ಪರಿಶೀಲನೆಗೆ ಬಂದವರಿಗೆ ಕಾರ್ಮಿಕರಿಂದ ಘೇರಾವ್
ಕಾರ್ಖಾನೆ ಕ್ಯಾಂಟೀನ್ ಊಟ ಸೇವಿಸಿ ಕಾರ್ಮಿಕರು ಅಸ್ವಸ್ಥಗೊಂಡ ಪ್ರಕರಣ • ಮಾತಿನ ಚಕಮಕಿ
Team Udayavani, Aug 8, 2019, 3:32 PM IST
ಕುಣಿಗಲ್: ಅಂಚೇಪಾಳ್ಯ ವಸಾಹತು ಪ್ರದೇಶದ ಇಂಡೋಸ್ಪ್ಯಾನಿಷ್ ಕಾರ್ಖಾನೆಯ ಕ್ಯಾಂಟೀನ್‌ನಲ್ಲಿ ಊಟ ಸೇವಿಸಿ 130 ಕಾರ್ಮಿಕರು ಅಸ್ವಸ್ಥಗೊಂಡ ಪ್ರಕರಣ ಹಿನ್ನೆಲೆಯಲ್ಲಿ ಪರಿಶೀಲನೆಗೆ ಬುಧವಾರ ಆಗಮಿಸಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಕಾರ್ಮಿಕರೇ ದಿಗ್ಬಂಧನ ವಿಧಿಸಿ ಗಲಾಟೆ ಮಾಡಿದ ಘಟನೆ ನಡೆಯಿತು.ಕಾರ್ಖಾನೆ ಕ್ಯಾಂಟೀನ್‌ನಲ್ಲಿ ಊಟ ಮಾಡಿದ 130ಕ್ಕೂ ಕಾರ್ಮಿಕರು ಅಸ್ವಸ್ಥ ಗೊಂಡು ವಿವಿಧ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಬುಧವಾರ ಪ್ರಕಟವಾದ ಪತ್ರಿಕಾ ವರದಿ ಹಿನ್ನೆಲೆಯಲ್ಲಿ ತಾಪಂ ಅಧ್ಯಕ್ಷ ಹರೀಶ್ ನಾಯ್ಕ, ಸದಸ್ಯ ಕೆಂಪೇಗೌಡ ಮತ್ತು ಡಿಎಚ್ಒ ಚಂದ್ರಿಕಾ, ಇಒ ಶಿವರಾಜಯ್ಯ ನೇತೃತ್ವದ ಅಧಿಕಾರಿಗಳ ತಂಡ ಕಾರ್ಖಾನೆಗೆ ಭೇಟಿ ನೀಡಿದ್ದು, ಇದರಿಂದ ಆಕ್ರೋಶಗೊಂಡ ಕಾರ್ಖಾನೆ ಆಡಳಿತ ಮಂಡಳಿ ಕಾರ್ಮಿಕರನ್ನು ಎತ್ತಿಕಟ್ಟಿ ಗಲಾಟೆ ಮಾಡಿಸಿ ಪರಿಶೀಲನೆಗೆ ಅವಕಾಶ ಕೊಡದೇ ತಪ್ಪು ಮುಚ್ಚಿಟ್ಟುಕೊಳ್ಳುವ ಹುನ್ನಾರ ಮಾಡಿದೆ.
ಕ್ಯಾಂಟೀನ್‌ಗೆ ಪರವಾನಗಿ ಇಲ್ಲ: ಅಧಿಕಾರಿಗಳ ಜತೆ ಆಗಮಿಸಿದ್ದ ಮುಖ್ಯಪೇದೆ ಗಲಾಟೆ ನಿಯಂತ್ರಿಸಲು ಆಗದೆ ಮೂಕ ಪೇಕ್ಷಕರಾಗಿದ್ದರು. ಗಲಾಟೆ ನಡು ವೆಯೂ ಕ್ಯಾಂಟೀನ್‌ನ ಅಡುಗೆ ಮನೆ ಪರಿಶೀಲಿಸಿ ಅಧಿಕಾರಿ ಮತ್ತು ಜನಪ್ರತಿನಿಧಿಗಳ ತಂಡ ಕ್ಯಾಂಟೀನ್ ನಡೆಸಲು ಪರವಾನಗಿ ಪಡೆದಿರುವ ಬಗ್ಗೆ ಪ್ರಶ್ನೆ ಮಾಡಿ ದಾಗ ‘ಏಳು ವರ್ಷದಿಂದ ಕ್ಯಾಂಟೀನ್ ನಡೆಸ ಲಾಗುತ್ತಿದೆ. ಯಾವುದೇ ಪರವಾನಗಿ ಪಡೆದಿಲ್ಲ ಎಂದು ಕಾರ್ಖಾನೆ ಅಡಳಿತ ಮಂಡಳಿ ತಪ್ಪು ಒಪ್ಪಿಕೊಂಡಿದೆ.
ಜಟಾಪಟಿ, ತಳ್ಳಾಟ: ಈ ಸಮಯಕ್ಕೆ ಆಗಮಿಸಿದ ನೂರಾರು ಮಹಿಳಾ ಕಾರ್ಮಿಕರು ಪ್ರಶ್ನೆ ಮಾಡುತ್ತಿದ್ದ ತಾಪಂ ಅಧ್ಯಕ್ಷ ಹರೀಶ್ ನಾಯ್ಕ ಹಾಗೂ ತಾಪಂ ಸದಸ್ಯ ಕೆಂಪೇಗೌಡ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇಲ್ಲಿ ಎಲ್ಲವೂ ಸರಿಯಾಗಿದೆ. ನಿಮ್ಮನ್ನ ಪರಿಶೀಲನೆ ಮಾಡಲು ಕರೆದಿರುವವರು ಯಾರು ಎಂದು ರೇಗಾಡಿ ದರು. ಈ ವೇಳೆ ಮಹಿಳಾ ಕಾರ್ಮಿಕರು ಹಾಗೂ ಪರಿ ಶೀಲನಾ ತಂಡದ ನಡುವೆ ಜಟಾಪಟಿ ನಡೆದು ತಳ್ಳಾ ಟವೂ ನಡೆಯಿತು. ನಂತರ ಮಾಧ್ಯಮದವರಮೇಲೂ ಗರಂ ಆದ ಕಾರ್ಮಿಕರು, ಇಲ್ಲಿಗೆ ಏಕೆ ಬಂದಿದ್ದೀರಾ? ವಿಡಿಯೋ ಮಾಡಬೇಡಿ, ಫೋಟೋ ತೆಗಿಬೇಡಿ. ಇಲ್ಲಿ ಏನೂ ಆಗಿಲ್ಲ ಎಂದು ವಾಗ್ವಾದ ನಡೆಸಿದರು. ಆಡಳಿತ ಮಂಡಳಿ ಕಾರ್ಮಿ ಕರನ್ನು ಸಮಾಧಾನ ಪಡಿಸಿತು. ಆಹಾರ ಸುರಕ್ಷಾ ಕ್ರಮ ಅನುಸರಿಸಿಲ್ಲ. ಜೊತೆಗೆ ಕ್ಯಾಂಟೀನ್ ನಡೆಸಲು ಯಾವುದೇ ಅನುಮತಿ ಪಡೆ ದಿಲ್ಲ. ಈ ಸಂಬಂಧ ಕಾರ್ಖಾನೆ ವಿರುದ್ಧ ವರದಿ ಸಲ್ಲಿಸ ಲಾಗುವುದೆಂದು ಡಿಎಚ್ಒ ಚಂದಿಕಾ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.