ಸಮಸ್ಯೆಗಳ ಆಗರ ಸಿರಿಗೇರಿ ರೈತ ಕೇಂದ್ರ
ರೈತರಿಗೆ ಕೂಡಲು ಸುರಕ್ಷಿತ ಸ್ಥಳವಿಲ್ಲ•ಎಲ್ಲೆಂದರಲ್ಲಿ ಮದ್ಯ ಬಾಟಲಿಗಳ ದರ್ಶನ
Team Udayavani, Jul 3, 2019, 11:50 AM IST
ಕುರುಗೋಡು: ಸಮೀಪದ ಸಿರಿಗೇರಿಯ ರೈತ ಸಂಪರ್ಕ ಕೇಂದ್ರದ ಹೊರ ನೋಟ
•ಸುಧಾಕರ್ ಮಣ್ಣೂರು
ಕುರುಗೋಡು: ರೈತರಿಗೆ ಕುಳಿತುಕೊಳ್ಳಲು ಸುರಕ್ಷಿತವಾದ ಸ್ಥಳವಿಲ್ಲ. ಬಿತ್ತನೆ ಬೀಜಗಳನ್ನು ಖರೀದಿ ಮಾಡಲು ಬರುವುದಕ್ಕೆ ಸರಿಯಾಗಿ ದಾರಿ ವ್ಯವಸ್ಥೆ ಇಲ್ಲ. ಕಚೇರಿಯೂ ಪಾಳುಬಿದ್ದು ನಾರುತ್ತಿದ್ದು ಒಟ್ಟಾರೆ ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ ಕುರುಗೋಡು ಪಟ್ಟಣ ಸಮೀಪದ ಸಿರಿಗೇರಿಯ ರೈತ ಸಂಪರ್ಕ ಕೇಂದ್ರ.
ಹೌದು, ಸಿರಿಗೇರಿಯ ರೈತ ಸಂಪರ್ಕ ಕೇಂದ್ರಕ್ಕೆ ಸುತ್ತಮುತ್ತ ಹತ್ತಾರು ಹಳ್ಳಿಯ ರೈತರು ನವಣಿ, ಸಜ್ಜೆ, ತೊಗರಿ, ಸೂರ್ಯಕಾಂತಿ, ಜೋಳ ಸೇರಿದಂತೆ ವಿವಿಧ ರೀತಿಯ ಬೀಜಗಳನ್ನು ಪ್ರತಿ ವರ್ಷ ತೆಗೆದುಕೊಂಡು ಹೋಗುತ್ತಾರೆ. ಅದರೆ ಕೇಂದ್ರಕ್ಕೆ ಬರುವವರಿಗೆ ಸರಿಯಾದ ವ್ಯವಸ್ಥೆಯಿಲ್ಲ. ಕೇಂದ್ರದ ಸುತ್ತಮುತ್ತದ ಬೀದಿ ಬದಿ ವ್ಯಾಪಾರಸ್ಥರು ಕಸ ಕಡ್ಡಿಗಳನ್ನು ಕೇಂದ್ರದ ಅವರಣದಲ್ಲಿ ಸಂಗ್ರಹಿಸಿ ಅದನ್ನು ಸುಟ್ಟು ಹಾಕಿ ಹೋಗುತ್ತಿದ್ದರು ಅದನ್ನು ಪ್ರಶ್ನಿಸುವವರು ಇಲ್ಲದಂತಾಗಿದೆ.
ಕೇಂದ್ರದ ಮುಂಭಾಗದಲ್ಲಿ ವೈನ್ ಶಾಪ್ ಇದ್ದು ಸಂಜೆಯಾದರೆ ಮದ್ಯಪ್ರಿಯರ ಹಾವಳಿ ಕೇಂದ್ರದ ಅವರಣದಲ್ಲಿ ದೌಡಾಯಿಸಿ ಮದ್ಯ ಸೇವಿಸಿ ಎಲ್ಲೆಂದರಲ್ಲಿ ಬಾಟಲ್ಗಳು ಬಿಸಾಡಿ ಹೋಗುವುದು ಸರ್ವಸಮಾನ್ಯವಾಗಿದೆ. ಇನ್ನೂ ಕೇಂದ್ರದ ಹಿಂಭಾಗದಲ್ಲಿ ರಾಶಿಗಟ್ಟಲೇ ಮದ್ಯ ಬಾಟಲ್ಗಳು ಬಿದ್ದಿದ್ದು ಈ ಅಕ್ರಮ ಚಟುವಟಿಕೆಗೆ ಕೃಷಿ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂಬ ಪ್ರಶ್ನೆಗಳು ರೈತರಲ್ಲಿ ಕೇಳಿಬರುತ್ತಿವೆ.
ಕೇಂದ್ರಕ್ಕೆ ಸರಿಯಾಗಿ ಮುಖ್ಯ ಗೇಟ್ ಇಲ್ಲ: ರೈತ ಸಂಪರ್ಕ ಕೇಂದ್ರಕ್ಕೆ ಸರಿಯಾದ ಗೇಟ್ ವ್ಯವಸ್ಥೆ ಇಲ್ಲ. ಮುಂಭಾಗದ ಬೀದಿ ಬದಿ ವ್ಯಾಪಾರಸ್ಥರು, ಎಗ್‌ರೈಸ್, ಹೂಗಳ ಅಂಗಡಿ, ಕಿರಾಣಿ ಅಂಗಡಿ ಸೇರಿದಂತೆ ಇತರೆ ಅಂಗಡಿಗಳ ಅಡ್ಡೆಯಾಗಿದೆ. ಕೇಂದ್ರಕ್ಕೆ ಬರುವ ರೈತರಿಗೆ ಸರಿಯಾಗಿ ವ್ಯವಸ್ಥೆ ಇಲ್ಲದೆ ಕೇಂದ್ರದ ಮುಂದಿರುವ ತಡೆಗೋಡೆ ಮೇಲೆ ಕುಳಿತು ಅಧಿಕಾರಿಗಳನ್ನು ಕಾದು ಕೆಲಸಗಳನ್ನು ಮಾಡಿಕೊಂಡು ಹೋಗಬೇಕಾಗಿದೆ. ಕೆಲವೊಮ್ಮೆ ಬಾಗಿಲು ಮುಚ್ಚಿದ ಸಂದರ್ಭದಲ್ಲಿ ಮತ್ತು ಮುಂದೆ ಅಂಗಡಿಗಳು ಇರುವುದರಿಂದ ಗೊಂದಲಕ್ಕೀಡಾಗಿ ರೈತರು ವಾಪಸ್ಸು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಪಾಳು ಬಿದ್ದ ಕೊಠಡಿ: ಕೇಂದ್ರ ಬಹುದಿನಗಳ ಕೊಠಡಿಯಾಗಿದ್ದು ಅಲ್ಲಲ್ಲಿ ಕೇಂದ್ರದ ಮೇಲ್ಛಾವಣಿ ಶಿಥಿಲಗೊಂಡಿದೆ.ಅದರಲ್ಲಿ ಇರುವ ಬೀಜಗಳಿಗೆ ಹೆಗ್ಗಣಗಳ ಹಾವಳಿ ಜಾಸ್ತಿಯಾಗಿವೆ. ಈಗಾಗಲೇ ಸದ್ಯ ಇರುವ ಕೇಂದ್ರದ ಪಕ್ಕದಲ್ಲಿರುವ ಕೊಠಡಿಯಲ್ಲಿ ಸುಮಾರು ವರ್ಷಗಳ ಕಾಲ ಕಾರ್ಯನಿರ್ವಹಿಸಿ ರೈತರಿಗೆ ಅನುಕೂಲಪಡಿಸಿದ್ದರು. ಅದರಲ್ಲಿ ಹೆಗ್ಗಣಗಳ ಕಾಟದಿಂದ ಪಕ್ಕದ ಹಳೆಯ ನೀರಾವರಿ ಕೊಠಡಿಗೆ ಸ್ಥಳಾಂತರಗೊಂಡಿದ್ದರು. ಇದರಲ್ಲಿ ಕೂಡ ಸರಿಯಾಗಿ ವ್ಯವಸ್ಥೆ ಇಲ್ಲದಂತಾಗಿದ್ದು ಸದ್ಯ ಮದ್ಯಪ್ರಿಯರ ತಾಣವಾಗಿದೆ.
ಅನುಕೂಲವಾದಾಗ ಕಚೇರಿ ಒಪನ್: ವರ್ಷದಲ್ಲಿ 2-3 ತಿಂಗಳ ಕಾಲ ಮಾತ್ರ ಕೇಂದ್ರದ ಬಾಗಿಲು ತೆರೆಯುತ್ತದೆ. ಅದರಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ಸಮಯಕ್ಕೆ ಬಾಗಿಲು ತೆಗೆಯದೇ ತಮಗೆ ಅನುಕೂಲವಾದಾಗ ತೆಗೆಯುತ್ತಿದ್ದು ಇದರಿಂದ ದೂರದ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಬೀಜಗಳನ್ನು ಖರೀದಿ ಮಾಡುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.