10 ದಿನದಲ್ಲಿ ಕುಣಿಗಲ್ ದೊಡ್ಡಕೆರೆಗೆ ನೀರು: ಶಾಸಕ
80 ಕಿ.ಮೀ. ಹೇಮೆ ನಾಲೆ ಮೇಲೆ ಸಂಚರಿಸಿ ದುರಸ್ತಿ ಪರಿಶೀಲನೆ •ಪೂರ್ಣ ಪ್ರಮಾಣದ ನೀರು ಪೂರೈಕೆ: ಭರವಸೆ
Team Udayavani, Aug 12, 2019, 3:56 PM IST
ಕುಣಿಗಲ್ ಪಟ್ಟಣದ ದೊಡ್ಡಕೆರೆಗೆ ಹರಿಯುವ ಹೇಮಾವತಿ ನೀರಿನ ನಾಲೆಯನ್ನು ಶಾಸಕ ಡಾ.ಎಚ್.ಡಿ.ರಂಗನಾಥ್ ಪರಿಶೀಲನೆ ನಡೆಸಿದರು.
ಕುಣಿಗಲ್: ಇಲ್ಲಿನ ದೊಡ್ಡಕೆರೆ ಸೇರಿದಂತೆ ತಾಲೂಕಿನ ಕೆರೆಕಟ್ಟೆ ತುಂಬಿಸುವ ನಿಟ್ಟಿನಲ್ಲಿ ಶಾಸಕ ಡಾ.ರಂಗನಾಥ್ ಅಧಿಕಾರಿಗಳೊಂದಿಗೆ ಸುಮಾರು 80 ಕಿ.ಮೀ ಹೇಮಾವತಿ ನಾಲೆ ಮೇಲೆ ಸಂಚರಿಸಿ ನಾಲೆ ದುರಸ್ತಿ ಕಾಮಗಾರಿ ಪರಿಶೀಲಿಸಿದರು.
ಎಲ್ಲೆಲ್ಲಿ ಪರಿಶೀಲನೆ?: ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದೆ, ಕೆರೆ ಕಟ್ಟೆಗಳು ಜಲಾಶಯದಲ್ಲಿ ನೀರಿಲ್ಲದೆ, ಜನ ಜಾನುವಾರುಗಳಿಗೆ ಕುಡಿಯುವ ನೀರು, ಕೃಷಿಗೆ ತೀವ್ರ ತೊಂದರೆ ಉಂಟಾಗಿದೆ. ಕಳೆದ ಐದು ಆರು ವರ್ಷಗಳಿಂದ ತಾಲೂಕು ಬರಗಾಲಕ್ಕೆ ತುತ್ತಾಗಿದೆ. ಈ ಬಾರಿ ತಾಲೂಕಿಗೆ ಹೇಮಾವತಿ ನೀರು ಹರಿಸಿ ಕೆರೆ ಕೆಟ್ಟೆ ಮತ್ತು ಜಲಾಶಯ ತುಂಬಿಸಲು ಅಧಿಕಾರಿಗಳೊಂದಿಗೆ ಹೆಬ್ಬೂರು, ತುಮಕೂರು, ನಿಟ್ಟೂರು, ಗುಬ್ಬಿ, ತುರುವೇಕೆರೆ ನಾಲೆ ಮೇಲೆ ಸಂಚರಿಸಿ ಮುಂಗಾರು ಪ್ರಾರಂಭದ ಹಂತದಲ್ಲೇ ಕುಣಿಗಲ್ ದೊಡ್ಡಕೆರೆಗೆ ನೀರು ಹರಿಸಲು ಮುಂದಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಂಗನಾಥ್, ಕಳೆದ 45 ವರ್ಷಗಳ ಹಿಂದೆ ಆಗಿದ್ದಂತಹ ಭಾರೀ ಮಳೆ ಈ ಬಾರಿ ಮಲೆನಾಡು ಪ್ರದೇಶದಲ್ಲಿ ಆಗಿದೆ. ಗೊರೂರು ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದು ತುಂಬಿದೆ. ಈ ಹಿನ್ನ್ನೆಲೆಯಲ್ಲಿ ಹೇಮಾವತಿ ನಾಲೆ ಮೂಲಕ ತುಮಕೂರು ಜಿಲ್ಲೆಗೆ ನೀರು ಹರಿದು ಬಿಡಲಾಗಿದೆ ಎಂದರು.
ಶೇ.10 ಕಾಮಗಾರಿ ಬಾಕಿ: 10.50 ಕೋಟಿ ರೂ. ವೆಚ್ಚದಲ್ಲಿ ನಾಲೆ ದುರಸ್ತಿ: ಈ ಹಿಂದಿನ ಸಮಿಶ್ರ ಸರ್ಕಾರದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು 160 ಕಿ.ಮೀ ನಾಲೆಯಲ್ಲಿ ಬೆಳೆದಿದ್ದ ಜಂಗಲ್ ಸ್ವಚ್ಛತೆ, ಹೂಳು ಎತ್ತಲು 10.50 ಕೋಟಿ ರೂ. ಹಣ ಬಿಡುಗಡೆ ಮಾಡಿದರು. ಈಗಾಗಲೇ ಕಾಮಗಾರಿ ಪ್ರಾರಂಭವಾಗಿ ಶೇ.90 ರಷ್ಟು ಕಾಮಗಾರಿ ಮುಗಿದಿದೆ. ಉಳಿದ ಕಾಮಗಾರಿಯನ್ನು ಎರಡು ದಿನದ ಒಳಗೆ ಮುಗಿಸುವಂತೆ ಹಾಗೂ ಎಲ್ಲಾ ಗೇಟ್‌ಗಳಿಗೆ ವೆಲ್ಡ್ ಮಾಡುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿರುವುದಾಗಿ ಹೇಳಿದರು.
ಕೆರೆಗೆ ತುಂಬಿಸಿ: ಕುಣಿಗಲ್ ಪಟ್ಟಣದ ದೊಡ್ಡಕೆರೆ 400 ಎಂಸಿಎಫ್‌ಟಿ ನೀರಿನ ಅಲೋಕೇಷನ್ ಇದ್ದು ಹೀಗಾಗಿ ಪೂರ್ಣ ಪ್ರಮಾಣ ದಲ್ಲಿ ನೀರು ಹರಿಸಿ ತುಂಬಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿರುವೆ. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕೆರೆ ತುಂಬಿಸು ವುದಾಗಿ ಭರವಸೆ ನೀಡಿದ್ದಾರೆಂದರು.
10 ದಿನದಲ್ಲಿ ಕೆರೆಗೆ ನೀರು: ಈಗಾಗಲೇ ಹೇಮಾವತಿ ನಾಲೆಯಿಂದ ನೀರು ಹರಿದು ಬಿಡಲಾಗಿದ್ದು, ತುಮಕೂರು ಬುಗಡನಹಳ್ಳಿ ಕೆರೆಗೆ ಹರಿದಿದೆ. ಇನ್ನು 10 ದಿನದ ಒಳಗೆ ಕುಣಿಗಲ್ ದೊಡ್ಡಕೆರೆಗೆ ಹರಿದು ಬರಲಿದೆ ಎಂದು ತಿಳಿಸಿದರು. ತಹಶೀಲ್ದಾರ್ ವಿ.ಆರ್.ವಿಶ್ವನಾಥ್, ಯಡಿಯೂರು ಹೇಮಾವತಿ ಇಇ ಮಂಜೇಶ್‌ಗೌಡ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.