ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಕ್ರಮಕ್ಕೆ ಸೂಚನೆ
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ತಾಪಂ ಅಧ್ಯಕ್ಷ ಹರೀಶ್‌ನಾಯ್ಕ ಸೂಚನೆ
Team Udayavani, Aug 8, 2019, 3:39 PM IST
ಕುಣಿಗಲ್ ತಾಲೂಕು ಕಸಬಾ ಹೋಬಳಿ ತರಿಕೆರೆ ಗ್ರಾಮದ ಬಾಲಜಿ ಕ್ರಷರ್‌ಗೆ ತಾಪಂ ಅಧ್ಯಕ್ಷ ಹರೀಶ್ ನಾಯ್ಕ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕುಣಿಗಲ್: ಪರಿಸರ ಮತ್ತು ನಾಗರಿಕರ ಆರೋಗ್ಯ ಹಾಗೂ ವನ್ಯ ಜೀವಿಗಳ ನಾಶಕ್ಕೆ ಕಾರಣವಾಗಿರುವ ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ತಾಪಂ ಅಧ್ಯಕ್ಷ ಹರೀಶ್‌ನಾಯ್ಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ನಿಯಮ ಉಲ್ಲಂಘನೆ: ಟಿ.ಹೊಸಹಳ್ಳಿ, ಡಿ.ಹೊಸ ಹಳ್ಳಿ, ಕೊಡವತ್ತಿ ಮತ್ತು ಸಂತೇಮಾವತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದೆ ಹಾಗೂ ನಿಯಮಾನುಸಾರ ಕ್ರಷರ್ ನಡೆಯುತ್ತಿಲ್ಲ. ಇದು ಪರಿಸರ ಮತ್ತು ನಾಗರಿಕರ ಆರೋಗ್ಯಕ್ಕೆ ಮಾರಕವಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಗುರುವಾರ ತಾಪಂ ಅಧ್ಯಕ್ಷ ಹರೀಶ್ ನಾಯ್ಕ ಹಾಗೂ ಇಒ ಶಿವರಾಜಯ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ಸಂದೀಪ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಉಪ ನಿರ್ದೇಶಕ ರಮೇಶ್ ಜೊತೆಗೆ ತಾಲೂಕಿನ ತರಿಕೆರೆ ಬಾಲಾಜಿ ಕ್ರಷರ್ ಸೇರಿ ಹಲವು ಗಣಿಗಾರಿಕೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ವ್ಯವಸ್ಥಾಪಕರಿಗೆ ತರಾಟೆ: ಗಣಿಗಾರಿಕೆಗೆ ಸಂಬಂಧಿಸಿ ದಾಖಲೆ ನೀಡುವಂತೆ ಬಾಲಾಜಿ ಕ್ರಷರ್ ವ್ಯವಸ್ಥಾಪಕರಿಗೆ ಹರೀಶ್ ನಾಯ್ಕ ಕೇಳಿದರು. ದಾಖಲೆಗಳು ಇಲ್ಲ, ಬೇರೊಬ್ಬರಲ್ಲಿದೆ ಎಂದು ತಿಳಿಸಿ ದರು. ಇದರಿಂದ ಕೆಂಡಾಮಂಡಲರಾದ ಹರೀಶ್ ನಾಯ್ಕ, ಇಲ್ಲಿ ನೀನು ಯಾವ ಹುದ್ದೆಯಲ್ಲಿ ಇದ್ದೀಯಾ? ಗಣಿಗಾರಿಕೆ ನಡೆಸಲು ಅಗತ್ಯ ದಾಖಲೆ ಇಟ್ಟುಕೊಳ್ಳಬೇಕು. ಇಲ್ಲ ಅಂದರೆ ಅರ್ಥವೇನು ಎಂದು ತರಾಟೆ ತೆಗೆದುಕೊಂಡರು. ಈ ವೇಳೆ ಪ್ರತಿ ಕ್ರಿಯಿಸಿದ ಭೂ ವಿಜ್ಞಾನ ಇಲಾಖೆಯ ಸಂದೀಪ್, ವಾರದ ಒಳಗಾಗಿ ಎಲ್ಲಾ ದಾಖಲೆ ಪಡೆಯ ಲಾಗುವುದು ಎಂದರು.
ಕಾನೂನಿಗೆ ವಿರುದ್ಧ: ಕಲ್ಲು ಗಣಿಗಾರಿಕೆಯಿಂದ ಪರಿಸರ ಮೇಲೆ ಹಾಗುವ ಹಾನಿ ತಡೆಗೆ ಏನು ಕ್ರಮ ಕೈಗೊಂಡಿದ್ದೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಹರೀಶ್‌ನಾಯ್ಕ, ತಾಲೂಕಿನಲ್ಲಿ ನಡೆಯುತ್ತಿರುವ ಬಹುತೇಕ ಗಣಿಗಾರಿಕೆಗಳು ಕಾನೂನಿಗೆ ವಿರುದ್ಧ ವಾಗಿ ನಡೆಸಲಾಗುತ್ತಿದೆ. ಅಕ್ಕಪಕ್ಕ ಗ್ರಾಮಗಳಲ್ಲಿ ಭೂಮಿ ಕಂಪಿಸಿ ಮನೆಗಳು ಬಿರುಕು ಬಿಟ್ಟಿವೆ. ಗರ್ಭಿ ಣಿಯರು ಮನೆಯಲ್ಲಿ ವಾಸಿಸದ ಪರಿಸ್ಥಿತಿ ನಿರ್ಮಾ ಣವಾಗಿದೆ. ಲಾರಿಗಳಲ್ಲಿ ನಿಗದಿಗಿಂತ ಹೆಚ್ಚು ಪ್ರಮಾ ಣದಲ್ಲಿ ಜಲ್ಲಿ ಸಾಗಿಸಲಾಗುತ್ತಿದೆ. ಇದರಿಂದ ರಸ್ತೆಗಳು ಹಾಳಾಗುತ್ತಿವೆ. ಲಾರಿ ಮೇಲೆ ಟಾರ್ಪಲ್ ಹಾಕದ ಕಾರಣ ಧೂಳಿನ ಸಮಸ್ಯೆ ಸೃಷ್ಟಿಯಾಗಿದೆ. ದಾಖಲೆ ಇಲ್ಲದೆ ಹಾಗೂ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಕ್ರಷರ್ ಮುಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾಪಂ ಸದಸ್ಯ ಕೆಂಪೇಗೌಡ, ಪಿಡಿಒ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Udupi: ಟವರ್ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್ ದಾವೆ: ಸಂಸದ ಕೋಟ
Mangaluru: ಅಡಿಕೆ ಕ್ಯಾನ್ಸರ್ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.