ಚಾನಳ್ ಗ್ರಾಮದ ಗೋಳ್!
ಅನುದಾನವಿದ್ದರೂ ಮೂಲ ಸೌಕರ್ಯ ಒದಗಿಸುವಲ್ಲಿ ಗ್ರಾಪಂ ನಿರ್ಲಕ್ಷ್ಯ
Team Udayavani, Sep 8, 2019, 1:21 PM IST
ಕುರುಗೋಡು: ಗ್ರಾಮದ ಮುಖ್ಯ ರಸ್ತೆಯ ಚರಂಡಿ ಸ್ವಚ್ಛತೆ ಇಲ್ಲದಿರುವುದು.
•ಸುಧಾಕರ್ ಮಣ್ಣೂರು
ಕುರುಗೋಡು: ಮೂಲ ಸೌಕರ್ಯದ ಕೊರತೆ, ದುರಸ್ತಿಯಾಗದ ಚರಂಡಿ-ರಸ್ತೆ, ಸಿಗದ ಕಾಮಕಾರಿಗಳ ಭಾಗ್ಯ ಇದು ಚಾನಳ್ ಗ್ರಾಮದ ದುಸ್ಥಿತಿ.
ಹೌದು. 3500 ಜನಸಂಖ್ಯೆ ಒಳಗೊಂಡ ಗ್ರಾಮ. 1500ಕ್ಕೂ ಹೆಚ್ಚು ಕುಟುಂಬಗಳ ವಾಸ. 11 ಗ್ರಾಪಂ ಸದಸ್ಯರಿದ್ದರೂ ಬರುವ ಅನುದಾನದಿಂದ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ.
ಗ್ರಾಮದ ದಲಿತ ಕಾಲೋನಿಯ ಮುಖ್ಯ ರಸ್ತೆ ಬದಿಯಲ್ಲಿ ಪೈಪ್‌ಲೈನ್ ಸೋರಿಕೆಯಿಂದ ರಸ್ತೆಯಲ್ಲೆಲ್ಲ ನೀರ ನಿಂತು ಸೊಳ್ಳೆಗಳ ಆವಾಸಸ್ಥಾನವಾಗಿದೆ. ಗ್ರಾಮದ ಹಲವು ವಾರ್ಡ್‌ಗಳ ಚರಂಡಿಗಳು ಹೂಳಿನಿಂದ ತುಂಬಿ ಹೋಗಿದೆ. ಚರಂಡಿ ಪಕ್ಕದಲ್ಲಿ ಒಡಾಡುವ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಒಡಾಡಬೇಗಿದೆ. ಅದರಲ್ಲಿ ಇನ್ನೂ ಮಳೆ ಬಂದರೆ ಚರಂಡಿಯಿಂದ ಬರುವ ನೀರು ಮುಂದುಗಡೆ ಸಾಗದೆ ಅಲ್ಲೇ ಸಂಗ್ರಹಗೊಂಡು ರಸ್ತೆಯ ಮೇಲೆ ನೀರು ಹರಿದು ಬರುತ್ತವೆ. ಇನ್ನೂ ಹಲವು ಸಾರ್ವಜನಿಕರ ಮನೆಗಳ ಅಕ್ಕಪಕ್ಕದ ವಾರ್ಡಿನ ಚರಂಡಿಗಳು ಸರಿಯಾಗಿ ಸ್ವಚ್ಛತೆ ಕಾಣದೆ ಎಲ್ಲಂದರಲ್ಲಿ ಕಟ್ಟಿ ನಿತ್ಯ ಗಬ್ಬುನಾರುತ್ತಿದ್ದು ಇದರಿಂದ ಜೀವನ ಸಾಗಿಸುವುದು ಕಷ್ಟಕರವಾಗಿದೆ.
ಕುಡಿಯುವ ನೀರಿಗೆ ಹಾಹಾಕಾರ: ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ 1 ಇದ್ದು ಅದಕ್ಕೆ ಫಿಲ್ಟರ್ ವ್ಯವಸ್ಥೆ ಇಲ್ಲದಾಗಿದೆ. ಕೆರೆಯಿಂದ ಅಥವಾ ಟ್ಯಾಂಕರ್‌ಗಳಿಂದ ಘಟಕಕ್ಕೆ ಬರುವ ನೀರು ಫಿಲ್ಟರ್ ಆಗದೆ ನೇರವಾಗಿ ಸಾರ್ವಜನಿಕರ ನಲ್ಲಿಗಳಿಗೆ ಸರಬರಾಜು ಅಗುತ್ತಿವೆ. ಸಾರ್ವಜನಿಕರು ನಿತ್ಯ ಅದೇ ನೀರನ್ನು ಸೆವಿಸುತ್ತಿದ್ದು, ನೀರಲ್ಲಿ ಕ್ರಿಮಿಕೀಟಗಳು ಮತ್ತು ವಿಷಜಂತುಗಳು ಬರುವ ಸಾಧ್ಯತೆ ಇದ್ದು ಅದರ ಜತೆಗೆ ಜನರ ಆರೋಗ್ಯಕ್ಕೆ ಸುರಕ್ಷಿತವಿಲ್ಲದಂತಾಗಿದೆ. ಸುಮಾರು ದಿನಗಳಿಂದ ಕೆಟ್ಟು ಹೋದ ಘಟಕದ ಫಿಲ್ಟರ್ ದುರಸ್ತಿಗೊಳಿಸಲು ಗ್ರಾಪಂ ಇಲಾಖೆ ಹಿಂದೇಟು ಹಾಕುತ್ತಿದೆ.
ಗ್ರಾಮದ ದಲಿತ ಕಾಲೋನಿಯ ಮುಖ್ಯ ರಸ್ತೆಯಲ್ಲಿ ಪೈಪ್‌ಲೈ ಒಡೆದು ನೀರು ಸೋರಿಕೆ ಅಗುತ್ತಿದೆ. ಅದಲ್ಲದೆ ಹಲವು ಚರಂಡಿಗಳು ಹೂಳಿನಿಂದ ತುಂಬಿದ್ದು. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಇದರ ಬಗ್ಗೆ ಅಧಿಕಾರಿಗಳು ಗಮನಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
•ವೀರಾರೆಡ್ಡಿ,
ಗ್ರಾಪಂ ಸದಸ್ಯ ಚಾನಳ್ ಗ್ರಾಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.