧಿಯಿಂದ ಅನುದಾನ ಬಿಡುಗಡೆಗೊಳಿಸುವ ಪ್ರಯತ್ನ ನಡೆಯಬೇಕಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಈ ದಿಶೆಯಲ್ಲಿ ಶಾಲಾ ಅಭಿವೃದ್ಧಿ ಸಮೀತಿಯವರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ.
ರಂಗಮಂದಿರದ ಎಲ್ಲ ಕಂಬಗಳು ದುರ್ಬಲವಾಗಿದ್ದು, ಕುಸಿಯುವ ಹಂತದಲ್ಲಿದೆ. ಮೊದಲು ಇದೇ ರಂಗಮಂದಿರದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡುತ್ತಿದ್ದು, ಮಕ್ಕಳ ಹಿತ ದೃಷ್ಟಿಯಿಂದ ಈಗ ಸ್ಥಳವನ್ನು ಬದಲಾಯಿಸಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನೂತನ ರಂಗಮಂದಿರ ನಿರ್ಮಿಸಿಬೇಕಾದ ಅನಿವಾರ್ಯತೆಯಿದೆ.
• ಉಷಾ ನಾಯಕ,
ಶಾಲಾ ಮುಖ್ಯಾಧ್ಯಾಪಕಿ
ಈ ಸಮಸ್ಯೆ ಕುರಿತು ಹಲವಾರು ಸಭೆಗಳಲ್ಲಿ ಚರ್ಚಿಸಲಾಗಿದೆ. ಕಟ್ಟಡಕ್ಕೆ ಅನುದಾನ ತರುವ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಸಮೀತಿ ವತಿಯಿಂದ ಸಾಕಷ್ಟು ಪ್ರಯತ್ನಗಳು ನಡೆದಿವೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗೆಗೆ ಗಮನಹರಿಸಬೇಕು.
• ಶ್ರೀಧರ ಪಟಗಾರ,
ಎಸ್‌ಡಿಎಮ್‌ಸಿ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.