ಗುಡಿಸಲು ತೆರವಿಗೆ ನಿವಾಸಿಗಳ ವಿರೋಧ
ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸುವವರೆಗೆ ಹೋರಾಟ ನಿಲ್ಲದು
Team Udayavani, Apr 14, 2019, 11:46 AM IST
ಕುರುಗೋಡು: ಲಕ್ಷ್ಮೀ ಪುರ ಗ್ರಾಮದ ಎಚ್‌ಎಲ್‌ಸಿ ಸೂಗೂರು ಮುಖ್ಯ ಕಾಲುವೆ ಬಳಿ ವಾಸಿಸುವ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಕುರುಗೋಡು: ನೀರಾವರಿ ಇಲಾಖೆ ಅಧಿಕಾರಿಗಳು ಗುಡಿಸಲುಗಳನ್ನು ತೆರವುಗೊಳಿಸುವುದನ್ನು ವಿರೋಧಿಸಿ ಪಟ್ಟಣ ಸಮೀಪದ ಲಕ್ಷ್ಮೀಪುರ ಗ್ರಾಮದ ಎಚ್‌ಎಲ್‌ಸಿ ಸೂಗೂರು ಮುಖ್ಯ ಕಾಲುವೆ ಬಳಿ ವಾಸಿಸುವ ನಿವಾಸಿಗಳು ಪ್ರತಿಭಟನೆ ನಡೆಸಿದರು.
ನೀರಾವರಿ ಇಲಾಖೆ ಅಧಿಕಾರಿಗಳು ಏಕಾಏಕಿ ಗುಡಿಸಲುಗಳನ್ನು ತೆರವುಗೊಳ್ಳಿಸಲು ಎಚ್ಚರಿಕೆ ನೀಡಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯೆಸ್ಥಿಕೆ
ವಹಿಸಿ ನಮಗೆ ಸೂರು ಕಲ್ಪಿಸಬೇಕು. ಇಲ್ಲದಿದ್ದರೆ ಏ.23ರಂದು ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿವಾಸಿ ಗೀತಾ, ನೀರಾವರಿ ಇಲಾಖೆ ಕಚೇರಿ
ಅಭಿಯಂತರರು ಲಕ್ಷ್ಮೀ ಪುರ ಗ್ರಾಮದ ಎಚ್‌ಎಲ್‌ಸಿ ಮುಖ್ಯ ಕಾಲುವೆ ಬಳಿಯಲ್ಲಿ ಸುಮಾರು 30 ಕುಟುಂಬಗಳು ಗುಡಿಸಲುಗಳನ್ನು ಹಾಕಿಕೊಂಡು 15 ರಿಂದ 20 ವರ್ಷಗಳಿಂದ ವಾಸ ಮಾಡುತ್ತಿದ್ದೇವೆ. ಈಗ ಏಕಾಏಕಿ
ಗುಡಿಸಲುಗಳನ್ನು ತೆರವುಗೊಳಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಅಥವಾ ತಹಶೀಲ್ದಾರ್
ನಮಗೆ ಸೂಕ್ತ ನಿವೇಶನ ಒದಗಿಸಬೇಕು. ಇಲ್ಲದಿದ್ದರೆ ಏ.23 ರಂದು ನಡೆಯುವ
ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.
ಸುಮಾರು 20 ವರ್ಷಗಳಿಂದ ಇಲ್ಲಿ ವಾಸಿಸುವ ಮೂಲಕ ಬದುಕು ಕಟ್ಟಿಕೊಂಡಿದ್ದೇವೆ. ಏಕಾಏಕಿ ಈ ಸ್ಥಳವನ್ನು ತೆರವುಗೊಳಿಸಿದರೆ ನಾವು ಎಲ್ಲಿ ಹೋಗಿ ಜೀವನ ನಡೆಸಬೇಕು. ಹೀಗಾಗಿ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಬೇರೆ ಕಡೆ ನಮಗೆ ನಿವೇಶನ ಒದಗಿಸಿ ಸೂರು ನಿರ್ಮಿಸಿಕೊಳ್ಳಲು ಆರ್ಥಿಕ ಸಹಾಯ ಮಾಡಬೇಕೆಂದು ಒತ್ತಾಯಿಸಿದರು. ನಿವಾಸಿ ಹುಲಿಗಮ್ಮ ಮಾತನಾಡಿ, ಕಾಲುವೆ ಬಳಿಯಲ್ಲಿ ಸುಮಾರು ವರ್ಷಗಳಿಂದ ಗಾಳಿ, ಮಳೆ, ಲೆಕ್ಕಿಸದೆ ಜೀವನ ಸಾಗಿಸುತ್ತಿದ್ದೇವೆ. ನಮ್ಮ ಯಾಜಮಾನ್ರು ಮದ್ಯ ವ್ಯಸನಿಗಳು. ಆದರೂ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಚಿಕ್ಕ ಗುಡಿಸಲಿನಲ್ಲಿ ಚಿಕ್ಕ ಸಂಸಾರ ಸಾಗಿಸಿಕೊಂಡು ಹೊಗುತ್ತಿದ್ದೇವೆ.ಆದರೆ ಮೂರು ದಿನಗಳಿಂದ ನೀರಾವರಿ ಇಲಾಖೆ ಅಭಿಯಂತರರು ಗುಡಿಸಲುಗಳನ್ನು ತೆರವುಗೊಳಿಸುವಂತೆ ನಮಗೆ ತುಂಬ ಕಷ್ಟ ಕೊಡುತ್ತಿದ್ದಾರೆ. ಒಂದು ವೇಳೆ ನಮ್ಮ ಗುಡಿಸಲುಗಳನ್ನು ತೆರವುಗೊಳಿಸಿದರೆ ನಾವು ಬೀದಿಗೆ ಬರಬೇಕಾಗುತ್ತದೆ. ಆದ್ದರಿಂದ ನಮಗೆ ಬೇರೆ ಕಡೆ ಜಾಗ ಕಲ್ಪಿಸುವವರೆಗೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ನಾವು ಹೋರಾಟ ಆರಂಭಿಸಿ ಮೂರು ದಿನ ಕಳೆದರೂ ಜಿಲ್ಲಾಧಿಕಾರಿಗಳು ಆಗಮಿಸಿ ನಮ್ಮ ಸಮಸ್ಯೆಗಳನ್ನು ಆಲಿಸಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗಂಭೀರವಾಗಿ ತೆಗೆದುಕೊಳ್ಳಲು ಮುಂದಾಗದಿದ್ದರೆ, ವಿವಿಧ ಪ್ರಗತಿಪರ ಸಂಘಟನೆಗಳು ಸಹಕಾರದೊಂದಿಗೆ ಜಿಲ್ಲಾದ್ಯಂತ ಹೋರಾಟ ನಡೆಸಲು ನಿರ್ಧಾರ ಮಾಡಬೇಕಾಗುತ್ತದೆ. ಜತೆಗೆ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದರು.ಈ ಸಂದರ್ಭದಲ್ಲಿ ಹಿಮಾ, ಬಿಂದು, ಎಂ. ಹನುಮಂತಮ್ಮ, ಪಾರ್ವತಿ, ರೇವತಿ, ಹಂಪಮ್ಮ, ಚಂದ್ರಕಲಾ, ರೇಣುಕಾ, ತಿಪ್ಪಮ್ಮ, ನಿಂಗಮ್ಮ, ನಿಲಮ್ಮ ಹಾಗೂ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.