ಕುಡತಿನಿಯಲ್ಲಿ ನೀರಿಗಾಗಿ ಜನರ ಪರದಾಟ
ಶುದ್ಧ ನೀರಿನ ಘಟಕ ನಿರ್ವಹಣೆಗೆ ಕರೆದಿಲ್ಲ ಟೆಂಡರ್ •ನೀರು ತರಲು ಪೋಷಕರಿಗೆ ಮಕ್ಕಳಿಂದ ಸಹಾಯ
Team Udayavani, May 20, 2019, 1:22 PM IST
ಕುರುಗೋಡು: ಕುಡತಿನಿ ಶುದ್ಧ ಕುಡಿಯುವ ನೀರಿನ ಘಟಕದ ಎದುರು ಕೊಡಗಳ ರಾಶಿ.
ಕುರುಗೋಡು: ಕುಡತಿನಿ ಪಟ್ಟಣದಲ್ಲಿ ಸಮರ್ಪಕವಾಗಿ ನೀರು ದೊರಕದೆ ಜನರು ಹೈರಾಣಾಗಿದ್ದಾರೆ. ನಿತ್ಯ ಖಾಸಗಿ ಶುದ್ಧ ಘಟಕಗಳಿಗೆ ತೆರಳಿ ಹಣ ಕೊಟ್ಟು ನೀರು ಖರೀದಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಕುಡತಿನಿ ಪಟ್ಟಣದಲ್ಲಿ 6 ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದು. ಅವುಗಳಲ್ಲಿ ಕೆಲವೊಂದು ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಪಟ್ಟಣದ ಸಾರ್ವಜನಿಕರೆಲ್ಲ ದ್ಯಾವಮ್ಮ ಮತ್ತು ದುರುಗಮ್ಮ ದೇವಸ್ಥಾನದ ಪಕ್ಕದಲ್ಲಿರುವ ಘಟಕಕ್ಕೆ ಸೈಕಲ್ ಬಂಡಿ ಹಾಗೂ ಬೈಕ್ ಇತರೆ ವಾಹನಗಳ ಮೂಲಕ ತೆರಳಿ ಗಂಟೆಗಟ್ಟಲೇ ಕಾಯ್ದು ನೀರು ಹಿಡಿಯಬೇಕಾಗಿದೆ. ಒಂದು ವೇಳೆ ಪಟ್ಟಣದಲ್ಲಿರುವ ಘಟಕಗಳು ಕೈ ಕೊಟ್ಟರೆ ಅಕ್ಕಪಕ್ಕದ ರೈತರ ಪಂಪ್‌ಸೆಂಟ್‌ಗಳಿಗೆ ತೆರಳಿ ನೀರು ತರಬೇಕಾಗಿದೆ. ಸದ್ಯ ಬರಗಾಲ ಪರಿಸ್ಥಿತಿ ಇದ್ದು ಮಹಿಳೆಯರು ಕೂಲಿ ಕೆಲಸ ತ್ಯಜಿಸಿ ನೀರು ಸಂಗ್ರಹಿಸಬೇಕಾಗಿದೆ. ವಿದ್ಯಾರ್ಥಿಗಳು ಕೂಡ ಟ್ಯೂಷನ್ ಹಾಗೂ ಬೇಸಿಗೆ ಶಿಬಿರಗಳಿಗೆ ಹೋಗದೆ ತಂದೆ-ತಾಯಿಗಳ ಜತೆಗೆ ನೀರು ಹಿಡಿಯಬೇಕಾದ ಅನಿವಾರ್ಯತೆ ಉಂಟಾಗಿದೆ.
ಪಟ್ಟಣದಲ್ಲಿ ಕೆರೆ ಇದ್ದು ಇಲ್ಲದಂತಾಗಿದೆ. ಅದರಲ್ಲಿರುವ ನೀರಿಗೆ ಧೂಳು ಹಾಗೂ ಸುತ್ತಮುತ್ತ ಇರುವ ಕಾರ್ಖಾನೆಗಳ ಗಲೀಜು ಸೇರುವುದು ಒಂದೆಡೆಯಾದರೆ ಇನ್ನೊಂದು ಕಡೆಗೆ ಕೆರೆ ನೀರು ಪಾಚುಗಟ್ಟಿದೆ. ಇಂತಹ ನೀರನ್ನು ಜನರು ಸೇವಿಸಿ ಹಲವು ರೋಗಕ್ಕೆ ಒಳಗಾಗುವ ಭೀತಿ ಉಂಟಾಗಿದೆ. ಈ ಹಿಂದೆ ಪಟ್ಟಣದ ಹಲವು ಜನರು ಕೆರೆ ನೀರು ಸೇವಿಸಿ ಮೈಮೇಲೆ ನೀರಿನ ಗುಳ್ಳೆ ಬಂದು ಅಸ್ವಸ್ಥಗೊಂಡಿದ್ದರು. ಇದಾದ ನಂತರ ಸಂಸದ ವಿ.ಎಸ್.ಉಗ್ರಪ್ಪ ಕೆರೆಗೆ ಭೇಟಿ ನೀಡಿ ಕೆರೆಗೆ ಸೂಕ್ತ ಭದ್ರತೆ ಒದಗಿಸಿ ಜನರಿಗೆ ನೀರು ಕಲ್ಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸದ್ದರೂ ಇನ್ನೂ ಜನರಿಗೆ ನೀರು ಒದಗಿಸಲು ಮುಂದಾಗಿಲ್ಲ.
ಪಟ್ಟಣದಲ್ಲಿ 5 ರಿಂದ 6 ಶುದ್ಧ ಕುಡಿಯುವ ನೀರಿನ ಘಟಕಗಗಳು ಇದ್ದು, ಅವುಗಳನ್ನು ಪಪಂ ಮಾತ್ರ ಖಾಸಗಿ ವ್ಯಕ್ತಿಗಳಿಗೆ ಟೆಂಡರ್ ನೀಡದೆ ಹಾಗೂ ಅವುಗಳ ಬಗ್ಗೆ ಗಮನಹರಿಸದೆ ಸಿಕ್ಕವರ ಪಾಲಿಗೆ ಬಿಟ್ಟಿದೆ. ಆದ್ದರಿಂದ ಘಟಕಗಳಿಗೆ ಕಂಡ ಕಂಡವರು ಬಂದು ಕಾರ್ಯನಿರ್ವಹಿಸುತ್ತಿದ್ದು, ಅವರು ಜನರಿಗೆ ಸರಿಯಾಗಿ ನೀರು ಒದಗಿಸುತ್ತಿಲ್ಲ.
ಪಟ್ಟಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಪಪಂ ವ್ಯಾಪ್ತಿಯ ಸಮಯ ಮೀರಿದ ನಂತರ ಸೂಕ್ತ ಖಾಸಗಿ ವ್ಯಕ್ತಿಗಳಿಗೆ ಟೆಂಡರ್ ವಹಿಸಿ ನಿತ್ಯ ಜನರಿಗೆ ನೀರಿನ ತೊಂದರೆ ಅಗದಂತೆ ನೋಡಿಕೊಳ್ಳಬೇಕೆಂದು ನಾನಾ ಬಾರಿ ಪಪಂ ಅಧಿಕಾರಿಗಳಿಗೆ ಪಟ್ಟಣದ ಮುಖಂಡರು ಮನವಿ ಸಲ್ಲಿಸಿದರೂ ಅದಕ್ಕೆ ಸ್ಪಂದನೆ ದೊರಕದೆ ಅದರ ಬಗ್ಗೆ ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರ ಸಮಸ್ಯೆಯಿಂದ ನಿತ್ಯ ಜನರು ಪರಿತಪ್ಪಿಸುತ್ತಿದ್ದಾರೆ.
ಕುಡತಿನಿ ಪಟ್ಟಣದಲ್ಲಿರುವ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೂಡಲೇ ಪಪಂ ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಬೇಕು. ಸರಕಾರ ನಿಗದಿಪಡಿಸಿರುವ ಹಣಕ್ಕಿಂತ ಹೆಚ್ಚಿನ ಹಣ ವಸೂಲಾತಿ ಮಾಡುವುದನ್ನು ನಿಲ್ಲಿಸಬೇಕು. ಕೂಡಲೇ ಟೆಂಡರ್ ಕರೆದು ಸಮರ್ಪಕ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಕೊಡಬೇಕು.
•ಟಿ.ಕೆ.ಕಾಮೇಶ,
ವಕೀಲರು, ಕುಡತಿನಿ.
ನೀರು ಶುದ್ಧೀಕರಣ ಘಟಕಕ್ಕೆ ಪಪಂನಿಂದ ಟೆಂಡರ್ ಆಗಿದೆಯೋ ಇಲ್ಲ ಗೊತ್ತಿಲ್ಲ. ನಾನು ಪಪಂಗೆ ಹೊಸಬ ನಾನು ಚುನಾವಣೆ ನಿಮಿತ್ತ ಬಂದಿದ್ದೇನೆ. ಎರಡು, ಮೂರು ದಿನಗಳ ಹಿಂದೆ ಒಂದು ಸಮಸ್ಯೆ ಅಗಿತ್ತು. ಸಮಸ್ಯೆಗಳು ಅಗದಂತೆ ನಿಗಾವಹಿಸಿ ಜನರಿಗೆ ನೀರು ಕೊಡುವ ಕಾರ್ಯ ಮಾಡುತ್ತೇವೆ.
•ಅರುಣ್ ನಾಯ್ಕ,
ಪಪಂ ಮುಖ್ಯಾಧಿಕಾರಿ ಕುಡತಿನಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.