ಪ್ರಯಾಣಕ್ಕಿಲ್ಲಿ ಡಕೋಟಾ ಬಸ್ಸೇ ಗತಿ!
ಉದ್ಘಾಟನೆಯಾಗಿ ವರ್ಷ ಕಳೆದರೂ ಕುರುಗೋಡು ಸಾರಿಗೆ ಘಟಕದ ಅಭಿವೃದ್ಧಿ ಮರೀಚಿಕೆ
Team Udayavani, Jun 8, 2019, 11:54 AM IST
ಕುರುಗೋಡು: ಸಾರಿಗೆ ಘಟಕದಲ್ಲಿರುವ ಡಕೋಟಾ ಬಸ್
ಸುಧಾಕರ ಮಣ್ಣೂರು
ಕುರುಗೋಡು: ಡಿಪೋ ಉದ್ಘಾಟನೆಯಾಗಿ ವರ್ಷವಾದರೂ ಡಕೋಟಾ ಬಸ್‌ನಲ್ಲಿ ಕೈ-ಮೈ ನೋಯಿಸಿಕೊಂಡು ಪ್ರಯಾಣಿಸುವುದು ಮಾತ್ರ ಜನರಿಗೆ ತಪ್ಪಿಲ್ಲ. ಪಟ್ಟಣದ ಜನರಿಗೆ ಹೊಸ ಬಸ್‌ಗಳ ನಿರೀಕ್ಷೆ ಹುಸಿಯಾಗಿದೆ. ಹೊಸ ಡಿಪೋ ಗುಜರಿಗೆ ಕಳಿಸುವ ಸಾð ್ಯ ಪ್ ಡಕೋಟಾ ಬಸ್‌ಗಳ ಉಗ್ರಾಣವಾಗಿದೆ.
ಘಟಕದಲ್ಲಿ ಮೂಲ ಸೌಲಭ್ಯಗಳ ಕೊರತೆ ಒಂದೆಡೆ, ಮೊತ್ತೂಂದೆಡೆ ಚಾಲಕರಿಗೆ ಎಲ್ಲೆಂದರಲ್ಲಿ ಕೈ ಕೊಡುವ ಡಕೋಟಾ ಬಸ್‌ನ್ನು ಭಯದಿಂದ ನಡೆಸುವ ಗಂಭೀರ ಸ್ಥಿತಿ ಎದುರಾಗಿದೆ. ಈ ಬಗ್ಗೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಕಾಳಜಿ ತೋರಿಲ್ಲ.
ಜನರ ನಿರೀಕ್ಷೆ ಹುಸಿ: ಒಂದು ವರ್ಷದ ಹಿಂದೆ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಾರಿಗೆ ಘಟಕವನ್ನು ಅಂದಿನ ಕಾಂಗ್ರೆಸ್ ಸರ್ಕಾರದ ರಾಜ್ಯ ಸಾರಿಗೆ ಸಚಿವ ಎಚ್ಎಂ.ರೇವಣ್ಣ ಉದ್ಘಾಟಿಸಿದ್ದರು. ಆಗ ಪಟ್ಟಣದ ಜನರಲ್ಲಿ ಡಕೋಟಾ ಬಸ್‌ಗಳ ಕಾಟ ತಪ್ಪಿ ಹೊಸ ಬಸ್‌ಗಳು ಬರುತ್ತವೆ. ಬಸ್‌ಗಳ ಸಂಖ್ಯೆ ಹೆಚ್ಚುತ್ತದೆ ಎಂಬ ಆಸೆ ಚಿಗುರಿತ್ತು. ಆದರೆ ಒಂದು ವರ್ಷ ಕಳೆದರೂ ಹೊಸ ಬಸ್‌ಗಳಿಲ್ಲದೆ ಅದೇ ಡಕೋಟಾ ಹಾಗೂ ಸಾð ್ಯಪ್ ಬಸ್‌ಗಳೇ ಗತಿ ಎಂಬಂತೆ ನಿರಾಶಾದಾಯಕದಿಂದ ಪ್ರಯಾಣಿಕರು ಮೈ-ಕೈ ನೋಯಿಸಿಕೊಂಡು ಬೇಸರದಿಂದಲೇ ಪ್ರಯಾಣಿಸುತ್ತಾರೆ.
ಡಕೋಟಾ ಬಸ್: ಡಿಪೋ ಸ್ಥಾಪನೆಯಾದಾಗಿನಿಂದ ಘಟಕದಲ್ಲಿ ಒಟ್ಟು 33ಬಸ್‌ಗಳು ಇದರಲ್ಲಿ 4 ಮಾತ್ರ ಹೊಸ ಬಸ್‌ಗಳು, ಬಿಟ್ಟರೆ ಉಳಿದ 29 ಡಕೋಟಾ ಬಸ್‌ಗಳೇ. ಇವುಗಳನ್ನು ನಿಷ್ಕ್ರಿಯ ಮಾಡಬೇಕು. ಆದರೆ ಹೊಸ ಬಸ್‌ಗಳ ಕೊರತೆಯಿಂದ ಮಿತಿ ಮೀರಿ ಓಡಿಸಲಾಗುತ್ತಿದೆ.
ಚಾಲಕರ ಭಯ: ಬಸ್‌ಗಳು ಎಷ್ಟೊಂದು ದುಸ್ಥಿತಿಗೆ ತಲುಪಿವೆ ಅಂದರೆ ವಾರದಲ್ಲಿ ಎರಡರಿಂದ ಮೂರು ಸಾರಿ ರಿಪೇರಿಗೆ ಬರುತ್ತವೆ. ಒಂದೊಂದು ಸಾರಿ ಬಸ್ ಸ್ಟಾರ್ಟ್ ಆಗದಿದ್ದಾಗ ಪ್ರಯಾಣಿಕರೇ ತಳ್ಳಬೇಕು. ಬಸ್ ಸೀಟ್ ಹರಿದು ಹೋಗಿವೆ. ಭಯದಿಂದ ಚಾಲನೆ ಮಾಡುವ ಸ್ಥಿತಿ ಎದುರಾಗಿದೆ. ಇಂಥ ನಾನಾ ಸಮಸ್ಯೆಗಳ ಬಗ್ಗೆ ಚಾಲಕರು ಅನೇಕ ಬಾರಿ ಮನವಿ ನೀಡಿದ್ದಾರೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪ ಚಾಲಕರಿಂದಲೇ ವ್ಯಕ್ತವಾಗಿದೆ.
ಸೌಲಭ್ಯ ಕೊರತೆ: ಘಟಕದಲ್ಲಿನ ಫ್ಲಾಟ್ ಫಾರಂಗೆ ಸಿಸಿ ಇಲ್ಲದೆ ಮಣ್ಣು ಹಾಕಲಾಗಿದ್ದು, ಬಸ್ ಬಂದರೆ ಧೂಳು ಎದ್ದು ತುಂಬಿಕೊಳ್ಳುತ್ತಿದೆ. ವಿಜಯಪುರ, ಬೀದರ್, ಕಲಬುರಗಿ, ಹುಬ್ಬಳ್ಳಿ ಹಾಗೂ ಇನ್ನಿತರ ದೂರದ ಜಿಲ್ಲೆಗಳಿಂದ ಬಂದು ಕಾರ್ಯ ನಿರ್ವಹಿಸುವ 100ಕ್ಕಿಂತ ಹೆಚ್ಚಿನ ಸಿಬ್ಬಂದಿಗೆ ಮಲಗಲು, ವಿಶ್ರಾಂತಿಗೆ ಕೊಠಡಿಗಳಿಲ್ಲ. ಶುದ್ಧ ಕುಡಿಯುವ ನೀರಿಲ್ಲ, ಶೌಚಾಲಯ ಇದ್ದರೂ ಇಲ್ಲದಂತೆ, ಬಿಸಿ ನೀರಿಗಾಗಿ ಸೋಲಾರ್ ಇದೆ. ಆದರೆ ಅದು ಸರಿಯಾಗಿ ಕೆಲಸ ಮಾಡಲ್ಲ.
ಪಟ್ಟಣದಲ್ಲಿ ಡಕೋಟಾ ಬಸ್‌ಗಳನ್ನು ಓಡಿಸುತ್ತಿದ್ದು, ಪ್ರಯಾಣಿಕರ ಜೀವದ ಜತೆ ಚೆಲ್ಲಾಟ ಆಡದೆ, ಹಳೆ ಬಸ್‌ಗಳನ್ನು ಸ್ಥಗಿತಗೊಳಿಸಿ ಹೊಸ ಬಸ್‌ಗಳನ್ನು ನೀಡಿ ಪ್ರಯಾಣಿಕರ ಸುರಕ್ಷತೆ ಹಾಗೂ ಸುಖಕರ ಪ್ರಯಾಣಕ್ಕೆ ಮುಂದಾಗಬೇಕು. ಸಾರಿಗೆ ಇಲಾಖೆ ಇಲ್ಲದಿದ್ದರೆ ಡಿಪೋ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
•ಎಚ್.ಎಂ.ವಿಶ್ವನಾಥಸ್ವಾಮಿ,
ಅಧ್ಯಕ್ಷರು, ಬೀದಿ ಬದಿ ವ್ಯಾಪಾರಿಗಳ ಸಂಘ.
ನಾನು ಹೊಸದಾಗಿ ಬಂದಿದ್ದೀನಿ. ಘಟಕದಲ್ಲಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಪರಿಹರಿಸುತ್ತೇನೆ. ಹೊಸ ಬಸ್‌ಗಳ ಅವಶ್ಯಕತೆವಿದೆ ಅಂತಾ ಮೇಲಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಬಸ್‌ಗಳ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ಮಾಡುತ್ತೇನೆ. ಫ್ಲಾಟ್ ಫಾರಂಗೆ ಸಿಸಿಗಾಗಿ ಅನುದಾನ ಬಿಡುಗಡೆಯಾಗಿದೆ ಬೇಗನೇ ಕಾರ್ಯ ಪ್ರಾರಂಭಿಸಲಾಗುವುದು.
•ಕೆ.ಎಂ.ತಿರುಮಲೇಶ್,
ಡಿಪೋ ವ್ಯವಸ್ಥಾಪಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.