ಮುಂಗಾರು ನಿರಾಶೆ; ಅನ್ನದಾತ ಹತಾಶೆ
ಭೂಮಿ ಹದಗೊಳಿಸಿ ಮಳೆ ನಿರೀಕ್ಷೆಯಲ್ಲಿ ರೈತ•ನೀರಿಲ್ಲದೆ ಬಿರುಕು ಬಿಟ್ಟ ಭತ್ತದ ಸಸಿಮಡಿ
Team Udayavani, Jul 8, 2019, 11:42 AM IST
ಕುರುಗೋಡು: ನದಿಯಲ್ಲಿ ನೀರು ಇಲ್ಲದೆ ಖಾಲಿಯಾಗಿರುವುದು.
•ಸುಧಾಕರ್ ಮಣ್ಣೂರು
ಕುರುಗೋಡು: ಹಿಂಗಾರು ಮಳೆಯಿಲ್ಲದೆ ಬಿತ್ತನೆಯಿಂದ ದೂರ ಉಳಿದಿದ್ದ ರೈತನಿಗೆ ಮುಂಗಾರು ಮತ್ತೂಮ್ಮೆ ನಿರಾಶೆ ಮೂಡಿಸಿ ಚಿಂತೆಗೀಡುಮಾಡಿದೆ.
ಈಗಾಗಲೇ ಪಟ್ಟಣದ ಸುತ್ತಮುತ್ತ ಗ್ರಾಮಗಳಲ್ಲಿ ಉತ್ತಮ ಮಳೆ ಕಾಣದ ರೈತರು ದೇವರುಗಳಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ಇತರೆ ಧಾರ್ಮಿಕ ಪೂಜೆ ಮಾಡುತ್ತಾ ಭಗವಂತನಲ್ಲಿ ಪ್ರಾರ್ಥಿಸುವ ಸನ್ನಿವೇಶ ನಿರ್ಮಾಣವಾಗಿದೆ.
ಕಳೆದ ವರ್ಷ ಬರ ಅವರಿಸಿ ಕೃಷಿ ಚಟುವಟಿಕೆಯಿಂದ ಅನ್ನದಾತರು ದೂರ ಉಳಿದಿದ್ದರು. ಹಿಂಗಾರಿನಲ್ಲಿ ಬಿತ್ತನೆ ಮಾಡದ ರೈತರು ಮುಂಗಾರಿನಲ್ಲಿ ಬಿತ್ತನೆಗೆ ಅಣಿಯಾಗಿದ್ದಾರೆ. ಈಗಾಗಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿ ಜಮೀನು ಹದಗೊಳಿಸಿದ್ದಾರೆ. ಮುಂಗಾರಿನಲ್ಲಿ ಮಳೆಯಾಗುವ ನಿರೀಕ್ಷೆಯಲ್ಲಿ ದಿನಗಳು ಕಳೆಯುತ್ತಿದ್ದರೂ ಉತ್ತಮ ಮಳೆಯಾಗದೆ ನದಿ ದಂಡೆಯ ಮಣ್ಣೂರು, ಸೂಗೂರು, ರುದ್ರಪಾದ, ನಡವಿ,ದೊಡ್ಡರಾಜಕ್ಯಾಂಪ್, ಎಚ್. ವಿರಾಪುರ, ಚನ್ನಪಟ್ಟಣ, ಸೋಮಲಾಪುರ ರೈತರು ಬಿತ್ತನೆ ಮಾಡಲು ಭತ್ತದ ಸಸಿ ಮಡಿಗಳು ಹಾಕಿದ್ದು ಸದ್ಯ ತುಂಗಭದ್ರಾ ಜಲಶಾಯ ಕೂಡ ಭತ್ತಿ ಹೋಗಿದ್ದು ಭತ್ತದ ಸಸಿ ಮಡಿಗಳು ಎಲ್ಲಂದರಲ್ಲಿ ನೀರು ಇಲ್ಲದೆ ಬಿರುಕು ಬಿಟ್ಟು ಹೋದ ಪರಿಣಾಮ ಕೆಲ ರೈತರ ಸಸಿ ಮಡಿಗಳು ಜಾನುವಾರುಗಳ ಪಾಲಾಗಿವೆ. ಇನ್ನೂ ಹಲವು ರೈತರು ತಮ್ಮ ಸಸಿ ಮಡಿಗಳಿಗೆ ಹಳ್ಳ ಕೊಳ್ಳದ ಮತ್ತು ಬಸಿ ನೀರನ್ನು ಉಣಿಸಿ ತುಂಗಭದ್ರಾ ನದಿಗೆ ನೀರು ಬರುವ ತನ ಕಾಪಾಡುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ಈಗಾಗಲೇ ಪಟ್ಟಣದ ವ್ಯಾಪ್ತಿಯಲ್ಲಿ 28 ಸಾವಿರ ಎಕರೆ ಜಮೀನು ಇದ್ದು. ವಿವಿಧ ಕಡೆ ಅಲ್ಪ ಮಳೆಯಾದ ಕಾರಣ ಹೊರ ಭೂಮಿಗಳಲ್ಲಿ ಒಣ ಬೇಸಾಯದ ಪದ್ಧತಿ ಜೋರಾಗಿ ನಡೆಯುತ್ತಿದೆ.
ಬಿತ್ತನೆಯ ಗುರಿ: ಪ್ರಸಕ್ತ ಸಾಲಿನಲ್ಲಿ ಕೃಷಿ ಇಲಾಖೆಯಿಂದ ಮುಂಗಾರಿನಲ್ಲಿ ಸೂರ್ಯಕಾಂತಿ 470 ಹೆಕ್ಟೇರ್, ಭತ್ತ 30 ಹೆಕ್ಟೇರ್, ಮೆಕ್ಕೆಜೋಳ 30 ಹೆಕ್ಟೇರ್, ನವಣಿ 32 ಹೆಕ್ಟೇರ್, ಸಜ್ಜೆ 15 ಹೆಕ್ಟೇರ್, ತೋಗರಿ 20 ಹೆಕ್ಟೇರ್ ಸೇರಿದಂತೆ ದ್ವಿದಳ ಧಾನ್ಯಗಳನ್ನು ಬೆಳೆಯುವ ಗುರಿ ಕೃಷಿ ಇಲಾಖೆ ಹೊಂದಿದೆ.
ಮಾರಾಟವಾದ ಬೀಜಗಳು: ಮುಂಗಾರು ಹಂಗಾಮಿನಲ್ಲಿ ರೈತರಿಗೆ ತೊಂದರೆಯಾಗದಂತೆ ಕುರುಗೋಡು ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲು ಕೃಷಿ ಇಲಾಖೆ ಕ್ರಮ ಕೈಗೊಂಡಿದ್ದು ಭತ್ತ 380 ಕ್ವಿಂಟಲ್, ಮೆಕ್ಕೆಜೋಳ 1 ಕ್ವಿಂಟಲ್ 20 ಕೆಜಿ, ನವಣಿ 50 ಕೆಜಿ, ತೊಗರಿ 3 ಕ್ವಿಂಟಲ್, ಸೂರ್ಯಕಾಂತಿ 1 ಕ್ವಿಂಟಲ್ 10 ಕೆಜಿ ಬಿತ್ತನೆ ಬೀಜ ವಿತರಿಸಲಾಗಿದೆ. ಇನ್ನೂ ಬಿತ್ತನೆ ಬೀಜ ದಾಸ್ತಾನಿದ್ದು ಯಾವುದೇ ಕೊರತೆ ಉಂಟಾಗದಂತೆ ಮುಂಜಾಗ್ರತೆ ವಹಿಸಲಾಗಿದೆ.
ಮಳೆಯ ಪ್ರಮಾಣ ಕುಸಿದಿದ್ದರಿಂದ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜುಲೈ ಮತ್ತು ಆಗಸ್ಟ್ ನಲ್ಲಿ ಭತ್ತ ಬಿತ್ತನೆ ಆರಂಭವಾಗಬೇಕಿತ್ತು. ಅಲ್ಲಲ್ಲಿ ಅಲ್ಪ ಮಳೆಯಾದ ಹಿನ್ನೆಲೆ ಮೆಕ್ಕೆಜೋಳ ಉತ್ತಮ ರೀತಿಯಲ್ಲಿ ಬಿತ್ತನೆಯಾಗಿದೆ. ಶೀಘ್ರವೇ ಉತ್ತಮ ಮಳೆಯಾದರೆ ಇನ್ನೂ ಅನುಕೂಲ.
•ದೇವರಾಜ,
ಕೃಷಿ ಅಧಿಕಾರಿ, ಕುರುಗೋಡು
ನದಿ ದಂಡೆಯ ರೈತರು ಈಗಾಗಲೇ ಭತ್ತ ನಾಟಿ ಮಾಡಬೇಕಿತ್ತು. ಮಳೆರಾಯ ಕೈಕೊಟ್ಟ ಪರಿಣಾಮ ಮುಂಗಾರು ಬೆಳೆಗೆ ಮುಂದಾಗಿಲ್ಲ. ಅದರಲ್ಲಿ ನದಿಯಲ್ಲಿ ನೀರು ಇಲ್ಲದೆ ಖಾಲಿ ಅಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬರುತ್ತೆ ಎಂದು ತಿಳಿದು ಭತ್ತ ನಾಟಿ ಮಾಡಲು ಸಸಿ ಮಡಿಗಳನ್ನು ಹಾಕಿದ್ದು ಅದಕ್ಕೂ ನೀರಿಲ್ಲದೆ ಒಣಗಿ ಹೋಗಿದೆ. ಆದರೂ ಪ್ರತಿ ವರ್ಷ ರೈತರು ಸಮಸ್ಯೆಗೆ ಸಿಲುಕಬೇಕಾಗಿದೆ.
•ಮಂಜುನಾಥ,
ನದಿ ದಂಡೆಯ ಪ್ರಗತಿ ಪರ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.